ಶ್ರೀಕೃಷ್ಣ ಭಾರತದ ನಿಜವಾದ ಸಾಂಸ್ಕೃತಿಕ ನಾಯಕ: ನಾಗರಾಜರಾವ್ ಕಲ್ಕಟ್ಟೆ

KannadaprabhaNewsNetwork |  
Published : Sep 05, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರು ಶ್ರೀಕೃಷ್ಣ ಭಾರತದ ನಿಜವಾದ ಸಾಂಸ್ಕೃತಿಕ ನಾಯಕ. ಈತನಿಲ್ಲದೆ ಗಾಯನ, ಸಂಗೀತ ಯಾವುದೂ ಪೂರ್ಣ ವಾಗಲ್ಲ ಎಂದು ಕಳಸಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎಂ. ನಾಗರಾಜ ರಾವ್ ಕಲ್ಕಟ್ಟೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶ್ರೀಕೃಷ್ಣ ಭಾರತದ ನಿಜವಾದ ಸಾಂಸ್ಕೃತಿಕ ನಾಯಕ. ಈತನಿಲ್ಲದೆ ಗಾಯನ, ಸಂಗೀತ ಯಾವುದೂ ಪೂರ್ಣ ವಾಗಲ್ಲ ಎಂದು ಕಳಸಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎಂ. ನಾಗರಾಜ ರಾವ್ ಕಲ್ಕಟ್ಟೆ ತಿಳಿಸಿದರು.

ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಶ್ರೀಕೃಷ್ಣ ಜಯಂತಿಯಲ್ಲಿ ಉಪನ್ಯಾಸ ನೀಡಿ ಮಥುರೈಯಲ್ಲಿ ಜನಿಸಿದ ಕೃಷ್ಣನನ್ನು ಕನ್ನಡದ ದಾಸರು, ತಮಿಳಿನ ಆಳ್ವಾರರು, ಮಹಾರಾಷ್ಟ್ರದ ಸಕ್ಕೂ ಬಾಯಿ, ತುಕಾರಾಂ, ಉತ್ತರ ಭಾರತದ ಮೀರಾಬಾಯಿ, ಪೂರ್ವದ ಭಕ್ತ ಪರಂಪರೆ ಕೂಡ ಆರಾಧಿಸು ತ್ತಿರುವುದನ್ನು ಗಮನಿಸಿದಾಗ ಕೃಷ್ಣನ ಸರ್ವವ್ಯಾಪಿ ಮತ್ತು ವಿಶ್ವವ್ಯಾಪಿತ್ವ ಅರಿವಾಗುತ್ತದೆ ಎಂದರು.

ಕೃಷ್ಣನ ಕಥೆ ಎಂದರೆ ಧರ್ಮಾಂಶ, ರಾಜ ನ್ಯಾಯಾಂಶ, ಕಾವ್ಯಾಂಶ, ತತ್ವಾಂಶ. ದೇವಾಂಶ, ಮಾನವ ತ್ವಾಂಶ, ಸಖಾಂಶ, ಪ್ರೇಮಾಂಶ ಹೀಗೆ ಎಲ್ಲವುಗಳ ಸಮ್ಮಿಶ್ರಣ. ಆದ ಕಾರಣ ಕೃಷ್ಣ ಈ ನೆಲದ ಪ್ರತೀ ವಿಚಾರವನ್ನು ಅರಿತ ವ್ಯಕ್ತಿ. ಈ ದೃಷ್ಟಿಯಲ್ಲಿ ಆತನ ನಿಜವಾದ ವಿಶ್ವರೂಪದ ಅರಿವಾಗುತ್ತದೆ ಎಂದರು.ಇಂದ್ರನಿಗೆ ಬದಲಾಗಿ ಗೋವರ್ಧನ ಗಿರಿ ಪೂಜಿಸಬೇಕು ಎಂದು ತಿಳಿಸಿದ ಕೃಷ್ಣ, ಭಾರತದ ಮೊದಲ ಪರಿಸರವಾದಿ. ಕುಂತಿ, ದ್ರೌಪದಿ, ದೇವಕಿ, ಸತ್ಯಭಾಮೆ, ಗೋಪಿಕೆಯರು, ಕುಬ್ಜೆ ಹೀಗೆ ಪ್ರತಿ ಮಹಿಳೆಗೂ ನ್ಯಾಯ ಒದಗಿಸಿದ ಈ ವಾಸುದೇವ ನಮ್ಮ ನೆಲದ ಮೊದಲ ಸ್ತ್ರೀವಾದಿ ಎಂದರು. ದ್ವಾಪರ ಯುಗದ ಕೃಷ್ಣ ಕಲಿಯುಗದ ಆರಂಭದಲ್ಲೂ ಕೆಲವು ವರ್ಷ ಇದ್ದದ್ದು ನಮ್ಮ ಪಾಲಿಗೆ ಬೆರಗು. ಕರ್ತವ್ಯ - ಆತ್ಮಪ್ರಜ್ಞೆ ಗೀತೆಯಲ್ಲಿ ಬೋಧಿಸಿದ ಈ ಮುಕುಂದ ಜ್ಞಾನಿಗಳು, ಮುಮುಕ್ಷುಗಳು, ಸಾಮಾನ್ಯರಿಗೂ ಎಟಕುವ ಸ್ಥಿತಪ್ರಜ್ಞೆ ದೇವನಾಗಿ ಕಾಣುತ್ತಾನೆ ಎಂದು ಹೇಳಿದರು. ಉಪತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆಧುನಿಕ ಯುಗದಲ್ಲಿ ಯುವಜನತೆ ಎದುರಿಸುತ್ತಿರುವ ಮಾನಸಿಕ ಒತ್ತಡ, ಗೊಂದಲ ಮತ್ತು ಸವಾಲುಗಳಿಗೆ ಶ್ರೀಕೃಷ್ಣನ ಆದರ್ಶ ಹಾಗೂ ಭಗವದ್ಗೀತೆ ಮೌಲ್ಯ ದಾರಿದೀಪವಾಗಿವೆ. ಯುವ ಜನಾಂಗ ತಮ್ಮ ಜೀವನದಲ್ಲಿ ಗೀತೆ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.ಜೀವನದಲ್ಲಿ ಬರುವ ಸುಖ-ದುಃಖ, ಜಯ, ಅಪಜಯ ಹಾಗೂ ಏಳುಬೀಳುಗಳನ್ನು ಸಮಾನವಾಗಿ ಸ್ವೀಕರಿ ಸುವ ಆಂತರಿಕ ಶಕ್ತಿ ಕೃಷ್ಣನ ಆದರ್ಶ ಕಲಿಸುತ್ತವೆ. ಸ್ವ ಹಿತಾಸಕ್ತಿಗಿಂತ ಸಮಾಜದ ಹಿತ- ನೈತಿಕ ನಡವಳಿ ಕೆಗೆ ಆದ್ಯತೆ ನೀಡುವುದನ್ನು ಕೃಷ್ಣನ ಜೀವನ ತೋರಿಸುತ್ತದೆ ಎಂದರು.ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷ ಡಿ.ಕೆ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಜಿ.ಕೆ.ಬಸವರಾಜಪ್ಪ, ಮುಖಂಡರಾದ ಬಿ.ಎನ್.ಸುರೇಶ್, ಕೋಟೆ ಸೋಮಶೇಖರ್, ಶ್ರೀನಿವಾಸ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಕಪಡೆ ಯೋಜನೆ ಉದ್ದೇಶ ಮಹಿಳಾ ಸಬಲೀಕರಣ, ಸುರಕ್ಷತೆ: ಲಕ್ಷ್ಮೀ
ಸಿಂಡಿಕೇಟ್ ಸದಸ್ಯತ್ವದಿಂದ ಕನ್ನಾಳೆ ವಜಾಗೊಳಿಸಿ