ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆ ಅವಶ್ಯಕ

KannadaprabhaNewsNetwork |  
Published : Jul 30, 2024, 12:34 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಡಿಪಿಇಪಿ ಸರಕಾರಿ ಪ್ರಾಥಮಿಕ ಶಾಲಾ ವತಿಯಿಂದ ವಲಯ ಮಟ್ಟದ ಕ್ರೀಡಾ ಕೂಟ ಉದ್ಘಾಟಿಸಿದ ಗ್ರಾಪಂ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ, ಎಸ್‌ಡಿಎಮ್‌ಸಿ ಅಧ್ಯಕ್ಷ ಗೌಸಿದ್ಧಪ್ಪ ಹಾದಿಮನಿ.ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಡಿಪಿಇಪಿ ಸರಕಾರಿ ಪ್ರಾಥಮಿಕ ಶಾಲಾ ವತಿಯಿಂದ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಮಾಜಿ ಸೈನಿಕರಿಂದ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಕ್ಕಳ ಆಸಕ್ತಿ ಗುರುತಿಸಿ ಪಾಲಕರು ಕ್ರೀಡಾ ಶಿಕ್ಷಕರು ಅವರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು

ಡಂಬಳ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯಕ ಎಂದು ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಹೇಳಿದರು.

ಡಂಬಳ ಗ್ರಾಮದ ಡಿಪಿಇಪಿ ಸರ್ಕಾರಿ ಪ್ರಾಥಮಿಕ ಶಾಲಾ ವತಿಯಿಂದ ಜರುಗಿದ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಗೌಸಿದ್ಧಪ್ಪ ಹಾದಿಮನಿ ಮಾತನಾಡಿ, ಮಕ್ಕಳ ಆಸಕ್ತಿ ಗುರುತಿಸಿ ಪಾಲಕರು ಕ್ರೀಡಾ ಶಿಕ್ಷಕರು ಅವರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ಮಕ್ಕಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಹೇಳಿದರು.

ಬಾಲಕರ ಗುಂಪು ಆಟಗಳಾದ ಖೋ ಖೋ, ಥ್ರೋ ಬಾಲ್, ವಾಲಿಬಾಲ್, ಕಬಡ್ಡಿಯಲ್ಲಿ ಎಂಸಿಎಸ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ಬಾಲಕಿಯರ ಗುಂಪು ಆಟದಲ್ಲಿ ಥ್ರೋಬಾಲ್, ಕಬಡ್ಡಿ ಕೆಜಿಎಸ್ ಶಾಲೆ, ಖೋ ಖೋ ಕೆಜಿಬಿವಿ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದರು.

100 ಮೀ ಓಟದಲ್ಲಿ ಮಂಜುನಾಥ ಬೆನಾಳ(ಡಿಪಿಇಪಿ) ಪ್ರಥಮ, ಸೂರಜ ಲಮಾಣಿ (ಎಂಸಿಎಸ್) ದ್ವೀತಿಯ, 200ಮೀ ಓಟದಲ್ಲಿ ಅನಿಲರಾಜೂರ (ಡಿಪಿಇಪಿ)ಪ್ರಥಮ, ಪಾಂಡುರಂಗ ಆದಮ್ಮನವರ (ಡಿಪಿಇಪಿ) ದ್ವೀತಿಯ, 400ಮೀ ಓಟದಲ್ಲಿ ಯಲ್ಲಪ್ಪ ಕದಡಿ(ಡಿಪಿಇಪಿ)ಪ್ರಥಮ, ಅಭಿಷೇಕ ಬಂಡಿ (ಎಂಸಿಎಸ್), 80ಮೀ ಅಡೆತಡೆ ಓಟದಲ್ಲಿ ಸೂರಜ ಲಮಾಣಿ (ಎಂಸಿಎಸ್) ಪ್ರಥಮ, ಯಲ್ಲಪ್ಪ ಕದಡಿ (ಡಿಪಿಇಪಿ)ದ್ವೀತಿಯ, 600ಮೀ ಓಟದಲ್ಲಿ ಹನುಮಂತ ಶಿರುಂದ ಪ್ರಥಮ, ಶಿವಾನಂದ ಹಾದಿಮನಿ ದ್ವೀತಿಯ, 400ಮೀ ರಿಲೆಯಲ್ಲಿ ದೇವರಾಜ ದಾಸರು ಸಂಗಡಿಗರು, ಬಾಲಕೀಯರ ವೈಯಕ್ತಿಕ ಕ್ರೀಡಾ ಕೂಟದಲ್ಲಿ 100ಮೀ ಓಟದಲ್ಲಿ ನೇತ್ರಾ ಒಂಟೆಲಭೋವಿ (ರಾಣಿಚೆನ್ನಮ್ಮ) ಪ್ರಥಮ, ಅರ್ಪಿತಾ ಲಮಾಣಿ ದ್ವೀತಿಯ, 200ಮೀ ಓಟದಲ್ಲಿ ನೇತ್ರಾ ಒಂಟೆಲಭೋವಿ ಪ್ರಥಮ, ಭಾಗ್ಯ ಬೂದಿಹಾಳ ದ್ವೀತಿಯ, 400 ಮೀ ಓಟದಲ್ಲಿ ಚೈತ್ರಾ ಕೂಲಿ ಪ್ರಥಮ, ಪ್ರೀತಿ ಪೂಜಾರ ದ್ವೀತಿಯ, 600ಮೀ ಓಟದಲ್ಲಿ ಚಂದ್ರಿಕಾ ತಳವಾರ ಪ್ರಥಮ, ಅಕ್ಷತಾ ಜಕ್ಕಲಿ,80 ಮೀ ಅಡತಡೆ ಓಟದಲ್ಲಿ ನೇತ್ರಾ ಒಂಟೆಲಭೋವಿ ಪ್ರಥಮ, ಅರ್ಪಿತಾ ಲಮಾಣಿ ದ್ವೀತಿಯ, 400ಮೀ ರಿಲೆಯಲ್ಲಿ ನೇತ್ರಾ. ಮಲ್ಲಪ್ಪ ಒಂಟೆಲಭೋವಿ ಸಂಗಡಿಗರು.

ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಾಣಾಧಿಕಾರಿ ಬಸವಣ್ಣೆಪ್ಪ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಕಾಶಭೋವಿ, ಗ್ರಾಪಂ ಸದಸ್ಯರು ಕುಮಾರ ಮಾನೆ, ಬಸಮ್ಮ ಹಾದಿಮನಿ, ಜಿ.ವಿ. ಹಿರೇಮಠ, ನಟರಾಜ ಬಳ್ಳಾರಿ, ಕೆ.ಎಂ. ಗೊರವರ, ಮಂಜುನಾಥ ಸಂಜಿನ್ನವರ, ರಂಗಪ್ಪ ಜೋಂಡಿ, ಮರಿತೆಮಪ್ಪ ಆದಮ್ಮನವರ, ಸಿಆರ್‌ಪಿ ಮೃಂತುಜ್ಯಯ ಪೂಜಾರ, ಡಿಪಿಇಪಿ ಮುಖ್ಯೋಪಾಧ್ಯೆಯ ಎಸ್.ಜಿ. ಪಾಟೀಲ, ಮಾಜಿ ಸೈನಿಕ ಸಂಘದ ಅಧ್ಯಕ್ಷ ವಾಸಪ್ಪ ಕಾಶಭೋವಿ, ಕಾಶಿಮಲಿ ಬೆನಕೊಪ್ಪ, ಕೃಷ್ಣಪ್ಪ ಪೂಜಾರ, ಸುಶೀಲಾ ಚಲವಾದಿ, ಎಸ್‌ಡಿಎಂಸಿ ಸರ್ವ ಸದಸ್ಯರು, ಮಾಜಿ ಸೈನಿಕರು, ಶಾಲಾ ಗುರುವೃಂದ, ದೈಹಿಕ ಶಿಕ್ಷಕರು, ಕ್ರೀಡಾ ಅಭಿಮಾನಿಗಳು ಪಾಲಕರು, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!