ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ನಿಜಗುಣ ರೆಸಿಡೆನ್ಸಿ ಹಾಲ್‌ನಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್‌ನ ಶೈನಿಂಗ್ ಸ್ಟಾರ್ ಕಿಡ್ಸ್ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ಯಶೋಧಾ ಕೃಷ್ಣ ಸ್ಪರ್ಧೆ ಮತ್ತು ಮುದ್ದು ರಾಧೆ, ಮುದ್ದು ಕೃಷ್ಣ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯ ಮಕ್ಕಳ ವೇಷಭೂಷಣವನ್ನು ನೋಡಿದಾಗ ಈ ಆವರಣವೇ ಪುಟ್ಟ ಗೋಕುಲದಂತೆ ಕಂಗೊಳಿಸುತ್ತಿದೆ. ತಾಯಿ ಯಶೋಧೆಯ ವಾತ್ಸಲ್ಯ ಮತ್ತು ಬಾಲಕೃಷ್ಣನ ಕೀಟಲೆ, ಮುಗ್ಧತೆ ಎಂದಿಗೂ ಮರೆಯಲಾಗದ ಸುಂದರ ಕಲ್ಪನೆಯಾಗಿದ್ದು, ನಮ್ಮ ಕಣ್ಣ ಮುಂದೆ ಅಂತಹ ಹಲವಾರು ಯಶೋಧೆ, ಮುದ್ದು ಕೃಷ್ಣ ನೆರೆದಿದ್ದು ನೋಡುಗರ ಕಣ್ಣಿಗೆ ಹಬ್ಬವಾಗಿದೆ ಎಂದರು.ಕೃಷ್ಣನ ಬೋಧನೆಗಳು ಕೇವಲ ಒಂದು ಯುಗಕ್ಕೆ ಸೀಮಿತವಾಗಿರದೇ ಸಾರ್ವಕಾಲಿಕ ಮಹತ್ವವನ್ನು ಹೊಂದಿವೆ. ಭಗವದ್ಗೀತೆಯಲ್ಲಿ ಆತ ನೀಡಿದ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಸಂದೇಶವು ಫಲದ ಅಪೇಕ್ಷೆಯಿಲ್ಲದೆ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದನ್ನು ನಮಗೆ ಕಲ್ಪಿಸಿಕೊಡುತ್ತದೆ. ಧರ್ಮದ ರಕ್ಷಣೆ ಮತ್ತು ಅಧರ್ಮದ ವಿನಾಶಕ್ಕಾಗಿ ಕೃಷ್ಣ ತೋರಿದ ಹಾದಿ ಸದಾ ಪ್ರೇರಣಾದಾಯಿ. ಕೃಷ್ಣನ ಲೀಲೆಗಳು ಭಕ್ತಿ ಮತ್ತು ಪ್ರೀತಿಯ ಸಂಕೇತವಾದರೆ, ಆತನ ತತ್ವಶಾಸ್ತ್ರವು ನೈತಿಕ ಜೀವನಕ್ಕೆ ದಾರಿದೀಪವಾಗಿದೆ. ಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ, ಬುದ್ಧಿವಂತಿಕೆಯಿಂದ ಸಮಸ್ಯೆಯನ್ನು ಎದುರಿಸುವುದನ್ನು ಕೃಷ್ಣನ ಜೀವನ ನಮಗೆ ಕಲಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ಪಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಗುಡಿಗಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮಹೇಶ ಖಾರ್ವಿ, ತೆರಿಗೆ ಸಲಹೆಗಾರ ಎಸ್. ಮಂಜುನಾಥ, ಡ್ಯಾನ್ಸ್ ಮಾಸ್ಟರ್ ಸ್ಟೀವನ್, ಡ್ಯಾನ್ಸ್ ಕೊರಿಯೋಗ್ರಾಫರ್ ಯುವಕೀರ್ತಿ, ಗಾಯಕಿ ರೂಪಾ ಮಧುಕೇಶ್ವರ, ಸಂಪನ್ಮೂಲ ವ್ಯಕ್ತಿ ವೀಣಾ ಟೇವಕರ್, ಮುಖ್ಯೋಪಾಧ್ಯಾಯಿನಿ ಕಲ್ಪನಾ, ಶಿಕ್ಷಕರಾದ ರಾಘವೇಂದ್ರ, ಶ್ವೇತಾ, ಪ್ರೀತಿ, ರಶ್ಮಿ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.