ಕನ್ನಡಪ್ರಭ ವಾರ್ತೆ ಮಂಡ್ಯ
ಬಳಿಕ ಮಾತನಾಡಿದ ಶ್ರೀಮಠದ ವ್ಯವಸ್ಥಾಪಕ ಬ್ರಾಹ್ಮಣ್ಯತೀರ್ಥ ಸ್ವಾಮೀಜಿ, ಕಲಿಯುಗದ ಕಲ್ಪವೃಕ್ಷ, ಕಾಮಧೇನು ಎನಿಸಿಕೊಂಡಿರುವ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯಿಂದ ಸರ್ವ ಜನರ ಕಷ್ಟಕಾರ್ಪಣ್ಯಗಳು ನಿವಾಣೆಯಾಗುತ್ತಿವೆ. ಉದ್ಧಾರಕ್ಕಾಗಿ ಧರೆಗಿಳಿದ ಶ್ರೀವೆಂಕಟೇಶ್ವರ ಸ್ವಾಮಿಯ ವೈಭವದ ಶ್ರೀನಿವಾಸ ಕಲ್ಯಾಣವು ಭೂವೈಕುಂಠವನ್ನು ಸೃಷ್ಟಿಸಿದೆ ಎಂದರು.
ಈ ಎರಡೂ ಪ್ರಸಂಗಗಳು ನಮಗೆ ಭಕ್ತಿ, ಶರಣಾಗತಿ ಮತ್ತು ಧರ್ಮದ ಮಾರ್ಗವನ್ನು ಬೋಧಿಸುತ್ತವೆ. ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯಿಂದ ನೆಮ್ಮದಿ ಸಿಗುತ್ತದೆ, ಶ್ರೀ ರಾಘವೇಂದ್ರ ತೀರ್ಥರು ಕೇವಲ ಒಬ್ಬ ಸನ್ಯಾಸಿಯಲ್ಲ, ಅವರು ಕೋಟ್ಯಂತರ ಭಕ್ತರ ಕಣ್ಣೀರೊರೆಸುವ ಜಾಗೃತ ದೈವ ಎಂಬ ನಂಬಿಕೆಯಿದೆ ಎಂದು ನುಡಿದರು.ಶ್ರೀಮಠದ ಸ್ಥಳೀಯ ಬಡಾವಣೆಗಳಾದ ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ, ಹೊಸಹಳ್ಳಿ, ರಾಮನಹಳ್ಳಿ, ಗಾಂಧಿನಗರ, ಹೌಸಿಂಗ್‌ಬೋರ್ಡ್, ಕುವೆಂಪುನಗರ, ಕಲ್ಲಹಳ್ಳಿ ಸೇರಿದಂತೆ ಹಲವು ಬಡಾವಣೆಗಳ ಭಕ್ತರ ಸಹಕಾರದಿಂದ ಶ್ರೀರಾಯರ ಆರಾಧನೆ ಮತ್ತು ಶ್ರೀನಿವಾಸ ಕಲ್ಯಾಣವು ನಡೆದು ೩ದಿನಗಲ್ಲೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಅರ್ಚಕರಾದ ಶ್ರೀನಾಥ್, ಭಕ್ತರಾದ ವಿನಯ್, ಡ್ರಾಮಾಸೀನರಿ ಉಮೇಶ್, ಬಸುಆರಾಧ್ಯ, ಉಪನ್ಯಾಸಕ ಜಯರಾಂ, ಸಂದೇಶ್, ಹೊಸಹಳ್ಳಿ ಶಿವು, ಅಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಶ್ರೀಮಠದ ಭಕ್ತರು ಹಾಜರಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಬಸರಾಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಆಧುನಿಕ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ನೂತನ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಯುಪಿಎಸ್ ಸೌಲಭ್ಯದೊಂದಿಗೆ ನೀಡಲಾಯಿತು.
ಯೂಟ್ಯೂಬ್, ಇಂಟರ್ನೆಟ್‌ಗೆ ಸಂಪರ್ಕಿಸಬಹುದಾದ ಹಾಗೂ ಈಗಾಗಲೇ ತಯಾರಿಸಲಾದ ಹಲವು ಶೈಕ್ಷಣಿಕ ಪ್ರೋಗ್ರಾಮ್‌ಗಳು ಅಳವಡಿಕೆಯಾಗಿರುವ ಈ ಸ್ಮಾರ್ಟ್ ಬೋರ್ಡ್‌ನಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಖಂಡಿತವಾಗಿಯೂ ಸುಧಾರಿಸಲಿದೆ ಎಂದರು.ಉಪನ್ಯಾಸಕ ಲೋಕೇಶ ಬೆಕ್ಕಳಲೆ ಮಾತನಾಡಿ, ಡಿಜಿಟಲ್ ತರಗತಿಗಳ ಆರಂಭದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆದು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಟ್ರಸ್ಟ್ ಕೊಡುಗೆ ಸ್ಮರಿಸಿದರು.