ಏಕಾಗ್ರತೆ, ಬುದ್ಧಿಮಟ್ಟ ದೃಢತೆಗೆ ಕ್ರೀಡೆ ಸಹಕಾರಿ: ಅನಿಲ್‌ ಕುಮಾರ್‌

KannadaprabhaNewsNetwork | Published : Jul 30, 2024 12:37 AM

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ, ಲಾಲ, ಪ್ರಗತಿಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಮತ್ತು ಲಾಲ ವಲಯ, ಜನಜಾಗೃತಿ ವೇದಿಕೆ, ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ವಲಯ ಭಜನಾ ಪರಿಷತ್ ಜಂಟಿ ಆಶ್ರಯದಲ್ಲಿ ಜು.೨೮ ರಂದು ಬೆಳ್ತಂಗಡಿ ಶ್ರೀ ಮಂ.ಆಂ.ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಎನೇಲ್ ಗೊಬ್ಬು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕ್ರೀಡಾ ಜೀವನ ಮಾನಸಿಕತೆಯನ್ನು ವೃದ್ಧಿಸುವಂತದ್ದಾಗಿದ್ದು, ಏಕಾಗ್ರತೆ, ಬುದ್ಧಿ ಮಟ್ಟ ಸದೃಢಗೊಳಿಸುವ ಕಾರ್ಯ ಗ್ರಾಮೀಣ ಕ್ರೀಡೆಯಲ್ಲಿದೆ. ಆದರೆ ಜೀವನ ಶೈಲಿ ಬದಲಾದಂತೆ ಇದನ್ನೆಲ್ಲ ಮರೆಯುತ್ತಿದ್ದೇವೆ. ಹಿಂದಿನ ಜೀವನ ಮತ್ತೆ ಮರುಕಳಿಸುವ ಉದ್ದೇಶವೇ ಎನೇಲ್ ಗೊಬ್ಬು ಎಂದು ಶ್ರೀ ಧ. ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ಕೇಂದ್ರ ಕಚೇರಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ, ಲಾಲ, ಪ್ರಗತಿಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಮತ್ತು ಲಾಲ ವಲಯ, ಜನಜಾಗೃತಿ ವೇದಿಕೆ, ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ವಲಯ ಭಜನಾ ಪರಿಷತ್ ಜಂಟಿ ಆಶ್ರಯದಲ್ಲಿ ಜು.೨೮ ರಂದು ಬೆಳ್ತಂಗಡಿ ಶ್ರೀ ಮಂ.ಆಂ.ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಎನೇಲ್ ಗೊಬ್ಬು ಉದ್ಘಾಟಿಸಿ ಮಾತನಾಡಿದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿದರು.

ನಿವೃತ್ತ ಸೈನಿಕ ಗಡಿ ಭದ್ರತಾ ಪಡೆ ಸಿಗ್ನಲ್ ರೆಜಿಮೆಂಟ್ ಗಣೇಶ್ ಬಿ.ಎಲ್. ಲಾಲ, ವಲಯ ಪ್ರಗತಿ ಬಂಧು ಒಕ್ಕೂಟ ವಲಯ ಅಧ್ಯಕ್ಷ ಬಿ.ಎ.ರಜಾಕ್, ಬೆಳ್ತಂಗಡಿ ವಲಯ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಪುರುಷೋತ್ತಮ ಕನ್ನಾಜೆ, ಬೆಳ್ತಂಗಡಿ ಆಂ.ಮಾ.ಶಾಲೆ ಸಹ ಶಿಕ್ಷಕಿ ಪ್ರಮಿಳಾ ಇದ್ದರು.

ಲಾಯಿಲ ಪ್ರಗತಿಪರ ಕೃಷಿಕ ಭೋಜ ಮಲೆಕುಡಿಯ ಎನೇಲ್ ಗೊಬ್ಬು ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿದರು.

ಬೆಳ್ತಂಗಡಿ ಪ್ರಗತಿ ಬಂಧು ಸ್ವ.ಸ.ಸಂಘ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಸ್ವಾಗತಿಸಿದರು. ಸಚಿನ್ ಗೇರುಕಟ್ಟೆ ನಿರೂಪಿಸಿದರು. ಕ್ರೀಡಾಕೂಟವನ್ನು ವಿಜಯ್ ಅತ್ತಾಜೆ ನಡೆಸಿಕೊಟ್ಟರು.

ಮಕ್ಕಳು, ಮಹಿಳೆಯರಿಗೆ, ಪುರುಷರಿಗೆ ಹಗ್ಗ-ಜಗ್ಗಾಟ, ನಿಧಿ ಹುಡುಕುವುದು, ಸಂಧಿ ಪಾಡ್ದನ, ಕಬಡ್ಡಿ, ತ್ರೋಬಾಲ್, ಗೂಟದ ಓಟ ಸಹಿತ ಮುಂತಾದ ಕ್ರೀಡಾ ಕೂಟ ನಡೆಯಿತು.

Share this article