ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ನಾರಾಯಣಗುರು ಯುವ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಯಾವರದ ಕೋಟಿಚೆನ್ನಯ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿಯಲ್ಲಿ ನಡೆಯಿತು. ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಶ್ರೀ ನಾರಾಯಣಗುರುಗಳು ಇಡೀ ವಿಶ್ವದ ಸರ್ವಜಾತಿಯ ಜನರು ಒಪ್ಪಿಕೊಳ್ಳುವ ಗುರು ಮತ್ತು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬುದನ್ನು ಪ್ರತಿಪಾದಿಸಿದವರು. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.ಗುರುಗಳ ಜಯಂತಿ ದಿನದಂದು ಯುವ ವೇದಿಕೆಯವರು ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಮುಸ್ಲಿಂ, ಕ್ರೈಸ್ತ, ಹಿಂದೂ ಮಾತ್ರ ಅಲ್ಲದೆ ಹಿಂದೂ ಧರ್ಮದ ಅನೇಕ ಜಾತಿಯ ವ್ಯಕ್ತಿಗಳು ಪಾಲ್ಗೊಂಡು ಆಚರಣೆ ಮಾಡಿದ್ದು ನಾರಾಯಣಗುರುಗಳ ತತ್ವಕ್ಕೆ ಗೌರವ ನೀಡಿದ್ದಂತೆ ಆಗಿದೆ. ಸಮಾಜದಲ್ಲಿ ಇಂತಹ ಕಾರ್ಯಕ್ರಮ ಇನ್ನಷ್ಟು ಮೂಡಿಬರಲಿ ಎಂದು ಶುಭ ಹಾರೈಸಿದರು.ಈ ಸಂದರ್ಭ ಶ್ರೀ ನಾರಾಯಣಗುರು ಯುವ ವೇದಿಕೆ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷ ಮಿಥುನ್ ಅಮೀನ್, ಕುತ್ಪಾಡಿ ಪ್ರಕಾಶ್ ಪೂಜಾರಿ, ಜೆ.ಆರ್. ಮೆಡಿಕಲ್ ಮಾಲಕ ವೇಣುಗೋಪಾಲ, ಸೌಹಾರ್ದ ಸಮಿತಿ ಅಧ್ಯಕ್ಷ ರಾಯ್ಸ್ ಫರ್ನಾಂಡಿಸ್, ಪಂಚಾಯಿತಿ ಸದಸ್ಯರಾದ ರಿಯಾಝ್ ಪಳ್ಳಿ, ಲಕ್ಷಣ ಸನಿಲ್, ಸಚಿನ್ ಬೊಲ್ಜೆ, ಸತೀಶ್ ಬೀರಪ್ಪಡಿ, ಗಿರೀಶ್ ಕುಮಾರ್ ಉದ್ಯಾವರ, ಸಾಯಿರಾಜ್ ಕಿದಿಯೂರ್, ಹರೀಶ್ ಪೂಜಾರಿ ಏಣಗುಡ್ಡೆ, ನವೀನ್ ಪೂಜಾರಿ, ಮೋಹನ್ ಸೋನ್ಸ್, ಸಂದೇಶ ಪೂಜಾರಿ, ಉದಯ್ ಪೂಜಾರಿ, ಸುಪ್ರೀತ್ ಸುವರ್ಣ, ಕಿಶೋರ್ ಕುಮಾರ್, ಸುನಿಲ್ ಪೂಜಾರಿ ಮಲ್ಪೆ, ಮಾಧವ್ ಕಟ್ಟೆಗುಡ್ಡೆ, ರಾಘು ಸನಿಲ್, ಪ್ರಕಾಶ್ ಬಂಗೇರ, ದೇವು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಯುಕ್ತ ಶಾಲಾ ಮಕ್ಕಳಿಗೆ ಸಿಹಿತಿಂಡಿ ವಿತರಣೆ ಮಾಡಲಾಯಿತು.