ಶಿಸ್ತು, ಸಂಯಮ, ಆರೋಗ್ಯವೃದ್ಧಿಗೆ ಕ್ರೀಡಾಕೂಟಗಳು ಪೂರಕ: ಕನ್ನಾಳ

KannadaprabhaNewsNetwork |  
Published : Aug 26, 2026, 01:30 AM IST
25ಕೆಪಿಎಂಡಿಎಲ್01: | Kannada Prabha

ಸಾರಾಂಶ

ಪಟ್ಟಣ ಸಮೀಪದ ಆಮದಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಆಮದಿಹಾಳ ವಲಯ ಮಟ್ಟದ ಕ್ರೀಡಾಕೂಟವನ್ನು ಎಸ್‌ಡಿಎಂಸಿ ಅಧ್ಯಕ್ಷ ಹನಮಂತ ಕನ್ನಾಳ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಪಟ್ಟಣ ಸಮೀಪದ ಆಮದಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಆಮದಿಹಾಳ ವಲಯ ಮಟ್ಟದ ಕ್ರೀಡಾಕೂಟವನ್ನು ಎಸ್‌ಡಿಎಂಸಿ ಅಧ್ಯಕ್ಷ ಹನಮಂತ ಕನ್ನಾಳ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ನಂತರ ಶಿಕ್ಷಣ ಸಂಯೋಜಕ ಬಸವರಾಜ ಕರಡಿ ಮಾತನಾಡುತ್ತ, ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಒಂದು ಎಕರೆ ಜಮೀನಿನಲ್ಲಿ ಕ್ರಿಡಾಂಗಣ ನಿರ್ಮಿಸಬೇಕು. ಗ್ರಾಮೀಣ ಭಾಗದ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರು ಸಹಕಾರ ನೀಡಬೇಕು. ಗ್ರಾಮಸ್ಥರ ಸಹಕಾರದಿಂದ ಕ್ರೀಡೆಗಳು ನಡೆಸಲು ಅತ್ಯವಶ್ಯಕ ವಾಗಿದೆ. ಕ್ರೀಡಾಪಟುಗಳು ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿದಾಗ ಕ್ರೀಡಾಕೂಟಕ್ಕೆ ಉತ್ತಮ ಹೆಸರು ಬರಲಿದೆ ಎಂದರು.

ಟಿಪಿಓ ಚಂದ್ರಶೇಖರ್ ಮಾತ ನಾಡಿ ವಿದ್ಯಾರ್ಥಿಗಳಿಗೆ ಇಂತಹ ಕ್ರೀಡಾಕೂಟದ ಮೂಲಕ ಶಿಸ್ತು, ಸಂಯಮ, ಜತೆಗೆ ಆರೋಗ್ಯವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಆಗುತ್ತದೆ. ಕ್ರೀಡೆ ಜೀವನಕ್ಕೆ ಪೂರಕವಾದ ಅಂಶ ಗಳನ್ನು ಒದಗಿಸುತ್ತದೆ ಎಂದರು.

ಕ್ರೀಡಾಕೂಟದಲ್ಲಿ 10ಕ್ಕೂ ಹೆಚ್ಚು ಶಾಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ, ಜಿಪಂ ಮಾಜಿ ಸದಸ್ಯ ಹನಮಂತಪ್ಪ ಕಂದಗಲ್, ದೊಡ್ಡನಗೌಡ, ಹನಮಂತ ತುರಮರಿ, ತೋಟಪ್ಪ, ನೀಲಪ್ಪ ಹೊಸಮನಿ, ಶಿಕ್ಷಣ ಸಂಯೋಜಕ ಬಸವರಾಜ ಕರಡಿ, ಗಿರಿಮಲ್ಲಯ್ಯ ಮಠ, ಆರ್.ಸಿ ಗಳಾದ ರಾಮಚಂದ್ರ ಡವಳೆ, ಅಮರೇಶ ದಂಡಿನ ಶ್ರೀನಿವಾಸ ರಡ್ಡಿ, ರೋಮೇಶಗೌಡ, ನರಸಿಂಗಪ್ಪ, ಯಂಕಪ್ಪ ಪೂಜಾರಿ, ಧನಂಜಯ, ಹಾಗೂ ಸೇರಿದಂತೆ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷ ಸಂಘಟನೆಗೆ ಭಾರತ್ ಜೋಡೋ ಸಂಘ ಸಹಕಾರಿ: ಪಿ.ರವಿಕುಮಾರ್
ಬೆಂಗಳೂರು ಜಲ ಮಂಡಳಿ ಅಧಿಕಾರಿಗಳ ಕಳ್ಳಾಟ...!