ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಗುರುವಾರದಿಂದ ಮೇ.೧೫ ರ ವರೆಗೆ ವಸಂತ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ೫ ವರ್ಷದ ಬಾಲಕ -ಬಾಲಕಿರಿಂದ ೮೦ ವರ್ಷದ ಎಲ್ಲ ವಿಪ್ರ ಪುರುಷ-ಸ್ತ್ರೀಯರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಬೋಧಿಸಲಾಗುತ್ತಿದೆ.
ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಗುರುವಾರದಿಂದ ಮೇ.೧೫ ರ ವರೆಗೆ ವಸಂತ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ೫ ವರ್ಷದ ಬಾಲಕ -ಬಾಲಕಿರಿಂದ ೮೦ ವರ್ಷದ ಎಲ್ಲ ವಿಪ್ರ ಪುರುಷ-ಸ್ತ್ರೀಯರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಬೋಧಿಸಲಾಗುತ್ತಿದೆ. ಮಕ್ಕಳಿಗೆ ಸಂಧ್ಯಾವಂದನೆ, ಹಿರಿಯರಿಗೆ ದೇವರ ಪೂಜೆ, ಸ್ತೋತ್ರಗಳು, ಸ್ತ್ರೀಯರಿಗೆ ಸ್ತ್ರೀಧರ್ಮ ಇತ್ಯಾದಿ ಪಾಠ ಹೇಳಿಕೊಡಲಾಗುತ್ತಿದೆ.
ಶಿಬಿರವು ಪ್ರತಿದಿನ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆ ವರೆಗೆ ಹಾಗೂ ಸ್ತ್ರೀಯರಿಗೆ ಸಂಜೆ ೪.೪೦ರಿಂದ ೬.೩೦ಗಂಟೆ ವರೆಗೆ ಮಕ್ಕಳಿಗೆ ಮಧ್ಯಾಹ್ನ ಭೋಜನ ಹಾಗೂ ಸಂಜೆ ಪಾನೀಯ ವ್ಯವಸ್ಥೆ ಇರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಕಾರಣ ಎಲ್ಲ ವಿಪ್ರ ಬಂಧುಗಳು ಈ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀಮಠದ ಆಡಳಿತ ಮಂಡಳಿ ಸರ್ವ ಸದಸ್ಯರು ಕೋರಿರುವರು. ಹೆಚ್ಚಿನ ಮಾಹಿತಿಗಾಗಿ ೯೪೪೮೯೫೫೨೧೦ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.