ಕ್ರೀಡೆಗಳಿಂದ ವಿದ್ಯಾರ್ಥಿಗಳಲ್ಲಿ ಧೈರ್ಯ ಕೇಂದ್ರೀಕರಣ

KannadaprabhaNewsNetwork |  
Published : Nov 05, 2025, 12:45 AM IST
ಮ | Kannada Prabha

ಸಾರಾಂಶ

ಕರಾಟೆ ಸೇರಿದಂತೆ ಬಹುತೇಕ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಧೈರ್ಯವನ್ನು ಕೇಂದ್ರೀಕರಣಗೊಳಿಸಿ ತಾಳ್ಮೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ನವಚೈತನ್ಯ ಶಾಲೆಯ ನವಚೈತನ್ಯ ವಿದ್ಯಾಲಯ ಮುಖ್ಯಶಿಕ್ಷಕಿ ಶಿವಜ್ಯೋತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಕರಾಟೆ ಸೇರಿದಂತೆ ಬಹುತೇಕ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಧೈರ್ಯವನ್ನು ಕೇಂದ್ರೀಕರಣಗೊಳಿಸಿ ತಾಳ್ಮೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ನವಚೈತನ್ಯ ಶಾಲೆಯ ನವಚೈತನ್ಯ ವಿದ್ಯಾಲಯ ಮುಖ್ಯಶಿಕ್ಷಕಿ ಶಿವಜ್ಯೋತಿ ಅಭಿಪ್ರಾಯ ವ್ಯಕ್ತಪಡಿಸಿದರು.ಕರಾಟೆಯಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾದ ನವಚೈತನ್ಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಕರಾಟೆ ಕೇವಲ ಕ್ರೀಡೆ ಮಾತ್ರವಲ್ಲ ಬದಲಾಗಿ ದೈಹಿಕ ಕ್ಷಮತೆ, ಆತ್ಮ ವಿಶ್ವಾಸ, ಶಿಸ್ತಿನ ಮನೋಭಾವ ಮತ್ತು ಆತ್ಮರಕ್ಷಣೆಯ ಕಲೆಯಾಗಿದೆ. ಕರಾಟೆಯಲ್ಲಿನ ಬೆಲ್ಟ್ ಗ್ರೇಡಿಂಗ್ ವ್ಯವಸ್ಥೆ ವಿದ್ಯಾರ್ಥಿಯ ಪ್ರಯಾಣವನ್ನು ಅಳೆಯುವ ಅತ್ಯಂತ ಪ್ರಮುಖ ಹಂತವಾಗಿದೆ, ಪ್ರತಿ ಬೆಲ್ಟ್ ಬಣ್ಣವು ತರಬೇತಿಯ ಗುಣಮಟ್ಟ ಹಾಗೂ ಕೌಶಲ್ಯವನ್ನು ಪ್ರತಿನಿಧಿಸಲಿದೆ ಎಂದರು.

ತರಬೇತುದಾರರಾದ ಮನಿಷಾ ಕಬ್ಬೂರ ಮಾತನಾಡಿ, ವಿದ್ಯಾರ್ಥಿಗಳು ಕರಾಟೆ ಕಲಿಯುವುದರಿಂದ ಸಂಕಷ್ಟದ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಅಲ್ಲದೇ ಸರ್ಕಾರ ಆಯೋಜಿಸುವ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರತಿಭೆಗಳಿಗೆ ಅವಕಾಶ ಸಿಗಲಿದ್ದು, ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದಲ್ಲಿ ಕರಾಟೆಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದರು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಶೇಖರಗೌಡ ಕರೇಗೌಡ್ರ, ಶಂಕರ ಬಣಗಾರ, ಎಸ್.ಕೆ. ವೀಣಾ, ಶಾಂತೇಶ ಪೂಜಾರ, ನಿಯಾಜ ಅಹಮ್ಮದ ಕೋಲ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಆಯ್ಕೆಯಾದ ವಿದ್ಯಾರ್ಥಿಗಳು: ಸಿಂಚನಾ ಇಂಡಿಮಠ (ಬ್ರೌನ್‌ಬೆಲ್ಟ್), ಹರೀಶ ಅಂಗಡಿ (ಬ್ಲೂಬೆಲ್ಟ), ಮೋಹಿದ್ದಿನ್ ಹೆರೂರ (ಪರ್ಪಲ್ ಬೆಲ್ಟ್) ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾದರೇ, ಚಂದ್ರಶೇಖರ ಬಣಗಾರ, ಆಕಾಶ ಪೂಜಾರ, ಹಾಲನಗೌಡ ಭದ್ರ ಗೌಡರ, ಚಂದನ ಅಂಗಡಿ, ಗೌತಮಿ ಸಂಕಣ್ಣನವರ, ಅಭಯ ಬಣಕಾರ, ಹರ್ಷ ಕೋಡಿಹಳ್ಳಿ, ಧರಣೀಶ ತೇವರಿ, ಖುಷಿ ಬಣಗಾರ, ಸಾಕ್ಷಿ ಪಾಟೀಲ, ವರ್ಣಿತಾ ಬನ್ನಿಹಟ್ಟಿ ಮತ್ತು ತನುಶ್ರೀ ಗೌಡರ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ