ಸತತ ಪರಿಶ್ರಮದಿಂದ ಕ್ರೀಡಾ ಸಾಧನೆ ಖಚಿತ: ಡಾ.ಅರುಣಕುಮಾರ ಗಾಳಿ

KannadaprabhaNewsNetwork |  
Published : Nov 16, 2025, 03:00 AM IST
(ಫೋಟೊ 15ಬಿಕೆಟಿ3, ಬಾಗಲಕೋಟೆ ನವನಗರ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಕ್ರೀಡಾ ವಿಭಾಗದ ಆಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭ) | Kannada Prabha

ಸಾರಾಂಶ

ಪದವಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಅಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ, ಉತ್ಸಾಹ ರೂಢಿಸಿಕೊಳ್ಳಬೇಕು. ನಮ್ಮ ಕಾಲೇಜಿನ ಕ್ರೀಡಾಪಟುಗಳ ಸಾಧನೆಯಿಂದ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೀರ್ತಿ ಹೆಚ್ಚಿದೆ. ಸತತ ಪರಿಶ್ರಮದಿಂದ ಕ್ರೀಡಾ ಸಾಧನೆ ಖಚಿತ ಎಂದು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪದವಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಅಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ, ಉತ್ಸಾಹ ರೂಢಿಸಿಕೊಳ್ಳಬೇಕು. ನಮ್ಮ ಕಾಲೇಜಿನ ಕ್ರೀಡಾಪಟುಗಳ ಸಾಧನೆಯಿಂದ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೀರ್ತಿ ಹೆಚ್ಚಿದೆ. ಸತತ ಪರಿಶ್ರಮದಿಂದ ಕ್ರೀಡಾ ಸಾಧನೆ ಖಚಿತ ಎಂದು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು.

ಇತ್ತೀಚಿಗೆ ರಬಕವಿ-ಬನ್ನಟ್ಟಿಯಲ್ಲಿ ಆಯೋಜಿಸಿದ್ದ ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯ ಮಟ್ಟದ 2025-26 ನೆಯ ಸಾಲಿನ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗದ ಆಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು. ಕ್ರೀಡಾ ಚಟುವಟಿಕೆಗಳು ಆರೋಗ್ಯಕರ ಬದುಕಿಗೆ ಪೂರಕವಾಗಿದ್ದು, ನಮ್ಮ ಕಾಲೇಜಿನ ಕ್ರೀಡಾ ನಿರ್ದೇಶಕರಾದ ನೀಲಪ್ಪ ಕುರಿ ಅವರ ಪರಿಶ್ರಮ, ಮಾರ್ಗದರ್ಶನದಿಂದ ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ಅನುಕೂಲವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕ್ರೀಡಾ ನಿರ್ದೇಶಕ ನೀಲಪ್ಪ ಕುರಿ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಸತತ ಪರಿಶ್ರಮದ ಫಲವಾಗಿ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ 22 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಕಾಲೇಜಿನ ಕೀತಿ ತಂದಿರುವುದು ಹೆಮ್ಮ ತಂದಿದೆ ಎಂದು ಹೇಳಿದರು.

ಪುರುಷರ ವಿಭಾಗ: 100 ಮೀ, 200 ಮೀ ಓಟದಲ್ಲಿ, ಮತ್ತು 4/100 ರಿಲೇಯಲ್ಲಿ ವಿಶಾಲ ಲಮಾಣಿ ಪ್ರಥಮ ಸ್ಥಾನ, ತ್ರೀವಿಧ ಜಿಗಿತದಲ್ಲಿ ವೇಂಕಟೇಶ ಬಡಿಗೇರ ಪ್ರಥಮ ಸ್ಥಾನ, 4/100 ರಿಲೇಯಲ್ಲಿ ವೀರೇಶ ಲಮಾಣಿ, ಕಿರಣಕುಮಾರ ಲಮಾಣಿ, ಭರಮಪ್ಪ ತುಳಸಿಗೇರಿ ಪ್ರಥಮ, 800 ಮೀ.ಓಟದಲ್ಲಿ ಮುತ್ತಪ್ಪ ಯಕನಾಳ ದ್ವಿತೀಯ, 4/400 ರಿಲೇಯಲ್ಲಿ ಮುಬಿನ ಮುರಾಳ, ಮುತ್ತಪ್ಪ ಯಕನಾಳ, ವಿನಾಯಕ ಅರಳಿಕಟ್ಟಿ, ವೆಂಕಟೇಶ ಬಡಿಗೇರ ದ್ವಿತೀಯ, 4/400 ರಿಲೇ ಮಿಶ್ರಿತ ಸ್ಪರ್ಧೆಯಲ್ಲಿ ಮುತ್ತಪ್ಪ ಯಕನಾಳ, ವೆಂಕಟೇಶ ಬಡಿಗೇರ ತೃತೀಯ ಹಾಗೂ ಉದ್ದ ಜಿಗತ ಸ್ಪರ್ಧೆಯಲ್ಲಿ ವೆಂಕಟೇಶ ಬಡಿಗೇರ ತೃತೀಯ ಪಡೆದಿದ್ದಾರೆ.

ಮಹಿಳಾ ವಿಭಾಗ: 400 ಮೀ ಓಟದಲ್ಲಿ ಯಲ್ಲಮ್ಮ ತಳವಾರ ಪ್ರಥಮ, ಚಕ್ರ ಎಸೆತ ಮತ್ತು ಗುಂಡು ಎಸೆತದಲ್ಲಿ ಅಶ್ವಿನಿ ನರಸನ್ನವರ ಪ್ರಥಮ, ಬಲ್ಲೆ ಎಸೆತದಲ್ಲಿ ನಿಶಾ ಚವ್ಹಾನ ದ್ವಿತೀಯ, 200 ಮೀ. ಓಟದಲ್ಲಿ ಅಕ್ಷತಾ ಮಾದರ ದ್ವಿತೀಯ, ತ್ರೀವಿಧ ಜಿಗತದಲ್ಲಿ ಪ್ರೇಮಾ ಲಮಾಣಿ ತೃತೀಯ, 10000 ಮೀ ಓಟದಲ್ಲಿ ಮೀನಾಕ್ಷಿ ಚಲವ್ವನ್ನವರ ತೃತೀಯ, 4ಥ400 ರಿಲೇ ಮಿಶ್ರಿತ ಸ್ಪರ್ಧೆಯಲ್ಲಿ ಯಲ್ಲಮ್ಮ ತಳವಾರ, ರೇಣುಕಾ ಮಡಿವಾಳರ ತೃತೀಯ ಸ್ಥಾನ ಪಡೆದಿದ್ದಾರೆ. ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. ಪುರುಷರ ವಿಭಾಗ: ವಿಶಾಲ ಲಮಾಣಿ 100 ಮೀ, 200 ಮೀ ಓಟದಲ್ಲಿ, ಮತ್ತು 4/100 ರಿಲೇ ಪ್ರಥಮ ಸ್ಥಾನದೊಂದಿಗೆ ಮೂರು ಬಂಗಾರ ಪದಕ ಪಡೆದಿದ್ದರೆ, ಮಹಿಳಾ ವಿಭಾಗದಲ್ಲಿ ಅಶ್ವಿನಿ ನರಸನ್ನವರ ಚಕ್ರ ಎಸೆತ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಎರಡು ಚಿನ್ನದ ಪದಕ ಪಡೆದಿದ್ದಾಳೆ.

PREV

Recommended Stories

ಸೆಸ್ಕ್ ಅಭಿಯಂತರಗೆ ಸನ್ಮಾನ ಕಾರ್ಯಕ್ರಮ
ಕಟೀಲು ಏಳು ಮೇಳಗಳ ದೇವರು, ಪರಿಕರಗಳ ಮೆರವಣಿಗೆ