ಕನ್ನಡಪ್ರಭ ವಾರ್ತೆ ಮಂಡ್ಯ
ಶಿವರಾತ್ರಿ ಹಬ್ಬಕ್ಕೆ ಮೊದಲು ಬರುವ ಶುಕ್ರವಾರ ಮತ್ತು ಶನಿವಾರಗಳಂದು ಗ್ರಾಮದಲ್ಲಿ ಶ್ರೀಹಿರಿಯಮ್ಮ ಮತ್ತು ಶ್ರೀಏಳೂರಮ್ಮ ದೇವಿಯರ ಹಬ್ಬ ನಡೆಸುವುದು ವಾಡಿಕೆ. ಅದರಂತೆ ಈ ಬಾರಿಯೂ ಗ್ರಾಮದ ಹೊರ ವಲಯದಲ್ಲಿನ ದೇವಾಲಯಗಳಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಹಬ್ಬ ಆಚರಿಸಲಾಯಿತು.
ಗುರುವಾರ ಸಂಜೆ ಶ್ರೀಹಿರಿಯಮ್ಮ ದೇವಿ ಮತ್ತು ಶ್ರೀಏಳೂರಮ್ಮದೇವಿಯ ಬಂಡಿ ಉತ್ಸವ, ಶುಕ್ರವಾರ ಮುಂಜನೆ ಶ್ರೀ ಹಿರಿಯಮ್ಮ ದೇವಿಯ ಕೊಂಡೋತ್ಸವ ನಡೆಸಲಾಯಿತು. ಶುಕ್ರವಾರ ರಾತ್ರಿ ಶ್ರೀ ಏಳೂರಮ್ಮ ದೇವಿಯ ದೇವಾಲಯ ಮುಂಭಾಗ ಕೊಂಡೋತ್ಸವಕ್ಕಾಗಿ ವಿಶೇಷ ಪೂಜೆಯೊಂದಿಗೆ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಮಧ್ಯರಾತ್ರಿ ಬಳಿಕ ದೇವಿಯ ಮೂರ್ತಿಗೆ ವಿಶೇಷ ಅಭಿಷೇಕ ಮಾಡಿ ಬೆಳ್ಳಿಕವಚ ಮತ್ತು ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.ಶನಿವಾರ ಮುಂಜನೆ ಸೂರ್ಯೋದಯದ ಹೊತ್ತಿಗೆ ಶ್ರೀಏಳೂರಮ್ಮ ದೇವಿಯ ಕೊಂಡೋತ್ಸವ ನಡೆಯಿತು. ಕಿವಿಗಡಚ್ಚಿಕ್ಕುವ ಸದ್ದಿನೊಂದಿಗೆ ಸಿಡಿಸಿದ ಪಟಾಕಿಗಳು ಬಾನಂಗಳದಲ್ಲಿ ಬಣ್ಣಬಣ್ಣದ ಬೆಳಕಿನ ಚಿತ್ತಾರ ಮೂಡಿಸಿದ್ದವು. ದೇವಿಯ ಪೂಜೆಯನ್ನು ಹೊತ್ತಿದ್ದ ಗುಡ್ಡಪ್ಪ ಅಲೋಕ ಅವರು ಕೊಂಡ ಹಾಯುವ ಮೂಲಕ ಗಮನ ಸೆಳೆದರು. ಕೊಂಡೋತ್ಸವ ವೇಳೆ ಭಕ್ತರು ಜಯಘೋಷ ಮೊಳಗಿಸಿದರು. ಬಳಿಕ ಭಕ್ತರು ಕೊಂಡಕ್ಕೆ ಅಳ್ಳು ಹಾಕಿ ಹರಕೆಯನ್ನು ತೀರಿಸಿದರು.
ಶ್ರೀ ಏಳೂರಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್‌ನ ಅಧ್ಯಕ್ಷ ನಾಗರಾಜು, ಕಾರ್‍ಯದರ್ಶಿ ಸಿ.ಮಾದಪ್ಪ, ಖಜಂಚಿ ಮಾದೇಗೌಡ, ಹಿಂದೂಪರ ಸಂಘಟನೆ ಕಾರ್‍ಯದರ್ಶಿ ಪಂಚಾಕ್ಷರಿ ಗಂಗಡ್ಕಾರ್ ಇತರರು ಭಾಗವಹಿಸಿದ್ದರು.ಬಟ್ಟೆ ಬ್ಯಾಗ್ ನೀಡಿ ಪರಿಸರ, ಪ್ಲಾಸ್ಟಿಕ್ ಜಾಗೃತಿ
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಜನರು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಬೇಕು. ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಕುಡಿಯುವ ನೀರು ಖರೀದಿ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು. ಇದರಿಂದ ನಾವು ಪರಿಸರ ಸಂರಕ್ಷಣೆಗೆ ಸ್ವಲ್ಪ ಪ್ರಮಾಣದಲ್ಲಾದರೂ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಹೇಳಿದರು.