ಎಸ್‌ಪಿಎಸ್ ಬ್ಯಾಂಕಿಗೆ ₹2.36 ಕೋಟಿ ನಿವ್ವಳ ಲಾಭ: ಡಾ. ಎಚ್.ಆರ್. ಹಾಲಂಬಿ

KannadaprabhaNewsNetwork |  
Published : Aug 10, 2026, 02:15 AM IST
09ಎಸ್.ಎನ್.ಡಿ.01ಸಂಡೂರಿನ ರತ್ನ ದೀಪ ಸಭಾಂಗಣದಲ್ಲಿ ಶನಿವಾರ ನಡೆದ ಎಸ್‌ಪಿಎಸ್ ಬ್ಯಾಂಕಿನ ಸರ್ವ ಸದಸ್ಯರ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ (ಎಸ್‌ಪಿಎಸ್ ಬ್ಯಾಂಕ್) 2025-26ನೇ ಆರ್ಥಿಕ ವರ್ಷದಲ್ಲಿ ₹3.13 ಕೋಟಿ ಲಾಭಗಳಿಸಿದ್ದು, ತೆರಿಗೆ ಪಾವತಿಸಿದ ನಂತರ ₹2.36 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ಡಾ. ಎಚ್.ಆರ್. ಹಾಲಂಬಿ ತಿಳಿಸಿದರು.

ಸಂಡೂರು: ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ (ಎಸ್‌ಪಿಎಸ್ ಬ್ಯಾಂಕ್) 2025-26ನೇ ಆರ್ಥಿಕ ವರ್ಷದಲ್ಲಿ ₹3.13 ಕೋಟಿ ಲಾಭಗಳಿಸಿದ್ದು, ತೆರಿಗೆ ಪಾವತಿಸಿದ ನಂತರ ₹2.36 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ಡಾ. ಎಚ್.ಆರ್. ಹಾಲಂಬಿ ತಿಳಿಸಿದರು.

ಪಟ್ಟಣದ ರತ್ನದೀಪ ಸಭಾಂಗಣದಲ್ಲಿ ಶನಿವಾರ ನಡೆದ ಎಸ್‌ಪಿಎಸ್ ಬ್ಯಾಂಕಿನ 29ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು.

2025-26ನೇ ಆರ್ಥಿಕ ವರ್ಷದ ಅಂತ್ಯದಲ್ಲಿ ಬ್ಯಾಂಕಿನ ಠೇವಣಿ 134.33 ಕೋಟಿ ಇದ್ದು, ಸಾಲ ಮತ್ತು ಮುಂಗಡಗಳು ರೂ. 40.04 ಕೋಟಿ ಇದೆ. ಈ ಅವಧಿಯಲ್ಲಿ ಬ್ಯಾಂಕ್ ಒಟ್ಟಾರೆ ₹174.37 ಕೋಟಿ ವಹಿವಾಟು ನಡೆಸಿದೆ. ಬ್ಯಾಂಕಿನ ಬಂಡವಾಳದ ನಿಧಿಯು ₹14.75 ಕೋಟಿಯಿಂದ ₹16.53 ಕೋಟಿಗೆ ಏರಿಕೆಯಾಗಿದೆ. ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ಬ್ಯಾಂಕಿನ ಸಾಲ ವಸೂಲಾತಿ ಉತ್ತಮವಾಗಿದ್ದು, ನಿವ್ವಳ ಎನ್‌ಪಿಎ (ಅನುತ್ಪಾದಕ ಸ್ವತ್ತು) ಶೇ. 0 ಆಗಿದೆ. ಡಿಜಿಟಲ್ ಬ್ಯಾಂಕಿಂಗ್ ವಹಿವಾಟು ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.

ಸದಸ್ಯರ ವಿಶ್ವಾಸ, ಸಹಕಾರ ಮತ್ತು ಪಾಲ್ಗೊಳ್ಳುವಿಕೆಯಲ್ಲಿ ಅಡಕವಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಸದಸ್ಯರು ಸಹಕಾರ ಹಾಗೂ ಸಲಹೆಗಳನ್ನು ನೀಡುವ ಮೂಲಕ ಬ್ಯಾಂಕಿನ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವಂತೆ ತಿಳಿಸಿದರು.

ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ನಾಗರಾಜ ಹಾಗೂ ಸಂಸ್ಥಾಪಕ ಉಪಾಧ್ಯಕ್ಷ ಸಿ. ರವಿಶಂಕರ್ ಅವರು, ಭಾರತೀಯ ರಿಸರ್ವ್ ಬ್ಯಾಂಕ್‌ನ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಅನ್ವಯ, ಬ್ಯಾಂಕಿನ ನೂತನ ಆಡಳಿತ ಮಂಡಳಿ ಆಯ್ಕೆ, ಬ್ಯಾಂಕಿನ ಪ್ರಗತಿಯ ಕುರಿತು ವಿವರಿಸಿದರು.

ಸದಸ್ಯರಿಗೆ ಶೇ. 15 ಲಾಭಾಂಶ:ಕಾರ್ತಿಕ್ ಎ. ಅವರು ಮಾತನಾಡಿ, ಬ್ಯಾಂಕಿನ ಸದಸ್ಯರಿಗೆ ಶೇ. 15 ಲಾಭಾಂಶ ನೀಡಲು ಬ್ಯಾಂಕಿನ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು.

ನಿರ್ದೇಶಕರಾದ ಕೆ. ವೀರಪ್ಪ ಅವರು ಲೆಕ್ಕ ಪರಿಶೋಧಕರು. ಆಂತರಿಕ ಲೆಕ್ಕ ಪರಿಶೋಧಕರ ನೇಮಕ ಕುರಿತು, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಲೆಕ್ಕ ಪರಿಶೋಧಕರ ವರದಿ, ಬ್ಯಾಂಕಿನ ಅಧಿಕಾರಿ ಕುಮಾರ್ ಎ. ಅವರು 2026-27ನೇ ಸಾಲಿನ ವಾರ್ಷಿಕ ಕಾರ್ಯಾಚರಣೆ, ರಾಮಚಂದ್ರ ಮಸೂತಿಯವರು ವಾರ್ಷಿಕ ಬಜೆಟ್ ಅನುಮೋದಿಸುವ ಕುರಿತು, ಕೊಟ್ರೇಶ್‌ ಎ ಅವರು ಕಳೆದ ಸಾಲಿನಲ್ಲಿ ಸೇರಿಸಲ್ಪಟ್ಟ ಹಾಗೂ ಸಮಾಪನೆಗೊಂಡ ಸದಸ್ಯತ್ವಗಳ ವರದಿ ಕುರಿತು ವಿವರಿಸಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಕೆ. ಸ್ವಾಗತಿಸಿದರು. ಬ್ಯಾಂಕಿನ ಕಿರಿಯ ಅಧಿಕಾರಿ ಮಹದೇವಪ್ಪ ಕರೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ನಿರ್ದೇಶಕ ಸಿದ್ದಪ್ಪ ಅಂಕಮನಾಳ, ಜೋತಿ ನಂಜುಂಡಪ್ಪ, ಗಂಗಮ್ಮ ಬಿ., ಹಾಲಿ ನಿರ್ದೇಶಕ ಕೆ.ಎಸ್. ನಿಕಿಲ್, ಅನುಪ್ ಸಿ, ಜೈ ಭಾಸ್ಕರ್ ಕೆ., ನಾರಾಯಣ್ ಆಚಾರ್ ಬಿ., ಸಂತೋಷ ಕುಮಾರ್, ವನಜಾಕ್ಷೀ ಹೊಂಬಳ್, ಮಧುಮತಿ ಎ., ಮಂಜುಳಾ ಜೆ.ಎಂ., ನಾಗರಾಜ ಗುಂಡಿ, ಸಹಾಯಕ ವ್ಯವಸ್ಥಾಪಕಿ ಶ್ವೇತಾ, ಅಧಿಕಾರಿಗಳಾದ ವಿಜಯಲಕ್ಷ್ಮೀ, ಪೂಜಾ ಎ., ಕಿರಿಯ ಅಧಿಕಾರಿ ವಿಶ್ವನಾಥ ಜಿ., ಜಗದೀಶ್ ಎಂ., ಬ್ಯಾಂಕಿನ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಹರು ಕಾಲದಿಂದ ನಾಗೇಂದ್ರ ಕಾಲದ ವರೆಗೆ ಕೈ ಭ್ರಷ್ಟಾಚಾರ: ಸಚಿವ ಬಿ. ಶ್ರೀರಾಮುಲು
ಪಂಚಮಸಾಲಿ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿಪಾಟೀಲ್ ಪದಚ್ಯುತಿಗೆ ನಿರ್ಣಯ