ಎಸ್.ಆರ್.ಪಾಟೀಲ ವೈದ್ಯಕೀಯ ಕಾಲೇಜು ಜನರ ಆಸ್ತಿ

KannadaprabhaNewsNetwork |  
Published : Aug 01, 2024, 01:46 AM IST
ಷಷಷ | Kannada Prabha

ಸಾರಾಂಶ

ತನ್ನ ವೈಯಕ್ತಿಕ ಇಚ್ಚಾಶಕ್ತಿ ಮರೆತು ತನ್ನ ಆಸ್ತಿಯನ್ನೇ ಜನರಿಗಾಗಿ ನೀಡಿದ ಎಸ್.ಆರ್.ಪಾಟೀಲ ಅವರು ನಾಡಿನ ಜನರಿಗೆ ನೀಡಿದ ಈ ವೈದ್ಯಕೀಯ ಮಹಾವಿದ್ಯಾಲಯ ಜನರ ಆಸ್ತಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ತನ್ನ ವೈಯಕ್ತಿಕ ಇಚ್ಚಾಶಕ್ತಿ ಮರೆತು ತನ್ನ ಆಸ್ತಿಯನ್ನೇ ಜನರಿಗಾಗಿ ನೀಡಿದ ಎಸ್.ಆರ್.ಪಾಟೀಲ ಅವರು ನಾಡಿನ ಜನರಿಗೆ ನೀಡಿದ ಈ ವೈದ್ಯಕೀಯ ಮಹಾವಿದ್ಯಾಲಯ ಜನರ ಆಸ್ತಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ತಾಲೂಕಿನ ಬಾಡಗಂಡಿ ಗ್ರಾಮದ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ೬೩೦ ಹಾಸಿಗೆ ಸಾಮರ್ಥ್ಯದ ನವೀಕೃತ ಆಸ್ಪತ್ರೆ ಉದ್ಘಾಟನೆ ಮಾಡಿ ಮುಖ್ಯ ವೇದಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಯೋಜನೆ ತರುವುದು ಸುಲಭದ ಕೆಲಸವಲ್ಲ. ಈ ಯೋಜನೆಗೆ ಖರ್ಚಾಗುವ ಲೆಕ್ಕ ಕೇಳಿದರೆ ಸಾಮಾನ್ಯ ಮಾತಲ್ಲ. ಅಂತಹದರಲ್ಲಿ ಪಾಟೀಲರು ಎಲ್ಲರನ್ನು ಮುಷ್ಟಿಯಲ್ಲಿ ಹಿಡಿದಂತೆ ಹಿಡಿದು, ತಮ್ಮ ಛಲ ಈಡೇರುವವರೆಗೂ ನಿಲ್ಲದೇ ವೈದ್ಯಕೀಯ ಕಾಲೇಜು ಪರವಾನಗಿ ತಂದಿದ್ದಾರೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳಿಗೆ ಬೇಕಾದ ದಾಖಲೆಗಳನ್ನು ನೀಡಿ ಬಡ ಜನರಿಗಾಗಿ ಅದು ಗ್ರಾಮೀಣ ಭಾಗದಲ್ಲಿ ಇಂತಹ ಮಹಾವಿದ್ಯಾಲಯ ತಂದು ತಮ್ಮ ಜೀವನದ ಸಾರ್ಥಕತೆ ಮೆರೆದಿದ್ದಾರೆ. ೭೫ನೇ ವರ್ಷದ ಹುಟ್ಟುಹಬ್ಬದ ಸುಸಂದರ್ಭದಲ್ಲಿ ಇನ್ನು ಯುವಕರಾಗಿ ಜನರಿಗಾಗಿ ನಾನು ಎಂಬ ವಾಕ್ಯದಿಂದ ಎಲ್ಲ ರಂಗದಲ್ಲೂ ಮುಂದೆ ಬಂದು ಜನರಿಗಾಗಿ ಎಂದಿಗೂ ಮರೆಯಲು ಆಗದ, ಶಾಶ್ವತವಾಗಿ ಉಳಿಯುವ ಕೆಲಸವನ್ನು ಮಾಡಿದ್ದು ಪಾಟೀಲ ಅವರ ಇಚ್ಚಾಶಕ್ತಿ ಎಂದು ಹೇಳಿದರು.

ಕಳೆದ ೨ ವರ್ಷದಿಂದ ರಾಜಕೀಯದಲ್ಲಿ ಸ್ವಲ್ಪ ಹಿನ್ನೆಡೆಯಾಗಿರಬಹುದು. ಆದರೆ ಅದೇ ೨ ವರ್ಷದಲ್ಲಿ ರಾಜ್ಯವೇ ಬಾಗಲಕೋಟೆಯ ಒಂದು ಚಿಕ್ಕ ಹಳ್ಳಿಯ ಕಡೆಗೆ ನೋಡುವಂತೆ ಮಾಡಿದ್ದು ಯಾರು ಎಂದಿಗೂ ಮರೆಯುವುದಿಲ್ಲ. ರಾಜ್ಯ ಸರ್ಕಾರವು ಆರೋಗ್ಯದ ವಿಷಯದಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಈ ಮಹಾವಿದ್ಯಾಲಯಕ್ಕೆ ಬೇಕಿರುವ ಎಲ್ಲ ರೀತಿಯ ವೈದ್ಯಕೀಯ,ಆರೋಗ್ಯ ಸಲಹೆ, ಸರ್ಕಾರದ ನಿಯಮಗಳಂತೆ ಎಲ್ಲವನ್ನು ನೀಡಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ