ಕನ್ನಡಪ್ರಭ ವಾರ್ತೆ ಪಾಂಡವ
ದೀಪಾವಳಿ ಹಬ್ಬದೊಂದು ಆರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಎಣ್ಣೆಮಜ್ಜನ, ಹಾಲುಹರಿಬಿ ಮತ್ತು ಬಾಯಿಬೀಗ ಕಾರ್ಯಕ್ರಮ ನಡೆಯಿತು. ನಂತರ ನ.23ರಿಂದ ಒಂದು ವಾರಗಳ ಕಾಲ ಅಕ್ಕಪಕ್ಕದ ಗ್ರಾಮಸ್ಥರು ಹುಲಿವಾಹನೋತ್ಸವ ನಡೆಸುವ ಮೂಲಕ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು.
ಜಾತ್ರೆ ಅಂಗವಾಗಿ ಅ.28ರಂದು ಗ್ರಾಮದಲ್ಲಿ ಮಹದೇಶ್ವರಸ್ವಾಮಿ ದೇವರ ಹೂವಿನ ಪಲಕ್ಕಿ ಉತ್ಸವ ನಡೆಸಲಾಯಿತು. ಅಂತಿಮ ದಿನವಾದ ಬುಧವಾರ ಸಂಜೆ ದೇವಸ್ಥಾನದ ಆಚರಣೆದಲ್ಲಿ ವಿಜೃಂಭಣೆಯಿಂದ ಮಹದೇಶ್ವರಸ್ವಾಮಿ ರಥೋತ್ಸವ ನಡೆದು ಜಾತ್ರೆಗೆ ತೆರೆ ಎಳೆಯಲಾಯಿತು.ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ರಥೋತ್ಸವ ಎಳೆದು ರಥಕ್ಕೆ ಹಣ್ಣುಜವನ ಎಸೆದು ಉಘೇ ಮಾದಪ್ಪ.. ಉಘೇ ಮಾದಪ್ಪ ಎಂಬ ಘೋಷಣೆಕೂಗುವ ಮೂಲಕ ಭಕ್ತರಿಭಾವ ಸಮರ್ಪಿಸಿದರು.
ರಥೋತ್ಸವದಲ್ಲಿ ಮಹದೇಶ್ವರಪುರ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದರು.ಅ.31ರಂದು ಜೀರ್ಣೋದ್ಧಾರ, ಮಹಾಕುಂಭಾಭಿಷೇಕ
ಮೇಲುಕೋಟೆ: ಸಮೀಪದ ಕಾಡೇನಹಳ್ಳಿಯಲ್ಲಿ ಅ.31 ಮಾರಮ್ಮದೇವಿ ದೇವಾಲಯದ ಜೀರ್ಣೋದ್ಧಾರ ಮತ್ತು ಮಹಾಕುಂಭಾಭಿಷೇಕ ನಡೆಯಲಿದೆ. ಅತ್ಯಾಕರ್ಷಕವಾಗಿ ನಿರ್ಮಿಸಿರುವ ದೇವಾಲಯವನ್ನು ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥಸ್ವಾಮಿ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಮಾಡಿ ಮಹಾಕುಂಬಾಭಿಷೇಕ ನೆರವೇರಿಸಲಾಗುತ್ತಿದೆ.ಗ್ರಾಮದಲ್ಲಿ ಗುರುವಾರದಿಂದಲೇ ಆರಂಭವಾಗಿರುವ ಧಾರ್ಮಿಕ ಕೈಂಕರ್ಯದ ವೇಳೆ ಹೋಮ ಹವನ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಕದಲಗೆರೆ ಬಳಿಯಿಂದ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ನೂತನ ದೇವಾಲಯ ವಿಶೇಷ ಪುಷ್ಪಾಲಂಕಾರ ಮತ್ತು ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಆಕರ್ಷಕವಾಗಿ ಪ್ರತಿಷ್ಠಾಪನೆಗೊಂಡ ಮಾರಮ್ಮ ದೇವಿಗೆ ಶುಕ್ರವಾರ ಬೆಳಿಗ್ಗೆ ವಿಶೇಷಭಿಷೇಕ ನಡೆಯಲಿದೆ. ಮಧ್ಯಾಹ್ನ ಬೃಹತ್ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮಹೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ.