ಹುಲಿ ಓಡಾಟ ಸೆರೆ: ವಾಕ್ ಥ್ರೂ ಕೇಜ್ ಅಳವಡಿಕೆ

KannadaprabhaNewsNetwork |  
Published : Oct 31, 2025, 02:00 AM IST
ಅಳವಡಿಕೆ | Kannada Prabha

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರೀತಿಯೇ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಹುಲಿ ಉಟಪಳ ಹೆಚ್ಚಾಗಿದೆ. ಚಾಮರಾಜನಗರ ತಾಲೂಕಿನ ಮೂರು ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ಹುಲಿ ಸೆರೆ ಕೂಂಬಿಂಗ್ ನಡೆಸುತ್ತಿದೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರೀತಿಯೇ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಹುಲಿ ಉಟಪಳ ಹೆಚ್ಚಾಗಿದೆ. ಚಾಮರಾಜನಗರ ತಾಲೂಕಿನ ಮೂರು ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ಹುಲಿ ಸೆರೆ ಕೂಂಬಿಂಗ್ ನಡೆಸುತ್ತಿದೆ.

ಚಾಮರಾಜನಗರ ತಾಲೂಕಿನ ಹೆಗ್ಗೋಠಾರ, ಕಲ್ಪುರ ಹಾಗೂ ಉಗೇನದಹುಂಡಿ ಗ್ರಾಮಗಳ ಜಮೀನಿನಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ಟೈಗರ್ ಆಪರೇಷನ್ ಗೆ " ವಾಕ್ ಥ್ರೂ ಕೇಜ್ " ಎಂಬ ವಿಶೇಷ ಬೋನ್ ಅಳವಡಿಸಲಾಗಿದೆ.

ಹುಲಿ ಓಡಾಟದ ಹಾದಿಯಲ್ಲಿ ಈ ಬೋನನ್ನು ಅಳವಡಿಸಲಿದ್ದು ಹುಲಿ ಕಾಲಿಟ್ಟ ಕೂಡಲೇ ಎರಡು ಕಡೆಯಿಂದ ಬಾಗಿಲು ಬಂದ್ದಾಗಿ ಹುಲಿಯನ್ನು ಬಲೆಗೆ ಬೀಳಿಸುವ ತಾಂತ್ರಿಕತೆ ಇದರದ್ದಾಗಿದೆ. 30 ಅಡಿ ಉದ್ದ 10 ಅಡಿ ಎತ್ತರದ ಡಡಲ್ ಡೋರ್ ಕೇಜ್ ಇದಾಗಿದ್ದು ಮೈಸೂರಿನಿಂದ ಅರಣ್ಯ ಇಲಾಖೆ ಈ ಬೋನ್ ನ್ನು ಹುಲಿ ಸೆರೆ ಹಿಡಿಯಲು ತರಿಸಿಕೊಂಡಿದೆ. ಸಾಮಾನ್ಯವಾದ ದಾರಿ ಎಂದು ಭಾವಿಸಿ ಹುಲಿ ಒಂದೇ ಒಂದು ಹೆಜ್ಜೆ ಇಡ್ತಾಯಿದ್ದಂತೆ ಎರಡೂ ಬಾಗಿಲು ಬಂದ್ದಾಗಿ ಹುಲಿ ಸಿಕ್ಕಿಬೀಳಲಿದೆ. ಚಾಮರಾಜನಗರ ತಾಲೂಕಿನ ಉಗೇದನಹುಂಡಿ ಜಮೀನೊಂದರಲ್ಲಿ ಈ ಬೋನ್ ನ್ನು ಅಳವಡಿಸಲಾಗಿದೆ. ಹುಲಿ ಓಡಾಟ ಅರಿಯಲು 20 ಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಿದ್ದು ಇದರಲ್ಲಿ ವ್ಯಾಘ್ರನ ಸಂಚಾರದ ದೃಶ್ಯ ಸೆರೆಯಾಗಿದೆ. 80 ಕ್ಕೂ ಅಧಿಕ ಸಿಬ್ಬಂದಿ ಈ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು ಹುಲಿ, ಚಿರತೆ ಸುಳಿವು ದೊರೆತ ಕೂಡಲೇ ತುರ್ತು ಕಾರ್ಯಾಚರಣೆ ಕೈಗೊಳ್ಳಲು ಒಂದು ತಂಡವು ಸಿದ್ಧವಾಗಿದೆ.

ಹುಲಿ ಸೆರೆ ಕಾರ್ಯಾಚರಣೆ ಕುರಿತು ಬಿಆರ್ ಟಿ ಎಸಿಎಫ್ ಮಂಜುನಾಥ್ ಪ್ರತಿಕ್ರಿಯಿಸಿ, ಎನ್ ಟಿಸಿಎ ಮಾರ್ಗಸೂಚಿಯಂತೆ ಸಾಕಷ್ಟು ಮುನ್ನೆಚರಿಕೆ ಕೈಗೊಂಡು ಕೂಂಬಿಂಗ್ ನಡೆಸಲಾಗುತ್ತಿದೆ. ಕೆಲವು ರೈತರು ಜಮೀನಿಗೆ ತೆರಳಲು ಭಯಪಡುವ ಆತಂಕ ಹೊರಹಾಕಿದ ಹಿನ್ನೆಲೆ ಅವರಿಗೂ ರಕ್ಷಣೆ ಕೊಡಲಾಗಿದೆ, ಗ್ರಾಮಸ್ಥರಿಗೆ ಕೂಂಬಿಂಗ್ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ ಎಂದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ