-ಉಪ್ಪಳ್ಳಿ ಬಡಾವಣೆಯ ಕ್ರಿಕೆಟ್ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಾದಕ ವ್ಯಸನದಿಂದ ದೂರವಿರಲು ಕ್ರೀಡೆ ಸಹಕಾರಿ. ಯುವ ಸಮೂಹ ದುಶ್ಚಟಗಳಿಗೆ ಹೆಚ್ಚಿನ ಮಹತ್ವ ಕೊಡದೇ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜಕ್ಕೆ ಮಾದರಿ ಪ್ರಜೆಯಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಉಪ್ಪಳ್ಳಿ ಬಡಾವಣೆ ಸಮೀಪ ಭಾನುವಾರ ಮಾಸ್ಟರ್ಸ್ ಕ್ರಿಕೆಟ್ ಕ್ಲಬ್ ಹಾಗೂ ಬಸವನಹಳ್ಳಿ ಪೊಲೀಸ್ ಠಾಣೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಮಾದಕ ದ್ರವ್ಯಗಳ ಕಳ್ಳ ಮಾರಾಟ ಹಾಗೂ ಖರೀದಿಸುವ ಯಾವುದೇ ಬಲಾಢ್ಯ ವ್ಯಕ್ತಿ ಅಥವಾ ಪಕ್ಷದ ಮುಖಂಡರು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಯುವಕರ ಭವಿಷ್ಯ ಹಾಳು ಮಾಡುವ ಸಮಾಜ ಘಾತುಕರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದರು.ಭವಿಷ್ಯದಲ್ಲಿ ಸಮಾಜಕ್ಕೆ ಮಾದರಿಯಾಗುವ ಯುವಕರ ಜೀವನ ಸದೃಢಗೊಳಿಸುವ ನಿಟ್ಟಿನಲ್ಲಿ ಇಂದಿನ ಪಂದ್ಯಾವಳಿ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಪಾಲಕರ ಕನಸು ಹಾಗೂ ಗುರು ಹಿರಿಯರ ಶ್ರಮಕ್ಕೆ ಬೆಳಕು ಚೆಲ್ಲುವ ಕೆಲಸ ಯುವ ಜನತೆಗೆ ಮಾಡಬೇಕಿದೆ ಎಂದು ಹೇಳಿದರು.ಕ್ರೀಡಾಕೂಟಕ್ಕೆ ಮನಸ್ಸನ್ನು ಕಟ್ಟಿಗೊಳಿಸುವ ಶಕ್ತಿಯಿದ್ದು ಸದೃಢಗೊಳಿಸುವ ಸಾಮರ್ಥ್ಯ ಯುವಕರಲ್ಲಿ ಬರಬೇಕಿದೆ. ಇಂದಿನ ಉಪ್ಪಳ್ಳಿ ಪಂದ್ಯಾವಳಿ ಸರ್ವ ಧರ್ಮದ ಸಹೋದರರು ಒಟ್ಟಾಗಿ ಆಡುವ ಮೂಲಕ ಮುಂದಿನ ಮಕ್ಕಳ ಭವಿಷ್ಯವನ್ನು ಸನ್ನಡತೆಯತ್ತ ಕೊಂಡೊಯ್ಯಲು ಮುಂದಾಗುತ್ತಿರುವುದು ಉತ್ತಮ ವಿಚಾರ ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಕ್ರೀಡೆಗಳು ಜೀವನೋತ್ಸಾಹ ಹೆಚ್ಚಿಸುವ ಜೊತೆಗೆ ಆರೋಗ್ಯಪೂರ್ಣ ಶರೀರಕ್ಕೆ ನಾಂದಿಯಾಗಲಿದೆ. ನಿರಂತರ ಕಲಿಕೆ ಜೊತೆಗೆ ಪರಿಸರ ಸಂರಕ್ಷಣೆ ಬಗ್ಗೆ ಪ್ರಮುಖ ಕಾಳಜಿವಹಿಸಬೇಕು. ಆ ನಿಟ್ಟಿ ನಲ್ಲಿ ಇಂದಿನಿಂದಲೇ ಪ್ರತಿಜ್ಞೆ ಅಳವಡಿಸಿ ವ್ಯಸನದಿಂದ ಮುಕ್ತರಾಗಿಸಲು ಚಿಂತನೆ ನಡೆಸಬೇಕು ಎಂದು ಹೇಳಿದರು.ನಮ್ಮಗಳ ಉಪಸನ ಪದ್ಧತಿ ಬೇರೆಯಾದರೂ, ಭಾರತೀಯ ಸಂಸ್ಕೃತಿ ಒಂದೇ. ಉಪಕಾರಿಯಾಗಿ ಸ್ಮರಿಸುವ ಭಾರತೀಯ ಸಂಸ್ಕೃತಿ ಜೊತೆಗೆ ಪರಿಸರ ಸಂರಕ್ಷಣೆ ಆಳವಾದ ಅರಿವು ಹೊಂದಬೇಕು. ಪರಿಸರದ ಒಳಿತನ್ನು ಮುಂದಿಟ್ಟಾಗ ನೈಸರ್ಗಿಕ ಪರಿಸರ ಉಳಿಸಲು ಸಾಧ್ಯ ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಯಕುಮಾರ್ ಮಾತನಾಡಿ, ಮಾದಕ ವ್ಯಸನ ಕಡಿವಾಣಗೊಳಿಸಲು ಇಲಾಖೆಯಿಂದ ಅನೇಕ ಕಾರ್ಯಕ್ರಮ ನಡೆಸುವ ಜೊತೆಗೆ ಹದ್ದಿನ ಕಣ್ಣಿರಿಸಿದೆ. ಸಾರ್ವಜನಿಕರು, ಸಾಮಾಜಿಕ ಮುಖಂಡರು ಸಮಾಜದ ಒಳಿತಿಗಾಗಿ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.ನಗರಸಭಾ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ, ಉಪ್ಪಳ್ಳಿಯ ವಿವಿಧ ಸಂಘ ಸಂಸ್ಥೆಗಳ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಕ್ರೀಡಾಕೂಟ ಆಯೋಜಿಸಿದ್ದು ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದು 8 ಓವರ್‌ಗೆ ಸೀಮಿತಗೊಳಿಸಿದೆ. ಯಾವುದೇ ಸ್ಫರ್ಧೆಯಿಲ್ಲದೇ ಸ್ನೇಹತ್ವದಿಂದ ಪಂದ್ಯಾವಳಿ ನಡೆಯುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಸದಸ್ಯರಾದ ಖಲಂದರ್, ಮಣಿಕಂಠ, ಟೇಸ್ಟಿ ವರ್ಲ್ಡ್ ಮಾಲೀಕ ಎಂ.ಎನ್.ಅರವಿಂದ್, ಸಿಡಿಎ ಸದಸ್ಯ ಸುದೀಪ್, ಬಸವನಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಜರುದ್ದೀನ್, ಆಯೋಜಕ ರಾದ ಅನ್ಸರ್‌ಆಲಿ, ಜಮಾಲ್, ಮುಜ್ಜು, ನಂದೀಶ್, ಸಲೀಂ, ಸಾಹೀರ್ ಹಾಜರಿದ್ದರು. 5 ಕೆಸಿಕೆಎಂ 1ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಎಚ್.ಡಿ. ತಮ್ಮಯ್ಯ ಅವರು ಚಾಲನೆ ನೀಡಿದರು. ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಇದ್ದರು.