ಕ್ರೀಡೆಯಿಂದ ಆತ್ಮಸ್ಥೈರ್ಯ, ಆರೋಗ್ಯ ವೃದ್ಧಿ

KannadaprabhaNewsNetwork |  
Published : Feb 04, 2026, 02:15 AM IST
ವಿಜೇತ ಬ್ಯಾಡ್ಮಿಂಟನ್‌ ಪಟುಗಳಿಗೆ ಡಾ. ಡಾ. ವಿ.ಎಸ್‌.ವಿ. ಪ್ರಸಾದ ಪ್ರಶಸ್ತಿ ವಿತರಿಸಿದರು. | Kannada Prabha

ಸಾರಾಂಶ

ಭವಿಷ್ಯತ್ತಿನ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಹಾಗೂ ಎಲ್ಲ ವರ್ಗದವರಿಗೂ ಉಪಯೋಗವಾಗಲಿ ಎಂದು 10 ವರ್ಷಗಳ ಹಿಂದೆ ಡಾ. ವಿಜಯ ಸಂಕೇಶ್ವರ ನೇತೃತ್ವದಲ್ಲಿ ನವೀನ್ ಪಾರ್ಕಿನಲ್ಲಿ ಅಂತಾರಾಷ್ಟೀಯ ಮಟ್ಟದ 4 ಉಡನ್ ಕೋರ್ಟ್ ನಿರ್ಮಿಸಿಲಾಗಿದೆ.

ಹುಬ್ಬಳ್ಳಿ:

ಕ್ರೀಡೆಯಿಂದ ಆತ್ಮಸ್ಥೈರ್ಯ, ಮನೋಬಲ ಜತೆಗೆ ಆರೋಗ್ಯ ವೃದ್ಧಿಯಾಗಲಿದೆ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಹೊಂದುವಂತೆ ಸ್ವರ್ಣಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್‌.ವಿ. ಪ್ರಸಾದ ಹೇಳಿದರು.

ಅವರು ನವೀನ ಪಾರ್ಕ್ ನಿವಾಸಿಗಳ ಸಂಘದ ಸಹಯೋಗದೊಂದಿಗೆ ನಗರದ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ “ಸ್ವರ್ಣಾ ಕಪ್” ಪಂದ್ಯಾವಳಿ ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಭವಿಷ್ಯತ್ತಿನ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಹಾಗೂ ಎಲ್ಲ ವರ್ಗದವರಿಗೂ ಉಪಯೋಗವಾಗಲಿ ಎಂದು 10 ವರ್ಷಗಳ ಹಿಂದೆ ಡಾ. ವಿಜಯ ಸಂಕೇಶ್ವರ ನೇತೃತ್ವದಲ್ಲಿ ನವೀನ್ ಪಾರ್ಕಿನಲ್ಲಿ ಅಂತಾರಾಷ್ಟೀಯ ಮಟ್ಟದ 4 ಉಡನ್ ಕೋರ್ಟ್ ನಿರ್ಮಿಸಿಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಹಾಗೂ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

ಹಾವೇರಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬಳ್ಳಾರಿ, ಗದಗ, ವಿಜಯನಗರ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಿಂದ 105 ಯುವ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಸಂಶಿ ಸ್ಪೊರ್ಟ್ಸ್ ಅಕಾಡೆಮಿ ಅಧ್ಯಕ್ಷ ನಾಗೇಂದ್ರ ಸಂಶಿ, ಮುಖ್ಯ ತರಬೇತುದಾರ ಸಾಗರ್ ಸಂಶಿ, ರಾಜೇಶ್ ಬಳ್ಳಾರಿ ಸೇರಿದಂತೆ ಹಲವರಿದ್ದರು.

ವಿಜೇತರು:

U-7 ಓಪನ್ ಸಿಂಗಲ್ಸ್‌ನಲ್ಲಿ ಶಿರಸಿಯ ಚಂದನ್ ವಿನ್ನರ್, ಧಾರವಾಡದ ಶ್ರೇಯಸ್ ನವಲಗುಂದ ರನ್ನರ್ ಅಪ್ ಪಡೆದರು. U-9 ಓಪನ್ ಸಿಂಗಲ್ಸ್‌ನಲ್ಲಿ ಶಿರಸಿಯ ಜಯಂತ್ ಜಿ.ಎಂ ವಿನ್ನರ್‌, ಹುಬ್ಬಳ್ಳಿಯ ವೀರೇನ್ ರಾಥೋಡ್ ರನ್ನರ್ ಅಪ್. U-11 ಬಾಯ್ಸ್ ಸಿಂಗಲ್ಸ್‌ನಲ್ಲಿ ಹುಬ್ಬಳ್ಳಿಯ ಜೈವರ್ಧನ ಕೆ. ವಿನ್ನರ್, ಶಿರಸಿಯ ಪ್ರಣೀತ್ ಹೆಗಡೆ ರನ್ನರ್, U-11 ಗರ್ಲ್ಸ್ ಸಿಂಗಲ್ಸ್‌ನಲ್ಲಿ ಹುಬ್ಬಳ್ಳಿಯ ಎಂ. ಮೆಹೆತಾಬೆಲ್ ವಿನ್ನರ್, ಹುಬ್ಬಳ್ಳಿಯ ಕೃತಿಕಾ ಸುಣಗಾರ ರನ್ನರ್ ಅಪ್, U-13 ಬಾಯ್ಸ್ ಸಿಂಗಲ್ಸ್‌ನಲ್ಲಿ ಮುಂಡಗೋಡದ ಶೌರ್ಯ ಬಿ.ಎಸ್. ವಿನ್ನರ್, ಸೂರ್ಯತೇಜ್ ರೆಡ್ಡಿ ರನ್ನರ್ ಅಪ್, U-13 ಗರ್ಲ್ಸ್ ಸಿಂಗಲ್ಸ್‌ನಲ್ಲಿ ಹುಬ್ಬಳ್ಳಿಯ ಎಂ. ಮೆಹೆತಾಬೆಲ್ ವಿನ್ನರ್ ಹಾಗೂ ಕೃತಿಕಾ ಸುಣಗಾರ ರನ್ನರ್ ಅಪ್, U-15 ಬಾಯ್ಸ್ ಸಿಂಗಲ್ಸ್‌ನಲ್ಲಿ ತೋರಣಗಲ್ಲಿನ ಅಬ್ಬಾಸ್ ದಾಸ್ ವಿನ್ನರ್, ಮುಂಡಗೋಡದ ಶೌರ್ಯ ಬಿ.ಎಸ್ ರನ್ನರ್ ಅಪ್, U-15 ಗರ್ಲ್ಸ್ ಸಿಂಗಲ್ಸ್‌ನಲ್ಲಿ ಹುಬ್ಬಳ್ಳಿಯ ಎಂ. ಮೆಹೆತಾಬೆಲ್ ವಿನ್ನರ್, ತನ್ವಿ ಹಿತ್ತಲಮನಿ ರನ್ನರ್ ಅಪ್, U-17 ಬಾಯ್ಸ್ ಸಿಂಗಲ್ಸ್‌ನಲ್ಲಿ ಹುಬ್ಬಳ್ಳಿಯ ರಜತ್ ಸಿದ್ರಾಮಶೆಟ್ಟರ್ ವಿನ್ನರ್, ಪ್ರಥಮ್ ಹೆಗಡೆ ರನ್ನರ್ ಅಪ್‌, U-17 ಗರ್ಲ್ಸ್ ಸಿಂಗಲ್ಸ್‌ನಲ್ಲಿ ಹುಬ್ಬಳ್ಳಿಯ ಸಮಂತ.ಎಸ್ ವಿನ್ನರ್, ತನ್ವಿ ಹಿತ್ತಲಮನಿ ರನ್ನರ್‌ ಅಪ್‌ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ