ಮಡಿಕೇರಿ ಹೊರವಲಯದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಆಯೋಜಿಸಲಾದ ನಾಪೋಕ್ಲು ಬೊಟ್ಟೋಳಂಡ ಕುಟುಂಬದ ವತಿಯಿಂದ ನಾಪೋಕ್ಲು ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ 2024ರ ಏಪ್ರಿನಲ್ಲಿ ನಡೆಯಲಿರುವ ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಲಾಂಛನವನ್ನು ಬಿಡುಗಡೆ
ಕನ್ನಡಪ್ರಭ ವಾರ್ತೆ ನಾಪೋಕ್ಲು ಕೊಡಗಿನ ಸಂಸ್ಕೃತಿ ಸಾಂಪ್ರದಾಯಿಕ ಆಚರಣೆಗಳಲ್ಲಿ ಕ್ರೀಡೆಯೂ ಒಂದಾಗಿದ್ದು ಇದು ಸಮಾಜದಲ್ಲಿರುವ ಸಣ್ಣಪುಟ್ಟ ಭಿನ್ನಗಳನ್ನು ದೂರ ಮಾಡಿ ಪರಸ್ಪರ ಬೆಸೆಯುವ ಕಾರ್ಯವನ್ನು ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಹೇಳಿದರು. ಮಡಿಕೇರಿ ಹೊರವಲಯದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಆಯೋಜಿಸಲಾದ ನಾಪೋಕ್ಲು ಬೊಟ್ಟೋಳಂಡ ಕುಟುಂಬದ ವತಿಯಿಂದ ನಾಪೋಕ್ಲು ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ 2024ರ ಏಪ್ರಿನಲ್ಲಿ ನಡೆಯಲಿರುವ ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸರ್ಕಾರ ಕ್ರೀಡೆಗಳಿಗೆ ಸಹಕಾರ ನೀಡುತ್ತಿದೆ ಎಂದ ಅವರು ಕೊಡಗಿನ ಹಲವು ಕ್ರೀಡಾ ಪ್ರತಿಭೆಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಇಂತಹ ಕ್ರೀಡಾಕೂಟಗಳಿಂದಾಗಿ ಹೊರಹೊಮ್ಮಲಿ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬೊಟ್ಟೋಳಂಡ ಕುಟುಂಬದ ಪರವಾಗಿ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕ್ ಇನ್ಸ್ ಪೆಕ್ಟರ್ ತೀತೀರ ಅಪ್ಪಚ್ಚು, ಕೊಡವ ಟಗ್ಆ ಫ್ ವಾರ್ ಅಕಾಡೆಮಿಯ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ತಲಿಯಕ್ಕಿ ಬೆಳಕ್ ದುಡ್ಡು ಕೊಟ್ಟು ಪಾಟ್‌ನೊಂದಿಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟೋಳಂಡ ಪೂಣಚ್ಚ (ಅಚ್ಚಿ) ವಹಿಸಿದ್ದರು. ಮಿಟ್ಟು ಚಂಗಪ್ಪ, ವಾಸು ಮುತ್ತಪ್ಪ , ಡಾಲು ಸೋಮಯ್ಯ, ಲಿಂಗಪ್ಪ, ನೈಲಾ ಗಣಪತಿ, ರಂಜಿತ್ ಪಳoಗಪ್ಪ, ತೀತೀರ ಶರ್ಮಿಳಾ, ಕಾರ್ಯಾಧ್ಯಕ್ಷ ಬಿ. ಗಣೇಶ್, ಸಂಚಾಲಕ ಮಿಟ್ಟು ಪೂಣಚ್ಚ, ಖಜಾಂಜಿ ರಮೇಶ್ ಪೊನ್ನಯ್ಯ, ಸಹ ಕಾರ್ಯದರ್ಶಿ ರವಿ ಕರುಂಬಯ್ಯ, ಅಕಾಡೆಮಿ ನಿರ್ದೇಶಕರು, ಬೊಟ್ಟೋಳಂಡ ಕುಟುಂಬಸ್ಥರು, ಇನ್ನಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.