ಶೃಂಗೇರಿದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಹಾಗೂ ಈಶ್ವರಿಗಿರಿಯಲ್ಲಿರುವ ಶ್ರೀ ಭವಾನಿ ಮಲಹಾನಿಕರೇಶ್ವರ ಸನ್ನಿದಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಆರಂಭಗೊಂಡಿರುವ ಧಾರ್ಮಿಕ ಕಾರ್ಯಕ್ರಮ ಫೆ. 18 ರವರೆಗೆ ನಡೆಯಲಿದೆ.
ಮಹಾಶಿವರಾತ್ರಿಗೆ ಶೃಂಗೇರಿಯಲ್ಲಿ ಉತ್ಸವ । ಧಾರ್ಮಿಕ ಕಾರ್ಯಕ್ರಮಗಳು ಆರಂಭ
ಕನ್ನಡಪ್ರಭ ವಾರ್ತೆ, ಶೃಂಗೇರಿ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಹಾಗೂ ಈಶ್ವರಿಗಿರಿಯಲ್ಲಿರುವ ಶ್ರೀ ಭವಾನಿ ಮಲಹಾನಿಕರೇಶ್ವರ ಸನ್ನಿದಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಆರಂಭಗೊಂಡಿರುವ ಧಾರ್ಮಿಕ ಕಾರ್ಯಕ್ರಮ ಫೆ. 18 ರವರೆಗೆ ನಡೆಯಲಿದೆ
ಫೆ.11ರ ಬುಧವಾರ ಈಶ್ವರಿಗಿರಿ ಸ್ತಂಭ ಗಣಪತಿಗೆ ವಿಶೇಷ ಪೂಜೆ, ಪ್ರಾರ್ಥನೆ, ಅಂಕುರಾರೋಹಣ ನೆರವೇರಿತು.ಫೆ 12 ರ ಗುರುವಾರ ಬೆಳಿಗ್ಗೆ ಶ್ರೀ ಭವಾನಿ ಮಲಹಾನಿಕರೇಶ್ವರ ಸನ್ನಿದಿಯಲ್ಲಿ ಜಾರೋಹಣ, ವೇದಪಾರಾಯಣ, ಶಿವಪುರಾಣ, ದೇವಿ ಭಗವತ, ಗಣೇಶ ಪುರಾಣ ಹಾಗೂ ಮಂತ್ರ ಜಪ ನೆರವೇರಿತು.
ಫೆ.13 ರ ಶುಕ್ರವಾರ ಮಹಾರಥೋತ್ಸವದ ಅಂಗವಾಗ ಹೋಮ, ಜಪಗಳು,ಪಾರಾಯಣಗಳು ನೆರವೇರಲಿದೆ. ಸಂಜೆ ಶ್ರೀ ಭವಾನಿ ಮಲಹಾನಕರೇಶ್ವರಿ ಸ್ವಾಮಿ ರಾಜಬೀದಿ ಉತ್ಸವ, ಶ್ರೀ ಮಠದ ಪ್ರವಚನ ಮಂದಿರದಲ್ಲಿ ಡೋಲೋತ್ಸವ ನಡೆಯಲಿದೆ.
ಫೆ.14 ರ ಶನಿವಾರ ಬೆಳಿಗ್ಗೆ ಶ್ರೀ ಮಠದ ಯಾಗ ಮಂಟಪದಲ್ಲಿ ಮಹಾರುದ್ರ ಪುರಶ್ಚರಣೆ, ಸಂಜೆ ಪ್ರದೋಷ ಪೂಜೆ, ಬೀದಿ ಉತ್ಸವ, ಡೋಲೋತ್ಸವ. ಫೆ. 15 ರ ಭಾನುವಾರ ಬೆಳಿಗ್ಗೆ ಶ್ರೀ ಶಂಕರಾಚಾರ್ಯ ದೇಗುಲದ ಸನ್ನಿದಿಯಲ್ಲಿ ಶತ ರುದ್ರಾಭಿಷೇಕ, ಮಹಾರುದ್ರ ಪುರಶ್ಚರಣೆ, ಉಭಯ ಜಗದ್ಗುರುಗಳಿಂದ ಈಶ್ವರಿಗಿರಿಯಲ್ಲಿ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಲಿದೆ. ಸಂಜೆ ನಾಲ್ಕು ಯಾಮ ಪೂಜೆ, ಶ್ರೀ ಗುರುನಿವಾಸದಲ್ಲಿ ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಯತಿ ವರ್ಯರಿಂದ ನಾಲ್ಕು ಯಾಮ ಪೂಜೆ ನೆರವೇರಲಿದೆ.
ಫೆ.16 ರ ಸೋಮವಾರ ಜಪ, ಪಾರಾಯಣ, ಮಹಾರುದ್ರ ಪುರಶ್ಚರಣೆ. ಸಂಜೆ ಬೀದಿ ಉತ್ಸವ ಡೋಲೋತ್ಸವ ನಡೆಯಲಿದೆ.ಫೆ.17 ರ ಮಂಗಳವಾರ ಬೆಳಿಗ್ಗೆ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಲಕ್ಷ ಮಲ್ಲಿಕಾರ್ಜುನ ಅರ್ಚನೆ, ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಹಾನೀರಾಜನ, ಪ್ರಾರ್ಥನೆ, ರಥರೋಹಣ, ಸಂಜೆ 6ಕ್ಕೆ ಮಹಾರಥೋತ್ಸವ ನಡೆಯಲಿದೆ.
ಫೆ.18 ರ ಬುಧವಾರ ಬೆಳಿಗ್ಗೆ ಓಕುಳಿ ಉತ್ಸವ. ತುಂಗಾನದಿಯಲ್ಲಿ ಅವಭೃತ, ಮಹಾರುದ್ರಯಾಗದ ಪೂರ್ಣಾಹುತಿ, ಸಂಜೆ ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಸಂದಾನೋತ್ಸವ ನಂತರ ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.