ಕನ್ನಡಪ್ರಭ ವಾರ್ತೆ ನಂಜನಗೂಡುರಾಜ್ಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ ಕಳಲೆ ಗೇಟ್ ನಲ್ಲಿರುವ ಶ್ರೀ ಕೈವಲ್ಯದೇವಿ ದೇವಸ್ಥಾನದಲ್ಲಿ ದೇವರ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ರಚಿಸಿರುವ ಟ್ರಸ್ಟ್ ಅನ್ನು ರದ್ದುಪಡಿಸಿ ಮುಜರಾಯಿ ಇಲಾಖೆಯಿಂದಲೇ ದೇವಸ್ಥಾನ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿ ಕಳಲೆ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇನ್ನು ನಂಜನಗೂಡು ತಾಲೂಕು ಕಚೇರಿಯಲ್ಲಿರುವ ಮುಜರಾಯಿ ಇಲಾಖೆ ವಿಷಯ ನಿರ್ವಾಹಕರು ಶ್ರೀ ಕೈವಲ್ಯದೇವಿ ದೇವಸ್ಥಾನ ಖಾಸಗಿಯವರಿಗೆ ಸೇರಿದ್ದು ಎಂಬ ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರದ ಆಸ್ತಿ ಎಂಬ ದಾಖಲೆಗಳಿರುವ ದೇವಾಲಯವನ್ನು ಖಾಸಗಿಯವರ ವಶಕ್ಕೆ ಒಪ್ಪಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ, ಆದ್ದರಿಂದ ಸರ್ಕಾರ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಕೈವಲ್ಯದೇವಿ ದೇವಾಲಯದಲ್ಲಿ ರಚಿಸಿರುವ ಟ್ರಸ್ಟ್ ರದ್ದುಪಡಿಸಿ ದೇವಾಲಯವನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಚಾಲಕ ಕಾರ್ಯ ಬಸವಣ್ಣ, ಶ್ರೀ ಲಕ್ಷ್ಮಿಕಾಂತ ಸ್ವಾಮಿ ದೇವಾಲಯದ ಪಾರುಪತ್ತೇದಾರ ಜಯರಾಮ್, ಕಳಲೆ ಅಂಕಣ್ಣ, ಕಳಲೆ ಕುಮಾರ್ , ರಾಮು, ಕಳಲೆ ಗ್ರಾಮದ ವಿವಿಧ ಸಮುದಾಯಗಳಿಗೆ ಸೇರಿದ ಯಜಮಾನರು ಇದ್ದರು.ಮಹಿಳೆಯರಿಗೆ ರಂಗೋಲಿ ಸ್ಪರ್ಧೆ
ಮೈಸೂರು: ಮಹಿಳಾ ಮತ್ತು ಮಕ್ಕಳ ಉಪ ಸಮಿತಿ ವತಿಯಿಂದ ನ. 5 ರಂದು ಮಧ್ಯಾಹ್ನ 2 ರಿಂದ 3.30ರರೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು, ಆಸಕ್ತ ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.ನ. 5 ರಂದು ಬೆಳಗ್ಗೆ 4 ಗಂಟೆಗೆ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸೌಮ್ಯಾ ರೆಡ್ಡಿ ಮಕ್ಕಳ ಕಲಾಕೃತಿ ವಿಭಾಗ ಉದ್ಘಾಟಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದು. ಮಹಿಳೆಯರಿಗೆ ಮ್ಯೂಸಿಕಲ್ಚೇರ್ಮತ್ತು ಕೆರೆದಡ ಆಟೋಟ ಸ್ಪರ್ಧೆ ಏರ್ಪಡಿಸಿದ್ದು, ಮುಖ್ಯ ಅತಿಥಿಯಾಗಿ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್ಸೇಠ್, ಕೆ. ಹರೀಶ್ಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗೆ ಅನುಸೂಯ ಅವರ ಮೊ. 96116 00103 ಸಂಪರ್ಕಿಸಬಹುದು.