ಕನ್ನಡಪ್ರಭ ವಾರ್ತೆ ನಾಪೋಕ್ಲು
ದೈಹಿಕವಾಗಿ ಮಾನಸಿಕವಾಗಿ ಬೆಳವಣಿಗೆ ಸಾಧಿಸಬೇಕು: ಪ್ರಸ್ತುತ ವಿದ್ಯಾರ್ಥಿಗಳಿಗೆ ಅವಕಾಶಗಳಿವೆ, ಹಿಂದಿನ ಕಾಲದಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಕ್ರೀಡಾ ಮೈದಾನಗಳಲ್ಲಿ ಅಭ್ಯಾಸ ಮಾಡಿ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ಶಾಲೆಗೆ ನಡೆದುಹೋಗುವ ಪರಿಸ್ಥಿತಿ ಇದ್ದು ಕ್ರೀಡೆಗೆ ಅಗತ್ಯವಿರುವ ಸ್ಟಿಕ್ ಗಳನ್ನು, ಚೆಂಡುಗಳನ್ನು ಸಹ ವಿದ್ಯಾರ್ಥಿಗಳು ಮನೆಗಳಿಂದಲೇ ತರಬೇಕಿತ್ತು. ಈಗ ಹಾಗಿಲ್ಲ. ಪರಿಸ್ಥಿತಿ ಬದಲಾಗಿದೆ. ವಿದ್ಯಾರ್ಥಿಗಳ ಆಯ್ಕೆಗೆ ಉತ್ತಮ ಶಾಲೆಗಳಿವೆ. ಶಾಲೆಗಳಲ್ಲಿ ಕ್ರೀಡಾ ಸೌಲಭ್ಯಗಳಿವೆ. ಕ್ರೀಡೆಯ ನೀತಿ ನಿಯಮಗಳನ್ನು ಹೇಳಿಕೊಡುವ ದೈಹಿಕ ಶಿಕ್ಷಕರಿದ್ದಾರೆ. ಇವುಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬರಬೇಕು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ . ಹೆದರಿಕೆ ಇಲ್ಲದೆ ವಿದ್ಯಾರ್ಥಿಗಳು ಪಾಲ್ಗೊಂಡು ದೈಹಿಕವಾಗಿ ಮಾನಸಿಕವಾಗಿ ಬೆಳವಣಿಗೆ ಸಾಧಿಸಬೇಕು ಎಂದರು.ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ನೆರವಂಡ ಸುನಿಲ್ ದೇವಯ್ಯ, ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರಾದ ನಿವೃತ್ತ ಡಿ ವೈ ಎಸ್ ಪಿ ಬಿದ್ದಾಟಾಂಡ ಮುತ್ತಣ್ಣ, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ , ಕಲಿಯಂಡ ಕೌಶಿಕ್ ಕುಶಾಲಪ್ಪ, ಭಟ್ಟಿರ ಸುಬ್ಬಯ್ಯ, ಪ್ರಾಂಶುಪಾಲರಾದ ಕಲ್ಯಾಟಂಡ ಶಾರದಾ ಹಾಗೂ ಹಿರಿಯರಾದ ಮಂದಪಂಡ ಕುಟ್ಟಣ್ಣ ಮತ್ತು ಶಿಕ್ಷಕ ವರ್ಗ ಸಿಬ್ಬಂದಿ, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಅಂಗ ಸಾಧನೆ, ಲೇಜಿಮ್, ಪಥಸಂಚಲನ ಸೇರಿದಂತೆ ವಿವಿಧ ಮನರಂಜನ ಕಾರ್ಯಕ್ರಮ ಜರುಗಿದವು, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಆಡಳಿತ ಮಂಡಳಿ ಪದಾಧಿಕಾರಿ ಸದಸ್ಯರಿಗೆ, ಶಿಕ್ಷಕರಿಗೆ, ಸಿಬ್ಬಂದಿಗೆ, ಪೋಷಕರಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.ವಿದ್ಯಾರ್ಥಿ ಪರಿಧಿ ಪೂವಮ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲರಾದ ಕಲ್ಯಾಟಂಡ ಶಾರದಾ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು. ಅತಿಥಿಗಳ ಪರಿಚಯವನ್ನು ಶಿಕ್ಷಕಿ ಉದ್ದಿ ಅಂಡ ಲೀಲಾವತಿ ಮಾಡಿ ದೈಹಿಕ ಶಿಕ್ಷಕಿ ಕನ್ನಡ ಸರಿತಾ ಕ್ರೀಡಾ ವರದಿ ವಾಚಿಸಿದರು, ಶಿಕ್ಷಕರಾದ ಮೂಡೇರ ಕಾಳಯ್ಯ ಹಾಗೂ ಶಿಕ್ಷಕಿ ಕಂಗಂಡ ಶ್ವೇತ ಕಾರ್ಯಕ್ರಮ ನಿರೂಪಿಸಿ ಅನಿತಾ ವಂದಿಸಿದರು.