ಚನ್ನಪಟ್ಟಣ: ಕನ್ನಡ ಸಾಹಿತ್ಯದ ಸೊಬಗನ್ನು ಪಸರಿಸುವ ಕೆಲಸವನ್ನು ಮಾಡಲು ಸರ್ವರೂ ಸನ್ನದ್ಧರಾಗಿ ನಿಲ್ಲಬೇಕಾದ ಅನಿಚಾರ್ಯ ಪರಿಸ್ಥಿತಿ ಇದೆ. ಕನ್ನಡ ಉಳಿವಿನ ಮಾರ್ಗಗಳನ್ನು ಮತ್ತಷ್ಟು ಶೋಧಿಸಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸು.ತ.ರಾಮೇಗೌಡ ತಿಳಿಸಿದರು.
ಕಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ ಮಾತನಾಡಿ, ಕನ್ನಡದ ಬಗೆಗೆ ಕನ್ನಡಿಗರು ಅಭಿಮಾನ ಮೂಡಿಸಿಕೊಳ್ಳದ ಹೊರತು, ಕನ್ನಡತನ ಉಳಿಯಲು ಸಾಧ್ಯವಿಲ್ಲ. ನೆಲ, ಜಲ, ಭಾಷೆ, ಆಹಾರ, ಸಂಸ್ಕೃತಿ ಇತ್ಯಾದಿ ಅಂಶಗಳು ಹೆಮ್ಮೆಯ ವಿಷಯವಾಗಬೇಕು ಎಂದು ತಿಳಿಸಿದರು.
ಕವಯಿತ್ರಿ ಡಾ.ರಾಜಶ್ರೀ ಮಾತನಾಡಿ, ಕನ್ನಡ ಸಾಹಿತ್ಯವನ್ನು ವಿಶ್ವ ದರ್ಜೆಗೆ ಏರಿಸಿದ ಕೀರ್ತಿ ನಮ್ಮ ಕವಿಗಳಿಗೆ ಸಲ್ಲುತ್ತದೆ. ಕನ್ನಡ ಗಳಿಸಿರುವ ಶ್ರೇಷ್ಠತೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಟಿ. ಪ್ರಸನ್ನ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಸಂಸ್ಥೆಯ ಝೋನಲ್ ಗೌರ್ನರ್ ಬಿ. ಪುಟ್ಟಸ್ವಾಮಯ್ಯ, ಅಸಿಸ್ಟೆಂಟ್ ಗೌರ್ನರ್ ಕೆ. ಗವಿರಾಜು, ಕಾರ್ಯದರ್ಶಿ ಎಲೆಕೇರಿ ವಿನಯ್, ಭಾವಿಪ ಮಾಜಿ ಅಧ್ಯಕ್ಷ ವಸಂತಕುಮಾರ್, ಹಿರಿಯ ಕವಿ ಬೋರಲಿಂಗಯ್ಯ ದ್ಯಾವಪಟ್ಟಣ, ಯುವಕವಿ ಸಚಿನ್ ಕೆಲಗೆರೆ, ಬಿವಿಎಸ್ ಸಂಘಟನೆಯ ಕುಮಾರ್, ರೋಟರಿ ಸದಸ್ಯರಾದ ರಾಮ ಪ್ರಸಾದ್, ಸಿ.ಜಿ. ರಮೇಶ್ ಕುಮಾರ್, ಮಂಗಳವಾರಪೇಟೆ ಲೋಕೇಶ್, ಶಿವರಾಜು, ವಕೀಲ ಶಿವಶಂಕರ್, ಗ್ರಂಥಾಲಯ ಮೇಲ್ವಿಚಾರಕ ವೈದ್ಯೇಗೌಡ, ಶಿಲ್ಪಿ ಹರೀಶ್, ಸಾಗರ್, ಆಕಾಶ್ ಜೈನ್, ಸಾಹಿತಿ ಡಾ. ವಿಜಯ್ ರಾಂಪುರ ಮುಂತಾದವರು ಹಾಜರಿದ್ದರು.
ಪೊಟೋ೨ಸಿಪಿಟಿ೧:ಚನ್ನಪಟ್ಟಣದ ಸರ್ಕಾರಿ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಾಗೂ ಗಡಿಯಾರ ಫಲಕ ಅನಾವರಣ ಕಾರ್ಯಕ್ರಮ ನಡೆಯಿತು.