ಕ್ರೀಡಾಕೂಟ: ಭಾಗಮಂಡಲ ವಸತಿ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

KannadaprabhaNewsNetwork |  
Published : Aug 31, 2025, 02:00 AM IST
ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟದಲ್ಲಿ  ಭಾಗವಹಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ. | Kannada Prabha

ಸಾರಾಂಶ

ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ವಿದ್ಯಾರ್ಥಿಗಳು ಚೇರಂಬಾಣೆಯಲ್ಲಿ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಲಯಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಲಯ ಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, ಕಬಡ್ಡಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ಪ್ರಥಮ, ವಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, ಪ್ರಾಥಮಿಕ ವಿಭಾಗದ ಬಾಲಕರ ವಿಭಾಗದಲ್ಲಿ ವಾಲಿಬಾಲ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ಪ್ರಥಮ, ಥ್ರೋಬಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರೌಢಶಾಲಾ ಅಥೇಟಿಕ್ಸ್ ವಿಭಾಗದಲ್ಲಿ ಧನ್ಯ 3000 ಮೀಟರ್, ಹೈಜಂಪ್, ಲಾಂಗ್ ಜಂಪ್‍ನಲ್ಲಿ ಪ್ರಥಮ, ವರ್ಷಿಣಿ 100 ಮೀ. ಪ್ರಥಮ, 200 ಮೀ. ಪ್ರಥಮ, ತ್ರಿಪಲ್ ಜಂಪ್ ದ್ವಿತೀಯ, ವರ್ಷಾ 400 ಮೀ. ಪ್ರಥಮ, ಡಯಾನಾ ಶಾಟ್ ಪುಟ್ ತೃತೀಯ, ತಟ್ಟೆ ಎಸೆತ ಪ್ರಥಮ, ಸನಿತಾ ಜಾವೇಲಿನ ಥ್ರೋ ಪ್ರಥಮ, ಸುಕನ್ಯಾ 1,500 ಪ್ರಥಮ, ತ್ರಿಪಲ್ ಜಂಪ್ ತೃತೀಯ, ರಿಲೇ 4*400 ಪ್ರಥಮ, 4*100 ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ಧ್ಯಾನ್ 1,500 ಮೀ. ಪ್ರಥಮ, ಹೈಜಂಪ್ ದ್ವಿತೀಯ, ಹರ್ಡಲ್ಸ್‌ ಪ್ರಥಮ, ಪವನ್ ಪೊನ್ನಣ್ಣ ತ್ರಿಪಲ್ ಜಂಪ್ ಪ್ರಥಮ, 1500 ಮೀಟರ್ ದ್ವಿತೀಯ, ಶಶಾಂಕ್ ತಟ್ಟೆ ಎಸೆತ ದ್ವಿತೀಯ, ಶಾಟ್ ಪುಟ್ ದ್ವಿತೀಯ, 400 ಮೀ. ತೃತಿಯ, ದೇವೇಂದ್ರ 200 ಮೀಟರ್ ತೃತೀಯ, ಸಮರ್ಥ್ 3000 ಮೀ. ದ್ವಿತೀಯ, ಮಧು 3000 ಮೀಟರ್ ತೃತೀಯ, ಚಿರಾಗ್ 800 ಮೀ. ತೃತೀಯ, ಹೃತಿಕ್ ರೋಹನ್ ಲಾಂಗ್ ಜಂಪ್ ದ್ವಿತೀಯ, ಜಾವೇಲಿನ್ ಥ್ರೋ ತೃತೀಯ, ರಿಲೇ 4*100 ದ್ವಿತೀಯ, 4*400 ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ