ಕನ್ನಡಪ್ರಭ ವಾರ್ತೆ ಬೆಳಗಾವಿ 2025ನೇ ಸಾಲಿನ ಬೆಳಗಾವಿ ಉತ್ತರ ವಲಯ ಮಟ್ಟದ ಗೃಹ ರಕ್ಷಕರ ವಾರ್ಷಿಕ ವೃತ್ತಿಪರ ಮತ್ತು ಕ್ರೀಡಾಕೂಟ ನ.11 ರಿಂದ ನ.13ರವರೆಗೆ ಜಿಲ್ಲೆಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದವು.ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ ಗುಳೇದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಿಷ್ಕಾಮ ಸೇವಾ ತತ್ವದಡಿಯಲ್ಲಿ ಜಿಲ್ಲೆಯ ಗೃಹರಕ್ಷಕರು ಪೊಲೀಸ್ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಉತ್ತಮ ಕೆಲಸ ನಿರ್ವಹಿಸುತ್ತಿರುವ ಗೃಹರಕ್ಷಕರು ಆರೋಗ್ಯದಿಂದರಲು ಕ್ರೀಡೆಗಳು ಮುಖ್ಯವಾಗಿವೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
2025ನೇ ಸಾಲಿನ ಬೆಳಗಾವಿ ಉತ್ತರ ವಲಯ ಮಟ್ಟದ ಗೃಹ ರಕ್ಷಕರ ವಾರ್ಷಿಕ ವೃತ್ತಿಪರ ಮತ್ತು ಕ್ರೀಡಾಕೂಟ ನ.11 ರಿಂದ ನ.13ರವರೆಗೆ ಜಿಲ್ಲೆಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದವು.ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾ ಶಂಕರ ಗುಳೇದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಿಷ್ಕಾಮ ಸೇವಾ ತತ್ವದಡಿಯಲ್ಲಿ ಜಿಲ್ಲೆಯ ಗೃಹರಕ್ಷಕರು ಪೊಲೀಸ್ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಉತ್ತಮ ಕೆಲಸ ನಿರ್ವಹಿಸುತ್ತಿರುವ ಗೃಹರಕ್ಷಕರು ಆರೋಗ್ಯದಿಂದರಲು ಕ್ರೀಡೆಗಳು ಮುಖ್ಯವಾಗಿವೆ. ವಲಯ ಮಟ್ಟದ ಕ್ರೀಡಾಕೂಟಕ್ಕೆ ವೈಯಕ್ತಿಕವಾಗಿ ₹ 25 ಸಾವಿರ ಸಹಾಯಧನ ಮೊತ್ತವನ್ನು ಜಿಲ್ಲಾ ಸಮಾದೇಷ್ಟರಿಗೆ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು.
ವಲಯ ಮಟ್ಟದ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೊರಸೆ ಮಾತನಾಡಿ, ವಲಯ ಮಟ್ಟದಲ್ಲಿ ವಿಜೇತರಾದ ಗೃಹರಕ್ಷಕರಿಗೆ ಬಹುಮಾನ ವಿತರಿಸಿ, ಗೃಹರಕ್ಷಕರು ಸಮಾಜದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಎಲ್ಲರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಗೃಹರಕ್ಷಕರಿಗೆ ಹೆಚ್ಚಿನ ಸೌಲಭ್ಯ ದೊರೆಯುವಂತಾಗಲಿ ಎಂದು ಹಾರೈಸಿದರು.
ಬೆಳಗಾವಿ ಗೃಹರಕ್ಷಕದಳದ ಕಮಾಂಡೆಂಟ್ ಚನ್ನಪ್ಪ ಅಥಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಉಪ ಸಮಾದೇಷ್ಟರಾದ ಬಾಬಾಸಾಹೇಬ ಕಾಂಬಳೆ, ಜೆ.ಹೆಚ್. ದೊಡಮನಿ, ನಿವೃತ್ತ ಉಪ ಸಮಾದೇಷ್ಟರಾದ ಚಂದ್ರಶೇಖರ ಭಡಕಲ್ ಮತ್ತು ರಾಜು ಖಾಸಬಾಗ, ಸಿಬ್ಬಂದಿ ರವೀಂದ್ರ ಮಾಳಗಿ, ಅಹ್ಮದ ಸಾಹುಕಾರ, ಕಿರಣ ಕಟಗಿ, ಆನಂದ ನಾವಲಗಿ, ಲಕ್ಷ್ಮೀ ಜಂಗನವರ, ಭಾಗ್ಯಶ್ರೀ ರುಮೋಜಿ, ಬಸವರಾಜ ಹಗೇದಾಳ ಸೇರಿ ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಮತ್ತು ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಮತ್ತು ವಿಜಯಪುರ ಜಿಲ್ಲೆಯ ಗೃಹರಕ್ಷಕರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.