೧೩ಕ್ಕೆ ಶ್ರೀಕ್ಷೇತ್ರ ಶಕಟಪುರಕ್ಕೆ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ

KannadaprabhaNewsNetwork |  
Published : Jan 12, 2025, 01:15 AM IST
ಶಕಟಪುರ | Kannada Prabha

ಸಾರಾಂಶ

ಕೊಪ್ಪ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್, ಶ್ರೀವಿದ್ಯಾಪೀಠಮ್ ಶ್ರೀಕ್ಷೇತ್ರ ಶಕಟಪುರದಲ್ಲಿ ಜ.೧೩ ಸೋಮವಾರ ಮಧ್ಯಾಹ್ನ ೦೨.೩೦ಕ್ಕೆ ಗೋಕರ್ಣ ಮಂಡಲಾಧೀಶ್ವರ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಶ್ರೀಕ್ಷೇತ್ರ ಶಕಟಪುರಕ್ಕೆ ಆಗಮಿಸುತ್ತಿದ್ದು ಜ.೧೪ರ ಮಂಗಳವಾರ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀಮಠದ ಯಾಗಶಾಲೆಯಲ್ಲಿ ಕಾಮಧೇನುಹೋಮದ ಪೂರ್ಣಾಹುತಿ ನೆರವೇರುವುದು.

ಯಾಗಶಾಲೆಯಲ್ಲಿ ಕಾಮಧೇನುಹೋಮದ ಪೂರ್ಣಾಹುತಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್, ಶ್ರೀವಿದ್ಯಾಪೀಠಮ್ ಶ್ರೀಕ್ಷೇತ್ರ ಶಕಟಪುರದಲ್ಲಿ ಜ.೧೩ ಸೋಮವಾರ ಮಧ್ಯಾಹ್ನ ೦೨.೩೦ಕ್ಕೆ ಗೋಕರ್ಣ ಮಂಡಲಾಧೀಶ್ವರ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಶ್ರೀಕ್ಷೇತ್ರ ಶಕಟಪುರಕ್ಕೆ ಆಗಮಿಸುತ್ತಿದ್ದು ಜ.೧೪ರ ಮಂಗಳವಾರ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀಮಠದ ಯಾಗಶಾಲೆಯಲ್ಲಿ ಕಾಮಧೇನುಹೋಮದ ಪೂರ್ಣಾಹುತಿ ನೆರವೇರುವುದು.ಶ್ರೀಜಗದ್ಗುರುದ್ವಯರ ಶ್ರೀಚಂದ್ರಮೌಲೀಶ್ವರಪೂಜೆ ನಂತರ ೧೧.೩೦ಕ್ಕೆ ಶ್ರೀಮಠದ ಯಾಗಶಾಲೆಯಲ್ಲಿ ಇರ್ವರು ಜಗದ್ಗುರು ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀಚಂಡಿಕಾ ಹೋಮದ ಪೂರ್ಣಾಹುತಿ, ನಂತರ ಸಭಾ ಮಂಟಪದಲ್ಲಿ ಅನುಗ್ರಹ ಆಶೀರ್ವಚನ, ಭಕ್ತರಿಂದ ಫಲಸಮರ್ಪಣೆ ನಡೆಯಲಿದೆ.

೧೬ರ ಗುರುವಾರ ಬೆಳಗ್ಗೆ ೯ ಗಂಟೆಗೆ ಶ್ರೀಚಂದ್ರಮೌಲೀಶ್ವರಪೂಜೆ ನಡೆಯಲಿದೆ. ೧೭ರ ಶುಕ್ರವಾರ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ. ಸಮಸ್ತ ಭಕ್ತಮಹಾಶಯರು ಈ ಸಂದರ್ಭದಲ್ಲಿ ಪಾಲ್ಗೊಂಡು ಶ್ರೀಜಗದ್ಗುರು ಆಚಾರ್ಯ ಮಹಾಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್ ಶ್ರೀವಿದ್ಯಾಪೀಠ-ಶ್ರೀಕ್ಷೇತ್ರ ಶಕಟಪುರದ ವ್ಯವಸ್ಥಾಪಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ
ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ