ಕೊಡಗಿನಲ್ಲಿ ಕ್ರೀಡೆ ಜನಪ್ರಿಯ: ಪೊನ್ನಣ್ಣ

KannadaprabhaNewsNetwork |  
Published : Dec 09, 2025, 02:00 AM IST
ಬಿಡುಗಡೆ | Kannada Prabha

ಸಾರಾಂಶ

ವಿವಿಧ ಕ್ರೀಡೆಗಳು ಕೊಡಗಿನಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದು ಶಾಸಕ ಪೊನ್ನಣ್ಣ ಹೇಳಿದರು.

ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡವ ಕುಟುಂಬಗಳಲ್ಲಿ ಕ್ರೀಡಾ ಸ್ಪೂರ್ತಿ ಏರು ಗತಿಯಲ್ಲಿದ್ದು ವರ್ಷದಿಂದ ವರ್ಷಕ್ಕೆ ಹಾಕಿ, ಕ್ರಿಕೆಟ್ , ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳು ಕೊಡಗಿನಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರು, ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಇಲ್ಲಿನ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಶುಕ್ರವಾರ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆ- 2026 ರ ಚಿಹ್ನೆ(ಲೋಗೋ) ಬಿಡುಗಡೆಗೊಳಿಸಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕೊಡಗಿನಲ್ಲಿ ಹಾಕಿ ಕ್ರೀಡೆ ಗಿನ್ನೆಸ್ ದಾಖಲೆ ಮಾಡಿದೆ. ಅದರಂತೆ ಹಗ್ಗಜಗ್ಗಾಟ ಕ್ರೀಡೆಯು ಕೂಡ ದಾಖಲೆ ಮಾಡುವಂತಾಗಲಿ. ಇದಕ್ಕೆ ವಿವಿಧ ಕುಟುಂಬಸ್ಥರು ನಡೆಸುವ ಪ್ರಾಮಾಣಿಕ ಪ್ರಯತ್ನ ಫಲ ನೀಡಲಿ, ಈ ಚೀಯಕಪೂವಂಡ ಕುಟುಂಬದ ಜೊತೆ ನನಗೆ ಅವಿನಾಭಾವ ಸಂಬಂಧವಿದ್ದು ನನ್ನ ಸಂಪೂರ್ಣ ಸಹಕಾರವಿದೆ ಎಂದು ಕ್ರೀಡಾಕೂಟ ಸುಸೂತ್ರವಾಗಿ ಜರುಗಲಿ ಎಂದು ಶುಭ ಹಾರೈಸಿದರು .ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಕ್ರೀಡಾಕೂಟದ ಯಾಂತಮ್ (ಹಾಡು) ಬಿಡುಗಡೆಗೊಳಿಸಿ ಮಾತನಾಡಿ, ಪಂಜಾಬ್ ಬಿಟ್ಟರೆ ಕೊಡಗು ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಕೊಡವ ಕುಟುಂಬಗಳ ನಡುವಿನ ಹಾಕಿ, ಕ್ರಿಕೆಟ್ , ಹಗ್ಗಜಗ್ಗಾಟ ಕ್ರೀಡೆಗಳು ಜನಪ್ರಿಯ. ಕ್ರೀಡೆಯಿಂದ ಮನಶಾಂತಿ, ಆರೋಗ್ಯ ಲಭಿಸುತ್ತದೆ . ಕ್ರೀಡೆಯಿಂದಾಗಿ ಯುವ ಜನರು ಭವಿಷ್ಯ ಕಂಡುಕೊಂಡಿದ್ದಾರೆ . ಮಕ್ಕಳ ಉಜ್ವಲ ಭವಿಷ್ಯಕ್ಕೆ ಕ್ರೀಡೆ ಸಹಕಾರಿಯಾಗಲಿದೆ ಎಂದರು. ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಕ್ರೀಡೆ ಜನಪ್ರಿಯವಾಗುತ್ತಿದ್ದಂತೆ ವಿವಿಧ ಜನಾಂಗದವರೂ ಜಿಲ್ಲೆಯಲ್ಲಿ ಹಗ್ಗಜಗ್ಗಾಟ ಕ್ರೀಡೆಯನ್ನು ಆಯೋಜಿಸುತ್ತಿವೆ. ಕೊಡಗಿನ ಮಣ್ಣು , ನೀರು, ಗಾಳಿ, ಪರಿಸರ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.ವಿಚಾರಗಳು ವಿಭಿನ್ನವಾಗಿವೆ:

ಎಸ್ ಪಿ ರಾಮರಾಜನ್ ಮಾತನಾಡಿ ಕೊಡಗಿನ ಕ್ರೀಡೆ ಹಾಗೂ ಆಚಾರ, ವಿಚಾರಗಳು ವಿಭಿನ್ನವಾಗಿವೆ. ಇತರರನ್ನು ಗೌರವಿಸುವುದು ಇಲ್ಲಿನ ಜನರ ಗುಣವಾಗಿದೆ. ಇಲ್ಲಿಯ ಭಾಷೆ , ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯ ಶ್ರೀಮಂತವಾಗಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಥಳೀಯ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಮಾತನಾಡಿ ಹಗ್ಗ ಜಗ್ಗಾಟ ಒಂದು ಪ್ರಾಚೀನ ಕಲೆಯಾಗಿದ್ದು ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿತ್ತು ನಂತರ ಇದನ್ನು ಕ್ರೀಡೆಯಾಗಿ ಪರಿಗಣಿಸಲಾಯಿತು. 20 ವರ್ಷಗಳ ಕಾಲ ಒಲಂಪಿಕ್ಸ್ ನಲ್ಲಿ ಸ್ಪರ್ಧೆಯಾಗಿ ಜನಪ್ರಿಯವಾಗಿತ್ತು ಎಂದರು. ಕೊಡಗಿನ ಯುವಕರು ಎಲ್ಲಾ ಕ್ರೀಡೆಗಳಲ್ಲಿ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳಿಗೆ ಯುವ ಜನರಿಗೆ ಸೂಕ್ತ ತರಬೇತಿ ನೀಡಿ ಅವರು ಕ್ರೀಡಾ ಕ್ಷೇತ್ರದಲ್ಲಿ ಮೇಲೆ ಬರುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಮಾತನಾಡಿ, ಕೊಡವ ಟಗ್ ಆಫ್ ವಾರ್ ಕ್ರೀಡೆಯ ಪ್ರಾರಂಭದಿಂದ ಇಲ್ಲಿಯವರೆಗೆ ಆಯೋಜಿಸಿದ ಕ್ರೀಡಾಕೂಟದ ಅಂಕೆ ಸಂಖ್ಯೆಗಳ ಒಳಗೊಂಡ ಮಾಹಿತಿ ನೀಡಿ ಮುಂದೆ ನಡೆಯುವ ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರು ಅಲ್ಲದೆ 14 ವರ್ಷದ ಮಕ್ಕಳಿಗೂ ಅವಕಾಶ ನೀಡಲಾಗುವುದು ಎಂದರು . ಈ ಸಂದರ್ಭ 2027 ಕೊಡವ ಟಗ್ ಆಫ್ ವಾರ್ ಕ್ರೀಡಾಕೂಟವನ್ನು ವಿರಾಜಪೇಟೆಯಲ್ಲಿ ನಡೆಸಲು ಒಪ್ಪಿಕೊಂಡಿರುವ ಮುಂಡಿಯೊಳಂಡ ಕುಟುಂಬಕ್ಕೆ ಅಕಾಡೆಮಿ ವತಿಯಿಂದ ಒಪ್ಪಿಗೆ ಪತ್ರವನ್ನು ನೀಡಿ ಶುಭ ಹಾರೈಸಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೀಯಕಪೂವಂಡ ಕೇ ರ್ ಬಲಿ ಸಮಿತಿ ಅಧ್ಯಕ್ಷ ಕೆ ಬೋಪಣ್ಣ ವಹಿಸಿದ್ದು ಚೀಯಕಪೂವಂಡ ಕುಟುಂಬ ಸಮಿತಿಯ ಅಧ್ಯಕ್ಷ ಚೀಯಕಪೂವಂಡ ಎಂ.ಅಪ್ಪಚ್ಚು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾ ಡಿದರು. ವೇದಿಕೆಯಲ್ಲಿ ಸಮಿತಿ ಉಪಾಧ್ಯಕ್ಷ ಕಟ್ಟಿ ಮಂಜುನಾಥ್ , ಕಾರ್ಯದರ್ಶಿ ಸಿ ಎ ನಾಚಪ್ಪ , ಜಂಟಿ ಕಾರ್ಯದರ್ಶಿ ಸಚಿನ್ ಮುತ್ತಪ್ಪ , ಖಜಾಂಚಿ ಸತೀಶ್ ದೇವಯ್ಯ , ಟೂರ್ನಮೆಂಟ್ ಡೈರೆಕ್ಟರ್ ಸಿ ಡಿ ನವೀನ್ , ನಿರ್ದೇಶಕರಾದ ಪ್ರಕಾಶ್ ಮಂದಪ್ಪ , ಸುನಿಲ್ ಮಾಚಯ್ಯ , ಸಚಿನ್ ಪೂವಯ್ಯ, ಪಾಲ್ಗೊಂಡಿದ್ದರು.ಯಶಸ್ವಿ ನಾಚಪ್ಪನವರ ಪ್ರಾರ್ಥನೆೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಬಾಲೆಯಡ ದಿವ್ಯ ಮಂದಪ್ಪ ನಿರೂಪಿಸಿ ಶ್ವತನ್ ಚಂಗಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಕಾಂಗ್ರೆಸ್‌-ಬಿಜೆಪಿ ಜಿದ್ದಾಜಿದ್ದಿನ ಹೋರಾಟ
ಜಿಲ್ಲಾಡಳಿತದಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ