ಪ್ರವಚನ ಶ್ರವಣದಿಂದ ಅಧ್ಯಾತ್ಮ ಜ್ಞಾನ ವೃದ್ಧಿ: ಗುರುಪಾದ ಶ್ರೀಗಳು

KannadaprabhaNewsNetwork |  
Published : Oct 03, 2025, 01:07 AM IST
ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ಗುರುಪಾದ ಶ್ರೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಒತ್ತಡ ಜೀವನದಿಂದ ಮುಕ್ತಿ ಪಡೆಯಬೇಕೆಂದರೆ ಆಧ್ಯಾತ್ಮಿಕ ಪ್ರವಚನ, ಪುರಾಣ ಶ್ರವಣ ಮಾಡಬೇಕು.

ನರಗುಂದ: ಹಿಂದು ಧರ್ಮದಲ್ಲಿ ಹಲವಾರು ಸಾಧು- ಸಂತರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಪ್ರವಚನಗಳ ಶ್ರವಣದಿಂದ ಅಂಥ ಮಹನೀಯರ ಸಾಧನೆ ಅರಿಯಲು ಸಾಧ್ಯ. ಜತೆಗೆ ಅಧ್ಯಾತ್ಮ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ರೋಣದ ಗುಲಗಂಜಿ ಮಠದ ಗುರುಪಾದ ಶ್ರೀಗಳು ತಿಳಿಸಿದರು.

ಪಟ್ಟಣದ ಸೋಮಾಪುರ ಬಡಾವಣೆಯ ನಾಗಲಿಂಗ ನಿಲಯದಲ್ಲಿ ನಡೆಯುತ್ತಿರುವ 99ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ದೇವಿಯ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಮಾಜವು ಆಧುನಿಕವಾಗಿ ಎಷ್ಟೆ ಮುಂದವರಿದರೂ ಒತ್ತಡದಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿಯಿದೆ. ಒತ್ತಡ ಜೀವನದಿಂದ ಮುಕ್ತಿ ಪಡೆಯಬೇಕೆಂದರೆ ಆಧ್ಯಾತ್ಮಿಕ ಪ್ರವಚನ, ಪುರಾಣ ಶ್ರವಣ ಮಾಡಬೇಕು ಎಂದರು.

ಕಳೆದ 99 ವರ್ಷಗಳಿಂದ ಪಟ್ಟಣದ ಪತ್ತಾರ ಅವರ ಕುಟುಂಬವು ಶ್ರೀದೇವಿ ಪುರಾಣ ನಡೆಸಿಕೊಂಡು ಬಂದಿರುವುದು ಸಮಾಜಕ್ಕೆ ದೊಡ್ಡ ಕೊಡುಗೆ. ಮುಂದಿನ ವರ್ಷ 100ನೇ ವರ್ಷದ ಪುರಾಣವನ್ನು ಅದ್ಧೂರಿ ಆಚರಣೆಗೆ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ರುದ್ರೇಶ್ವರ ಮಠದ ಸೋಲಬಯ್ಯ ಶ್ರೀಗಳು, ಹುಬ್ಬಳ್ಳಿಯ ವೇ.ಮೂ. ಗುರುನಾಥಾಚಾರ್ಯ, ಶಂಕರಾಚಾರ್ಯ, ಸೋಮಾಚಾರ್ಯ, ಕಗಧಾಳದ ಹನುಮಾರೂಢ ಶ್ರೀಗಳು, ಪ್ರವೀಣ ಯಾವಗಲ್, ರಾಮಚಂದ್ರ ಬಡಿಗೇರ, ಪುರಾಣಿಕರಾದ ಮೌನೇಶ ಜಯದೇವ ಪತ್ತಾರ, ಶ್ರೀನಿವಾಸ ಇನಾಂದಾರ, ಎಸ್.ಐ. ಅಂಕಲಿ, ಮಂಜು ಮೆಣಸಗಿ, ಪುರಸಭೆ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ರಾಚನಗೌಡ ಪಾಟೀಲ, ವಾಸುರಡ್ಡಿ ಹೆಬ್ಬಾಳ, ವಿಠ್ಠಲ ಹಡಗಲಿ, ಮಹೇಶ ಬಡಿಗೇರ, ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ಬಸನಗೌಡ ಪಾಟೀಲ, ಈಶ್ವರ ಪತ್ತಾರ, ಚಂದ್ರಕಾಂತ ಇನಾಂದಾರ, ಸಾಗರ ಬಡಿಗೇರ, ಶ್ರೇಯಾ ಪತ್ತಾರ ಹಾಗೂ ಯಶೋದಾ ವಡ್ಡರ, ರಾಜು ಆಚಾರ್ಯ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ