ಮಂಡ್ಯ ತಾಲೂಕಿನ ಮುದ್ದುಂಗೆರೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ಪೂಜಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹೊಳೆಯಿಂದ ಆರತಿ ಸಮೇತ ತಮಟೆ, ವೀರಗಾಸೆ, ಕಲಾತಂಡಗಳ ಜೊತೆಗೆ ಹೂ ಹೊಂಬಾಳೆ ತರಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಮುದ್ದುಂಗೆರೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ಪೂಜಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೆಳಗ್ಗೆ ೮ ಗಂಟೆಯಿಂದ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಗಣಹೋಮ, ನವಗ್ರಹ ಹೋಮ, ರುದ್ರಹೋಮ, ಶನೈಶ್ಚರ ಹೋಮ, ಶಾಂತಿಹೋಮ, ಹವನಗಳು, ಹೂವಿನ ಅಲಂಕಾರದೊಂದಿಗೆ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ನಡೆಸಲಾಯಿತು. ಸಂಜೆ ೩ ಗಂಟೆಗೆ ಕೊಡಮಕ್ಕಳಿಂದ ಮೀಸಲು ನೀರು ತರಲಾಗುವುದು.
ಸಂಜೆ ೬ ಗಂಟೆಗೆ ಶ್ರೀ ಶನೈಶ್ಚರಸ್ವಾಮಿಗೆ ಹೊಳೆಯಿಂದ ಆರತಿ ಸಮೇತ ತಮಟೆ, ವೀರಗಾಸೆ, ಕಲಾತಂಡಗಳ ಜೊತೆಗೆ ಹೂ ಹೊಂಬಾಳೆ ತರಲಾಯಿತು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಯೋಗ ಮಾಲಾಯಿತು. ರಾತ್ರಿ ೭ ಗಂಟೆಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು. ಎಲ್ಲಾ ವೈದಿಕ ಕಾರ್ಯಕ್ರಮಗಳನ್ನು ಮದ್ದೂರಿನ ಶ್ರೀ ಉಗ್ರನರಸಿಂಹಸ್ವಾಮಿ ದೇವಸ್ಥಾನದ ಅರ್ಚಕ ಬಾಲಾಜಿ ನಡೆಸಿಕೊಟ್ಟರು.ಫೆ.೨೮ರಿಂದ ಕಚ್ಚೀಗೆರೆಯಲ್ಲಿ ಶ್ರೀಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕಚ್ಚೀಗೆರೆ ಗ್ರಾಮದ ಶ್ರೀಶನೇಶ್ವರಸ್ವಾಮಿ ದೇವಸ್ಥಾನದ ೪೧ನೇ ವರ್ಷದ ಜಾತ್ರಾ ಮಹೋತ್ಸವ ಫೆ.೨೮ರಿಂದ ಮಾ.೧ರವರೆಗೆ ನಡೆಯಲಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಫೆ. ೨೮ರಂದು ಸಂಜೆ ೭.೩೦ಕ್ಕೆ ಶ್ರೀ ಶನೇಶ್ವರಸ್ವಾಮಿಯ ಸನ್ನಿಯಲ್ಲಿ ೪೧ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ಸಂಕಲ್ಪ, ಗಣಪತಿ ಆರಾಧನೆ, ರಕ್ಷಾಬಂಧನ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶ್ರೀಶನೇಶ್ವರಸ್ವಾಮಿಗೆ ಪ್ರಧಾನ ಹೋಮ, ಮಹಾ ಪೂರ್ಣಾಹುತಿ, ಸ್ವಾಮಿಗೆ ಪಂಚಾಮೃತ ಅಭಿಷೇಕ, ವಸ್ತ್ರಧಾರಣೆ, ಬೆಳ್ಳಿ ಕವಚಧಾರಣೆ ವಿವಿಧ ಪುಷ್ಪಾಲಂಕಾರ ಮಧ್ಯಾಹ್ನ ೧೨ ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ೨ ರಿಂದ ೫ರವರೆಗೆ ತಲೆಮುಡಿ ಸೇವೆ ಇರುತ್ತದೆ ಎಂದರು.
ಬೆಳಗ್ಗೆ ೭ ರಿಂದ ೧೦ ಗಂಟೆವರೆಗೆ ಶನಿಶಾಂತಿ ಹೋಮ, ೫ ರಿಂದ ೭.೩೦ರವರೆಗೆ ವೀರಗಾಸೆ, ವಾದ್ಯ ಮೆರವಣಿಗೆ ಮೂಲಕ ಮೀಸಲು ನೀರು ತರುವುದು, ಸಂಜೆ ೬ ರಿಂದ ೧೧.೩೦ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ರಾತ್ರಿ ೯ ರಿಂದ ೧೧ರವರೆಗೆ ಅನ್ನಸಂತರ್ಪಣೆ, ರಾತ್ರಿ ೧೧ ರಿಂದ ಬೆಳಗಿನ ಜಾವ ೫ರವರೆಗೆ ಬೆಳ್ಳಿಗಿಂಡಿ ಪೂಜೆ, ಶನೇಶ್ವರಸ್ವಾಮಿ ಬೆಳ್ಳಿ ರಥೋತ್ಸವ, ಮಲೆಮಾದೇಶ್ವರಸ್ವಾಮಿಯ ಹುಲಿವಾನೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.