ಕನ್ನಡಪ್ರಭ ವಾರ್ತೆ ಅಮೀನಗಡ
ಸಮೀಪದ ಚಿತ್ತರಗಿ ಗ್ರಾಮದಲ್ಲಿ ಜರುಗಿದ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಮಠಮಾನ್ಯಗಳು, ಪುರಾಣ ಪ್ರವಚನಗಳನ್ನು ಹಮ್ಮಿಕೊಳ್ಳುವ ಮೂಲಕ, ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ ಧರ್ಮಜಾಗೃತಿ ಮಾಡುತ್ತಿವೆ. ವೀರಶೈವ ಲಿಂಗಾಯತ ಮಠಗಳು ಕಾಯಕ ದಾಸೋಹಕ್ಕೆ ಹೆಚ್ಚು ಒತ್ತು ನೀಡಿವೆ. ಶೈಕ್ಷಣಿಕ ಪ್ರಗತಿ ಸಾಧಿಸಿವೆ ಎಂದರು.
ಜನತೆಯಲ್ಲಿ ಧಾರ್ಮಿಕ, ಶೈಕ್ಷಣಿಕ ಜಾಗೃತಿ ಮೂಡಿಸುವಲ್ಲಿ ಚಿತ್ತರಗಿ ಶ್ರೀಮಠ ಉನ್ನತ ಸ್ಥಾನದಲ್ಲಿದೆ ಎಂದ ಅವರು, ಪುರಾಣ ಪ್ರವಚನ ಆಲಿಸುವುದರಿಂದ ಮನಸಿಗೆ, ಶಾಂತಿ, ನೆಮ್ಮದಿ ಜತೆಗೆ ಧಾರ್ಮಿಕ ಪ್ರಜ್ಞೆ ಹೆಚ್ಚುತ್ತದೆ. 12ನೇ ಶತಮಾನದಲ್ಲಿ ನಡೆಸಿದ ಸಾಮಾಜಿಕ ಆಂದೋಲನಗಳು ನವಮನ್ವಂತರಕ್ಕೆ ನಾಂದಿ ಹಾಡಿವೆ ಎಂದರು.ಡಾ.ಮಹಾಂತೇಶ ಕಡಪಟ್ಟಿ, ವೀರಭದ್ರಸ್ವಾಮಿಗಳು ಮಾತನಾಡಿದರು. ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿರೂರಿನ ಡಾ.ಬಸವಲಿಂಗಶ್ರೀ, ಹಡಗಲಿಯ ರುದ್ರಮುನಿ ಶಿವಾಚಾರ್ಯ ಶ್ರೀ, ಶೇಖರಗೌಡ ಗೌಡರ್ ಮಾತನಾಡಿದರು. ಇದೇ ಸಂಧರ್ಭದಲ್ಲಿ ಹಿರಿಯ ಲೇಖಕ ಶೇಖರ್‌ಗೌಡ ಎಸ್.ಗೌಡರವರು ರಚಿಸಿದ ಮಹಾಂತ ಜೋಳಿಗೆಯ ಕೈಪಿಡಿ ಭಾಗ-3 ಕೃತಿ ಬಿಡುಗಡೆಯಾಯಿತು. ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ನಿಂಗಣ್ಣ ಬಸಪ್ಪ ಬಾಲರೆಡ್ಡಿ, ಸಂಗಣ್ಣ ಬಾಲರೆಡ್ಡಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಬಸವನಗೌಡ ಬೇವೂರ ಸ್ವಾಗತಿಸಿದರು. ಸಂಗಣ್ಣ ನಿಂಗನಗೌಡ್ರ ನಿರೂಪಿಸಿದರು.