ಸಮಾಜ ಸಂಘಟನೆಗೆ ಕ್ರೀಡಾಕೂಟ ಸಹಕಾರಿ: ಗೀತಾ ಗಿರೀಶ್

KannadaprabhaNewsNetwork |  
Published : Feb 05, 2024, 01:47 AM ISTUpdated : Feb 05, 2024, 04:09 PM IST
ಚಿತ್ರ : 4ಎಂಡಿಕೆ3 : ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿತ 2ನೇ ವರ್ಷದ ವಿಪ್ರ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವರು.  | Kannada Prabha

ಸಾರಾಂಶ

ಬ್ರಾಹ್ಮಣ ಸಮಾಜದ ಬಾಂಧವರಿಗೆ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳು ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದವು. ಜಿಲ್ಲೆಯ ವಿವಿಧೆಡೆಗಳಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿತ 2ನೇ ವರ್ಷದ ವಿಪ್ರ ಕ್ರೀಡಾಕೂಟದ ಅಂಗವಾಗಿ ಬ್ರಾಹ್ಮಣ ಸಮಾಜದ ಬಾಂಧವರಿಗೆ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳು ಭಾನುವಾರ ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದವು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಮಾಜದ ಬಾಂಧವರು ಕ್ರೀಡಾಕೂಟದಲ್ಲಿ ಪಾಲ್ಗೊಂಡರು.

ಕ್ರೀಡಾಕೂಟ ಉದ್ದೇಶಿಸಿ ಮಾತನಾಡಿದ ನಿಧಿಯ ಅಧ್ಯಕ್ಷೆ ಗೀತಾ ಗಿರೀಶ್, ಕ್ರೀಡಾಕೂಟ ಆಯೋಜನೆ ಮೂಲಕ ಸಮಾಜದವರು ಒಂದು ವೇದಿಕೆಯಡಿಯಲ್ಲಿ ಸೇರುವುದರಿಂದ ಸಮಾಜದ ಸಂಘಟನೆಗೆ ಸಹಕಾರಿಯಾಗುತ್ತದೆ. 

ಕಳೆದ ಬಾರಿ ಕ್ರೀಡಾಕೂಟದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಈ ಬಾರಿ ಬ್ಯಾಡ್ಮಿಂಟನ್ ಹಾಗೂ ಟಿ. ಟಿ ಪಂದ್ಯಾವಳಿ ಆಯೋಜನೆಗೊಂಡಿದ್ದು, ಇದಕ್ಕೂ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದರು.

ಮುಂದಿನ ಬಾರಿ ಇನ್ನೂ ಹೆಚ್ಚಿನ ಕ್ರೀಡೆಗಳನ್ನು ಕ್ರೀಡಾಕೂಟದ ಅಂಗವಾಗಿ ಆಯೋಜಿಸುವ ಚಿಂತನೆ ಇದೆ. ದಿನನಿತ್ಯದ ಒತ್ತಡದ ಜೀವನದಿಂದ ಹೊರಬರಲು ಕ್ರೀಡೆ ಸಹಕಾರಿಯಾಗಿದ್ದು ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸಮಾಜದ ಪ್ರಮುಖರಾದ ಶಿವಶಂಕರ್, ಮಂಜುನಾಥ್, ಸವಿತಾ ಭಟ್, ಬಿ. ಕೆ ಅರುಣ್ ಕುಮಾರ್, ಬಿ. ಕೆ ಜಗದೀಶ್, ಭರತೇಶ್ ಖಂಡಿಗೆ ಇದ್ದರು.

ವಿಜೇತರು: ಬ್ಯಾಡ್ಮಿಂಟನ್‌ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಡಿಕೇರಿಯ ಈಶ್ವರಿ ಉದಯಶಂಕರ್ ಅವರು ವಿಜೇತರಾಗಿದ್ದು, ಮಡಿಕೇರಿಯ ಸೌಮ್ಯ ಸಂತೋಷ್ ಭಟ್ ಅವರು ರನ್ನರ್ ಪ್ರಶಸ್ತಿ ಪಡೆದುಕೊಂಡರು.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮಡಿಕೇರಿಯ ಸುಮನ ಶ್ರೀ ಹರಿ - ಸೌಮ್ಯ ಸಂತೋಷ್ ಭಟ್ ಜೋಡಿ ಪ್ರಥಮ ಹಾಗೂ ಮಡಿಕೇರಿಯ ಸುಧಾ ಶಂಕರ್ ಪ್ರಸಾದ್ - ಈಶ್ವರಿ ಉದಯಶಂಕರ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು. 

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀನಿವಾಸ್ ಕುಶಾಲನಗರ ಪ್ರಥಮ ಹಾಗೂ ಮಡಿಕೇರಿಯ ಶಶಿಕಾಂತ್ ಅವರು ದ್ವಿತೀಯ ಸ್ಥಾನ ಗಳಿಸಿದರು.

ಪುರುಷರ ಡಬಲ್ಸ್ ವಿಭಾಗದಲ್ಲಿ ಕುಶಾಲನಗರದ ಅಚಲ್ ಮಯ್ಯ ಹಾಗೂ ಪ್ರಶಾಂತ್ ಮಯ್ಯ ಜೋಡಿ ಪ್ರಥಮ, ಮಡಿಕೇರಿಯ ಡಾ.ರಾಘವನ್ ಹಾಗೂ ವೀರಾಜಪೇಟೆಯ ಮಂಜುನಾಥ್ ಜೋಡಿ ದ್ವಿತೀಯ ಸ್ಥಾನ ಗಳಿಸಿತು.

ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಅವಿನಾಶ್ ಕೃಷ್ಣ ಪ್ರಥಮ ಹಾಗೂ ಶಿಶಿರ್ ದ್ವಿತೀಯ ಸ್ಥಾನ ಪಡೆದುಕೊಂಡರು. ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಸುಮೇಧ ಪ್ರಥಮ, ಆಯುಕ್ತ ದ್ವಿತೀಯ ಸ್ಥಾನ ಗಳಿಸಿದರು.

ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಡಿಕೇರಿಯ ಜಿ.ಡಿ. ಹರಿಶಂಕರ್ ಪ್ರಥಮ ಹಾಗೂ ಕುಶಾಲನಗರದ ಕೆ.ಪಿ. ಸುಬ್ರಮಣ್ಯ ದ್ವಿತೀಯ ಸ್ಥಾನ ಗಳಿಸಿದರು.

ಸಮಾರೋಪ ಸಮಾರಂಭವು ಫೆ.25 ರಂದು ಮಡಿಕೇರಿ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ