ಕನ್ನಡಪ್ರಭ ವಾರ್ತೆ ಮೈಸೂರು
ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಶನಿವಾರ ಆಯೋಜಿಸಿರುವ ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟಗಳು ಸಂಭ್ರಮದ ವಾತಾವರಣ ಸೃಷ್ಟಿಸುತ್ತದೆ. ಕೆಲಸಗಳಲ್ಲೇ ನಿರತರಾಗಿರುವ ಪೊಲೀಸರು ಎಲ್ಲಾ ಸಮಸ್ಯೆ ಬದಿಗಿಟ್ಟು, ಕೆಲ ಸಮಯ ಕ್ರೀಡೆಯೊಂದಿಗೆ ಕಳೆಯಿರಿ. ನಿತ್ಯ ತರಬೇತಿ ಪಡೆದರೆ ವೃತ್ತಿಯಲ್ಲಿ ಆರೋಗ್ಯದಾಯಕವಾಗಿ ತೊಡಗಿಕೊಳ್ಳಲೂ ಸಾಧ್ಯ ಎಂದರು.
ಪೊಲೀಸ್ ಕೆಲಸವು ಸದಾ ಒತ್ತಡದಿಂದ ಕೂಡಿರುತ್ತದೆ. ಕ್ರೀಡೆಯು ಒತ್ತಡ ನಿವಾರಣೆಗೆ ಸಹಕಾರಿಯಾಗಲಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವಾಗ ಒತ್ತಡದ ನಡುವೆ ಆರೋಗ್ಯದ ಕುರಿತು ನಿರ್ಲಕ್ಷ್ಯ ಮಾಡುತ್ತೀರಿ. ನಿಮ್ಮ ಆರೋಗ್ಯ ಚೆನ್ನಾಗಿದ್ದಾಗ ಸಮಾಜಕ್ಕೂ ಉತ್ತಮ ಸೇವೆ ನೀಡಲು ಸಾಧ್ಯ. ಹೀಗಾಗಿ, ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.ಕ್ರೀಡೆ ತರಬೇತಿ ಹಾಗೂ ಪರಿಶ್ರಮ ಬೇಡುತ್ತದೆ. ಪ್ರಶಸ್ತಿಯ ಹಿಂದಿನ ಕಷ್ಟ ಅನುಭವಿಸಿದವರಿಗೆ ಅಷ್ಟೇ ತಿಳಿಯಲು ಸಾಧ್ಯ. ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಚಾರ. ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ, ದೇಶದ ಕೀರ್ತಿ ಹೆಚ್ಚಿಸಲು ಪ್ರಯತ್ನಿಸೋಣ ಎಂದರು.
ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್ ಮೊದಲಾದವರು ಇದ್ದರು.