ಶ್ರೀ ಓಂಕಾರ ಭಜನಾ ಮಂಡಳಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ

KannadaprabhaNewsNetwork |  
Published : Feb 09, 2026, 03:00 AM IST
 ಶ್ರೀ ಗುರುದೇವಾನಂದ ಸ್ವಾಮೀಜಿ ಸಮಾರಂಭ ಉದ್ಘಟಿಸುತ್ತಿರುವುದು. | Kannada Prabha

ಸಾರಾಂಶ

ಆನೆಕಲ್ಲು ಶ್ರೀ ಓಂಕಾರ ಭಜನಾ ಮಂಡಳಿಯ ನೂತನ ಮಂದಿರದ ಕಟ್ಟಡಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು.

ಬಂಟ್ವಾಳ: ಕೇರಳ-ಕರ್ನಾಟಕ ಗಡಿ ಭಾಗವಾದ ಆನೆಕಲ್ಲಿನಲ್ಲಿ 37 ವರ್ಷಗಳ ಇತಿಹಾಸವಿರುವ ಶ್ರೀ ಓಂಕಾರ ಭಜನಾ ಮಂಡಳಿಯ ನೂತನ ಮಂದಿರದ ಕಟ್ಟಡಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು ಹಿರಿಯ ವಕೀಲ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಒ .ಶಾಮ್ ಭಟ್ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ನಿವೃತ್ತ ಅಂಚೆ ಪಾಲಕ ರಾಮ ನಾಯ್ಕ್ ಕುಕ್ಕಿನಾರ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್‍ಯಕ್ರಮದಲ್ಲಿ ಬೋಳಂತಕೋಡಿ ರಾಮ ಭಟ್ ಧಾರ್ಮಿಕ ಉಪನ್ಯಾ ಸ ನೀಡಿದರು.

ಎಯುಪಿ ಶಾಲೆ ಆನೆಕಲ್ಲಿನ ಶಿಕ್ಷಕ ರವಿಶಂಕರ್ ಎಸ್., ಭಾರತ ಸೇವಾಶ್ರಮ ಕನ್ಯಾನದ ಕಾರ್ಯದರ್ಶಿ ಈಶ್ವರ ಭಟ್ ಎಸ್. ,ಸ್ಥಾಪಕ ಕಾರ್‍ಯದರ್ಶಿ ಸದಾಶಿವ್ ಭಟ್ ಆನೆಕಲ್ಲು, ಛತ್ರ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಕೃಷ್ಣ ನಾಯ್ಕ್ ಸೊಡಂಕೂರು, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಶ್ರೀನಿವಾಸ್ ನಾಯ್ಕ್ ಆನೆಕಲ್ಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಮೇಶ್ ಮತ್ತಿತರರಿದ್ದರು. ಸುನೀತಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು.

ಜೀರ್ಣೋದ್ಧಾರ ಸಮಿತಿ ಕಾರ್‍ಯದರ್ಶಿ ನಾರಾಯಣ ಶೆಟ್ಟಿಗಾರ್ ಬಪ್ಪಾಯಿಮೂಲೆ ಸ್ವಾಗತಿಸಿ, ಮಂದಿರದ ಕಾರ್‍ಯದರ್ಶಿ ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್‍ಯಾಧ್ಯಕ್ಷ ರಾಮಕೃಷ್ಣ ಭಟ್ ಸೊಡಂಕೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಸತ್ಯ ಪ್ರಕಾಶ್ ಆನೆಕಲ್ಲು ವಂದಿಸಿದರು. ಕಿಶೋರ್ ಮಾಸ್ಟರ್ ಆನೆಕಲ್ಲು ಹಾಗೂ ನಾರಾಯಣ ಭಟ್ ಆನೆಕಲ್ಲು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರೈ ಘಟಕಕ್ಕಾಗಿ ಮಂಡ್ಯದಲ್ಲೇ 100 ಎಕ್ರೆ ಕೊಡಿ: ಎಚ್‌ಡಿಕೆ ಪತ್ರ
ಭರ್ಜರಿ ಯಶಸ್ಸು ಕಂಡ ಕೆಪೆಕ್‌ ವಾಣಿಜ್ಯ ಮೇಳ