ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಸಾಪ ವಲಯಾಧ್ಯಕ್ಷ ಎ.ಆರ್.ಅನಿಲ್ ಬಾಬು ಮಾತನಾಡಿ, ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ ರವರು ಕಡುಬಡತನದಿಂದ ಬೆಳೆದು ಬಂದ ಶ್ರೇಷ್ಠ ಸಾಹಿತಿಗಳಾದರು. ಅವರ ಕಾದಂಬರಿಗಳು 40 ಭಾಷೆಗಳಲ್ಲಿ ಭಾಷಾಂತರಗೊಂಡಿರುವುದು ಕನ್ನಡ ಸಾರಶ್ವತ ಲೋಕಕ್ಕೆ ಶಾಶ್ವತ ಹೆಮ್ಮೆಯ ಹೆಜ್ಜೆ. ಪ್ರತಿಯೊಂದು ಕಾದಂಬರಿಯೂ ಮರುಮುದ್ರಣ ಗೊಂಡಿರುವುದು ಅಚ್ಚರಿಯ ಸಂಗತಿ. ಯಾವುದೇ ಮುಲಾಜಿಲ್ಲದೆ ನೇರ ಮತ್ತು ಸ್ಪಷ್ಟ ಮಾತುಗಾರಿಕೆಯಲ್ಲಿ ಭೈರಪ್ಪ ರವರ ಎದೆಗಾರಿಕೆ ಮೆಚ್ಚುವಂಥದ್ದು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸರ್ವೋದಯ ಅಲೆಯನ್ಸ್ ಸಂಸ್ಥೆ ಕಾರ್ಯದರ್ಶಿ ಎ.ಎಸ್.ಕಿಶೋರ್, ಪದಾಧಿಕಾರಿಗಳಾದ ಟಿ.ಎಚ್.ಶಿವಕುಮಾರ್, ಗ್ರಾಪಂ ಅಧ್ಯಕ್ಷ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಎ.ಸೋಮಶೇಖರ್, ನಿವೃತ್ತ ಶಿಕ್ಷಕ ಎ.ಎಚ್.ಚನ್ನೇಗೌಡ, ಗ್ರಾಮಸ್ಥರಾದ ಎ.ಎಸ್.ಅಭಿಷೇಕ್, ಎಂ.ಬಿ.ಅನಂತಯ್ಯ, ಎ.ಎಂ.ಜಗದೀಶ್, ಎ.ಎಂ.ನಟರಾಜ್, ಎ.ಬಿ.ಕಶ್ಯಪ್, ಎ.ಎಸ್.ನಾಗೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.ಇದೇ ವೇಳೆ ವಕೀಲರಾದ ಶಿವಶಂಕ, ಕುಮಾರಿ ನಿರಂತನ ಎ.ಕೆ ಅರಕೆರೆ ಗ್ರಾಪಂನ ಪೌರಕಾರ್ಮಿಕರು ಮತ್ತು ನೀರು ಗಂಟಿಗಳನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ-ಶಾಸ್ತ್ರೀ ಜಯಂತಿಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಸಾಧನೆ ಆದರ್ಶವಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿ, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜೀವನದ ಸಂದೇಶ ಹಾಗೂ ಹೋರಾಟಗಳನ್ನು ನೆನೆದು ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಗಬೇಕು ಎಂದು ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ‍್ಯ ದೊರಕಿಸಲು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟ, ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ, ಉಮ್ಮಡಹಳ್ಳಿ ನಾಗೇಶ್, ಬಸರಾಳು ಶ್ರೀಕಂಠಯ್ಯ, ಕಿರಣ್ ಕುಮಾರ್, ಕನ್ನಲಿ ಚನ್ನಪ್ಪ, ಯಶೋದಾ ಇತರರಿದ್ದರು.