ಕ್ರೀಡೆಗಳು ಪ್ರೀತಿ ವಿಶ್ವಾಸಗಳನ್ನು ಬೆಸೆಯುವ ಸಂಕೇತ

KannadaprabhaNewsNetwork |  
Published : Nov 09, 2025, 02:45 AM IST
ಫೊಟೋ : 8ಎಚ್‌ಎನ್‌ಎಲ್2 | Kannada Prabha

ಸಾರಾಂಶ

ಕ್ರೀಡೆಗಳು ಪ್ರೀತಿ ವಿಶ್ವಾಸಗಳನ್ನು ಬೆಸೆಯುವ ಸಂಕೇತಗಳೆ ಹೊರತು ದ್ವೇಷವನ್ನಲ್ಲ. ಪ್ರೀತಿ ವಿಶ್ವಾಸದಿಂದ ಆಟವಾಡುವ ಮೂಲಕ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಕರೆ ನೀಡಿದರು.

ಹಾನಗಲ್ಲ: ಕ್ರೀಡೆಗಳು ಪ್ರೀತಿ ವಿಶ್ವಾಸಗಳನ್ನು ಬೆಸೆಯುವ ಸಂಕೇತಗಳೆ ಹೊರತು ದ್ವೇಷವನ್ನಲ್ಲ. ಪ್ರೀತಿ ವಿಶ್ವಾಸದಿಂದ ಆಟವಾಡುವ ಮೂಲಕ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಕರೆ ನೀಡಿದರು.ಶುಕ್ರವಾರ ಜಿಲ್ಲಾ ಪಂಚಾಯತ್ ಹಾವೇರಿ, ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಹಾನಗಲ್ಲಿನಲ್ಲಿ ನಡೆದ 2025-26ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ (14-17 ವಯೋಮಾನದ) ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಕ್ರೀಡಾ ಜ್ಯೋತಿ ಸ್ವಾಗತಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕವಾದಂತ ಆಟಗಳು ಮೈ ಮನಸ್ಸನ್ನು ಸದೃಢಗೊಳಿಸುವ ಜೊತೆಗೆ ಜೀವಿತಾವಧಿವರೆಗೂ ಹುರುಪು ಚೈತನ್ಯವನ್ನು ತರುತ್ತದೆ. ಸದೃಢ ಮಾನಸಿಕ ಸ್ಥಿರತೆ ಹಾಗೂ ಸದೃಢ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ. ಕ್ರೀಡಾ ಸ್ಫೂರ್ತಿಯನ್ನು ಬೆಳೆಸಲು ಕ್ರೀಡಾಕೂಟಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರೇರೇಪಿಸುವ ಅಗತ್ಯವಿದೆ. ತಾಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಸರು ತರುವಂತ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಎಂದು ಕ್ರೀಡಾಪಟುಗಳಿಗೆ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಹಿರೇಮಠ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ತಾಲೂಕಿನಿಂದ ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡುವ ಮೂಲಕ ತಾಲೂಕಿನ ಹೆಸರು ತರುವಂತ ಕ್ರೀಡಾಪಟುಗಳನ್ನು ತಯಾರು ಮಾಡಲು ಪಾರದರ್ಶಕ ನಿರ್ಣಯವನ್ನು ನೀಡಬೇಕು ಎಂದು ನಿರ್ಣಾಯಕರಿಗೆ ಕಿವಿ ಮಾತು ಹೇಳಿದರು.ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ, ಬಸವರಾಜ ಕಡೆಪ್ಯಾಟಿ, ಪ್ರಕಾಶ ಚೌವ್ಹಾಣ, ನಾಗರಾಜ ಮುಶ್ಯಪ್ಪನವರ, ಸಂತೋಷ ದೊಡ್ಡಮನಿ, ವಿನಾಯಕ ಕಳಸೂರ, ವಿ.ಟಿ. ಪಾಟೀಲ, ಬಿ.ಎನ್. ಸಂಗೂರ, ಗೌರಮ್ಮ ಕೊಂಡೋಜಿ, ಬಿ.ಎಂ. ದಿಡಗೂರ, ಗಿರೀಶ ನೆಲ್ಲಿಕೊಪ್ಪ, ಪಾಂಡುರಂಗ ನಾಗೋಜಿ, ಜಗದೀಶ ಮಡಿವಾಳರ, ಪಂಚಾಕ್ಷರಿ ಮೊದಲಾದವರು ಕಾರ್ಯಕ್ರಮದಲ್ಲಿದ್ದರು. ಇದೇ ಸಂದರ್ಭದಲ್ಲಿ ವಾಲಿಬಾಲ್ ಪಂದ್ಯದಲ್ಲಿ ಬೆಳಗಾವಿ ವಿಭಾಗದಲ್ಲಿ ವಿಜಯಶಾಲಿಗಳಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿನ ಕೀರ್ತಿ ತಂದ ಬಾಳೂರು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಮಹ್ಮದ ಯಾಸೀಮ ಅಂಚಿ, ತೌಸಿಫಅಹ್ಮದ ಹಂಚಿ, ಫೈಜಲ್ ರಜಾಕ ಬಂಕಾಪೂರ, ಮುಫೀಜಅಹ್ಮದ ಕಾಸಂಬಿ, ಜಕರುಲ್ಲಾ ಅಂಚಿ ಹಾಗೂ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕ ಗಿರೀಶ ನೆಲ್ಲಿಕೊಪ್ಪ, ಮುಖ್ಯ ಶಿಕ್ಷಕ ಜಿಲಾನಿ ಕಡಕೋಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ