- ಶ್ರೀ ಕನಕ ಗುರು ಪೀಠ ಶಾಖಾಮಠ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿ ದಿವ್ಯ ಸಾನಿಧ್ಯ
ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ನೂತನ ರಥೋತ್ಸವದ ಪ್ರಯುಕ್ತ ಇಂದು ತರೀಕೆರೆಯಲ್ಲಿ ಆಯೋಜಿಸಿರುವ ವಿವಿಧ ಧಾರ್ಮಿಕ ಕಾರ್ಯಕ್ರಮ ಹೊಸದುರ್ಗ ಶ್ರೀ ಕನಕ ಗುರು ಪೀಠ ಶಾಖಾಮಠ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ.
ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಅಧ್ಯಕ್ಷರು ಮತ್ತು ಸದಸ್ಯರು, ತರೀಕೆರೆ ಕಾಳಿದಾನನಗರದ ರಾಮದೇವರ ಬೀದಿಯ ಶ್ರೀ ಗುರು ರೇವಣಸಿದ್ದೇಶ್ವರ ಭಜನ ಮಂಡಳಿ ಮಕರ ಸಂಕ್ರಾಂತಿ ಹಬ್ಬದ ಶುಭದಿನದಂದು ಅಂದರೆ 14ರಂದು ಬುಧವಾರ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ಪ್ರಥಮ ವರ್ಷದ ನೂತನ ರಥೋತ್ಸವ ಹಮ್ಮಿಕೊಂಡಿದೆ.ಜ.14 ರಂದು ಬುಧವಾರ ಬೆಳಿಗ್ಗೆ ನೂತನ ರಥಕ್ಕೆ ಶುದ್ದಿಪೂರ್ವಕ, ಗಂಗಾಪೂಜೆ, ಸ್ವಸ್ತಿ ಪುಣ್ಯಾಹವಾಚನ, ನಂದಿ ಸಮಾರಾ ಧನ, ರಕ್ಷಾಬಂಧನ ಹಾಗೂ ಪರಿವಾರ ದೇವತಾ ಸಹಿತ ಪ್ರಧಾನ ಶ್ರೀ ಗುರು ರೇವಣಸಿದ್ದೇಶ್ವರ ಆರಾಧನ ಮತ್ತು ಗಣ ಹೋಮ, ದಶದಿಕ್ಪಾಲಕ ಸಹಿತ ರಥಾಂಗ ಹೋಮ ಪುಣ್ಯಾಹುತಿ, ಬಲಿಸಮರ್ಪಣೆ ನಡೆಯಲಿದೆ.ಹೊಸದುರ್ಗ ಶ್ರೀ ಕನಕ ಗುರು ಪೀಠ ಶಾಖಾಮಠ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ 11.15ಕ್ಕೆ ಕಳಸಾರೋಹಣ ನೆರವೇರಲಿದೆ. ಶಿವನಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಮಠ ಕುಲಗುರು ಶ್ರೀ ನವೀನ್ ಒಡೆಯರ್ ಅವರ ನೇತೃತ್ವದಲ್ಲಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ಭಕ್ತರ ಕಣ್ತಿಸುವ ದಿವ್ಯ ರಥಃಶಿಲ್ಪಕಲಾವಿದ ಕಲ್ಲೇಶ್ ಆಚಾರ್ಯ ನೇತೃತ್ವದ ತಂಡ ಭಕ್ತಿ ಮತ್ತು ಶ್ರದ್ಧೆ ಹಾಗೂ ಸತತ ಪರಿಶ್ರಮದಿಂದ ಶ್ರೇಷ್ಠ ಗುಣಮಟ್ಟದ 21 ಅಡಿ ಎತ್ತರದ ಬಹು ಸುಂದರವಾದ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ದಿವ್ಯ ರಥವನ್ನು ಶಾಸ್ತ್ರೋಕ್ತ ವಾಗಿ ಸಿದ್ದಪಡಿಸಿದೆ. ರಥದ ನಾಲ್ಕು ಸುತ್ತ, ಗ್ರಾಮದ ದೇವತೆಗಳಾದ ಶ್ರೀ ಮಹಾಗಣಪತಿ, ಶ್ರೀ ರೇವಣಸಿದ್ದೇಶ್ವರ ಸ್ವಾಮಿ, ಶ್ರೀ ಕೋದಂಡರಾಮ, ಶ್ರೀ ಬೀರಲಿಂಗೇಶ್ವರಸ್ವಾಮಿ, ಶ್ರೀ ಮೈಲಾರರಿಂಗೇಶ್ವರ ಸ್ವಾಮಿ,ಶ್ರೀ ಸಿದ್ದರಾಮೇಶ್ವರ ಸ್ವಾಮಿ, ಶ್ರೀ ಸಾಲುಮರದಮ್ಮ, ಶ್ರೀ ವೀರಭದ್ದೇಶ್ವರ ಸ್ವಾಮಿ, ಶ್ರೀ ಸರಸ್ವತಿ, ಶ್ರೀ ಲಕ್ಷ್ಮೀ, ಶ್ರೀ ವೆಂಕಟೇಶ್ವರಸ್ವಾಮಿ, ಶ್ರೀ ಅಷ್ಟದಿ ಕ್ಪಾಲಕರು, ಹಾಗೂ ಗ್ರಾಮದ ಸುತ್ತಮುತ್ತ 16 ದೇವತೆಗಳ ಬಹು ಸುಂದರಮೂರ್ತಿಗಳನ್ನು ದಿವ್ಯರಥದಲ್ಲಿ ರಚಿಸಲಾಗಿದೆ.ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ದಿವ್ಯ ರಥ ಭಕ್ತ ಜನತೆ ಮನ ಸೂರೆಗೊಳ್ಳುವಂತಿದೆ.
ಪ್ರಥಮ ವರ್ಷದ ನೂತನ ರಥೋತ್ಸವದ ಪ್ರಯುಕ್ತ ಹಲವು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.14 ರಂದು ಮಕರ ಸಂಕ್ರಾಂತಿ ಹಬ್ಬದಂದು ನಡೆಯುವ ನೂತನ ರಥೋತ್ಸವಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ.ತರೀಕೆರೆ, ತರೀಕೆರೆ ತಾಲೂಕು ಮತ್ತು ರಾಜ್ಯದೆಲ್ಲೆಡೆಯಿಂದ ಭಕ್ತಜನತೆ ಆಗಮಿಸಲಿದ್ದು, ತರೀಕೆರೆ ಪಟ್ಟಣ ತಳಿರು ತೋರಣಗಳಿಂದ ಮತ್ತು ಆಕರ್ಷಣೀಯವಾದ ವಿದ್ಯುತ್ ದೀಪಗಳಿಂದ ದಿವ್ಯಾಲಂಕೃತಗೊಂಡಿದೆ. ಭಕ್ತಜನತೆ ಶ್ರದ್ಧಾ ಭಕ್ತಿಗಳಿಂದ ದಿವ್ಯ ರಥೋತ್ಸವದಲ್ಲಿ ಭಾಗವಹಿಸಲಿದ್ದು, ಎಲ್ಲಾ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್, ಪದಾಧಿಕಾರಿಗಳು, ಸದಸ್ಯರು ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿು ಭಜನಾ ಮಂಡಳಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಕೋರಿದ್ದಾರೆ.
13ಕೆಟಿಆರ್.ಕೆ.10ಃಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿಯವರ ದಿವ್ಯ ರಥೋತ್ಸವ