ಮಾನಸಿಕ ನೆಮ್ಮದಿಗೆ ಅಧ್ಯಾತ್ಮ ಅವಶ್ಯ: ಶಾಂತಲಿಂಗ ಶ್ರೀಗಳು

KannadaprabhaNewsNetwork |  
Published : Dec 25, 2025, 02:45 AM IST
ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಚರಿತಾಮೃತ ಪುರಾಣ ಪ್ರವಚನ ಕಾರ್ಯಕ್ರಮವನ್ನು ಶಾಂತಲಿಂಗ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ನರಗುಂದ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಚರಿತಾಮೃತ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ಚಾಲನೆ ನೀಡಿದರು.

ನರಗುಂದ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮನುಷ್ಯನಲ್ಲಿ ಆತ್ಮದ ಅರಿವಿನ ಕೊರತೆ ಇದೆ. ಮಾನವನ ಮನಸ್ಸು ಪರಿವರ್ತನೆಯಾಗಲು ಆಧ್ಯಾತ್ಮಿಕ ಶಕ್ತಿ ಅವಶ್ಯ ಎಂದು ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ತಿಳಿಸಿದರು.

ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಚರಿತಾಮೃತ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಮನುಷ್ಯ ಒತ್ತಡದ ಮಧ್ಯೆ ಬದುಕುತ್ತಿದ್ದಾನೆ. ಇದರಿಂದ ಮನುಷ್ಯನಿಗೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಆದ್ದರಿಂದ ಮನುಷ್ಯ ಒತ್ತಡ ಜೀವನದಿಂದ ಹೊರಬರಬೇಕೆಂದರೆ ಆಧ್ಯಾತ್ಮಿಕ ಕಡೆ ಸಮಯ ನೀಡಿ ಧ್ಯಾನ, ಯೋಗ ಮಾಡಬೇಕು. ಪುರಾಣ ಮತ್ತು ಪ್ರವಚನ ಆಲಿಸಬೇಕು ಎಂದರು.

ಪುರಾಣ ಪ್ರವಚನಕಾರ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿ, ಮನುಷ್ಯ ನಾನು, ನನ್ನದು, ನನ್ನಿಂದಲೆ ಎಂಬ ಅಹಂಭಾವ ತೊರೆದು ಬಸವಣ್ಣನವರು ಹೇಳಿದ ಹಾಗೇ ನಿತ್ಯ ಜೀವನದಲ್ಲಿ ಸತ್ಯ ಶುದ್ಧ ಕಾಯಕದಲ್ಲಿ ತೊಡಗಬೇಕು. ಅಂದಾಗ ಪ್ರಗತಿ, ಯಶಸ್ಸು ಸಾಧ್ಯ ಎಂದರು.ಪುರಾಣ ಪ್ರವಚನದಲ್ಲಿ ಈಶ್ವರಯ್ಯ ಬಳಗಾನೂರಮಠ, ಗುರುಪಾದಪ್ಪ ಭಜಂತ್ರಿ, ಮಲ್ಲಪ್ಪ ಚಿಕ್ಕನರಗುಂದ, ಬಸವರಾಜ ಕುಪ್ಪಸ್ತ, ಸಂಗೀತ ಸೇವೆ ನೀಡಿದರು. ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ರವೀಂದ್ರ ಹಿರೇಮಠ, ಉಪಾಧ್ಯಕ್ಷ ದ್ಯಾಮಣ್ಣ ತೆಗ್ಗಿ, ಕಾರ್ಯದರ್ಶಿ ಚಂದ್ರಶೇಖರ ಸೊಬರದ, ಸಹ ಕಾರ್ಯದರ್ಶಿ ಸತೀಶ ಚಿಕ್ಕನರಗುಂದ, ದಾಸೋಹ ಸಮಿತಿ ಅಧ್ಯಕ್ಷ ಯಮನಪ್ಪ ಕಾಡಪ್ಪನವರ, ಉತ್ಸವ ಸಮಿತಿ ಅಧ್ಯಕ್ಷ ಈರಪ್ಪ ಕರಕಿಕಟ್ಟಿ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ರಂಜಾನಸಾಬ್ ನದಾಫ, ದ್ಯಾಮಣ್ಣ ಕಾಡಪ್ಪನವರ, ಶಿವಶರಣಗೌಡ ತಿರಕನಗೌಡ್ರ, ಪ್ರಕಾಶಗೌಡ್ರ ತಿರಕನಗೌಡ, ಸಂಗಣ್ಣ ಕಿತ್ತಲಿ, ಜಂಬನ್ನ ದಿಂಡಿ, ಮಂಜು ಕವಡಿಮಟ್ಟಿ, ಕಳಕಪ್ಪ ಕವಡಿಮಟ್ಟಿ, ಗಂಗಯ್ಯ ವಸ್ತ್ರದ, ಮುತ್ತಪ್ಪ ಜೊರ್ಲ, ಗೂಡುಸಾಬ್‌ ಯಲಿಗಾರ, ಬಸವರಾಜ ಗಡ್ಡಿ, ಶಿದ್ದಪ್ಪ ಸುರೇಬಾನ, ಯಂಕಪ್ಪ ಶಾಂತಗೇರಿ ಇದ್ದರು. ಶರಣ ಬಾಪುಗೌಡ್ರ ತಿಮ್ಮನಗೌಡ್ರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಪೊನ್ನಣ್ಣರಿಗೆ ‘ಯುಕೊ’ ಅಭಿನಂದನೆ
ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟನೆ