ಪ್ರಗತಿಪರ ರೈತ ಪ್ರಕಾಶ ಶಿಗ್ಲಿ ಅವರು ಸೋಮವಾರ ತಾವು ಉಳುಮೆ ಮಾಡುವ ಹೊಲದಲ್ಲಿ ಡ್ರೋನ್ ಬಳಸಿ ನವೀನ ನ್ಯಾನೋ ಯೂರಿಯಾವನ್ನು ಸಿಂಪಡೆ ಮಾಡುವ ಕಾರ್ಯವನ್ನು ಶಾಸಕ ಎನ್.ಎಚ್. ಕೋನರಡ್ಡಿ ವೀಕ್ಷಿಸಿದರು.
ನವಲಗುಂದ: ಡ್ರೋಣ್ ಮೂಲಕ ಸಿಂಪರಣೆ ಮಾಡುವುದರಿಂದ ರೈತರು ಅಲ್ಪ ಗೊಬ್ಬರದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶದಲ್ಲಿ ತಮ್ಮ ಬೆಳೆಗೆ ಸಿಂಪಡೆ ಮಾಡಬಹುದಾಗಿದೆ. ಹೆಚ್ಚಿನ ರೈತರು ಇದರ ಉಪಯೋಗ ಪಡೆಯಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಪಟ್ಟಣದ ಗುಡ್ಡದ ಹಿಂದುಗಡೆ ಇರುವ ಪ್ರಗತಿಪರ ರೈತ ಪ್ರಕಾಶ ಶಿಗ್ಲಿ ಅವರು ಸೋಮವಾರ ತಾವು ಉಳುಮೆ ಮಾಡುವ ಹೊಲದಲ್ಲಿ ಡ್ರೋನ್ ಬಳಸಿ ನವೀನ ನ್ಯಾನೋ ಯೂರಿಯಾವನ್ನು ಸಿಂಪಡೆ ಮಾಡುವ ಕಾರ್ಯ ವೀಕ್ಷಿಸಿ ಮಾತನಾಡಿದರು. ರೈತರು ಕೃಷಿಯಲ್ಲಿ ಪ್ರಗತಿಯತ್ತ ದಾಪುಗಾಲಿಡಲು ನೂತನ ತಂತ್ರಜ್ಞಾನ ಬಳಸಿಕೊಳ್ಳುವ ಅವಶ್ಯಕತೆ ಇದೆ ಎಂದರು
ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರಾದ ಜೀವನ ಪವಾರ, ಬಾಬಾಜಾನ ಮಕಾನದಾರ, ಸುರೇಶ ಮೇಟಿ, ಪಗ್ರತಿಗಪರ ರೈತರಾದ ಡಿ.ಕೆ. ಹಳ್ಳದ, ಲೋಕನಾಥ ಹೆಬಸೂರ, ಭರಮಪ್ಪ ಕಾತರಕಿ, ವಿಕಾಸ ತದ್ದೆವಾಡಿ, ಪಿಎಸ್ಐ ಜನಾರ್ಧನ, ಕೃಷಿ ಸಹಾಯಕ ನಿರ್ದೇಶಕ ರವಿಂದ್ರಗೌಡ ಪಾಟೀಲ, ಬಿ.ಎಲ್. ಜೈನರ, ಮೌಲಾಸಾಬ ಖುದ್ದಣ್ಣವರ, ಮೈಲಾರಪ್ಪ ವೈದ್ಯ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.