ಶ್ರೀರಾಮ ಪ್ರೀತಿ ವಾತ್ಸಲ್ಯಗಳ ಧರ್ಮ ಸಂದೇಶ ಸಾರಿದ

KannadaprabhaNewsNetwork | Published : Nov 20, 2024 12:30 AM

ಸಾರಾಂಶ

ತ್ರೇತಾಯುಗದಲ್ಲಿ ಸಾಮಾನ್ಯ ಮನುಷ್ಯನಂತೆ ಜನಿಸಿದ ಶ್ರೀರಾಮ, ಪಿತೃವಾಕ್ಯ ಪರಿಪಾಲಕನಾಗಿ, ದುಷ್ಟರ ಸಂಹಾರಕನಾಗಿ, ಶಿಷ್ಟರ ರಕ್ಷಕನಾಗಿ ಮನುಕುಲದ ಶ್ರೇಷ್ಠತೆಗಾಗಿ ಪ್ರೀತಿ, ವಾತ್ಸಲ್ಯಗಳ ಧರ್ಮ ಸಂದೇಶವನ್ನು ಸಾರಿದ್ದಾನೆ ಎಂದು ಸುಕ್ಷೇತ್ರ ಹಾರನಹಳ್ಳಿ ಶ್ರಿ.ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು. ಸಮಾಜವನ್ನು ಹೇಗೆ ಪ್ರೀತಿ, ವಾತ್ಸಲ್ಯದ ಮಮಕಾರದಿಂದ ನೋಡಿಕೊಳ್ಳಬೇಕು ಎನ್ನುವ ಧರ್ಮ ಸಂದೇಶವನ್ನು ಸಮಸ್ತ ಮನುಕುಲಕ್ಕೆ ನೀಡಿದ್ದಾನೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತ್ರೇತಾಯುಗದಲ್ಲಿ ಸಾಮಾನ್ಯ ಮನುಷ್ಯನಂತೆ ಜನಿಸಿದ ಶ್ರೀರಾಮ, ಪಿತೃವಾಕ್ಯ ಪರಿಪಾಲಕನಾಗಿ, ದುಷ್ಟರ ಸಂಹಾರಕನಾಗಿ, ಶಿಷ್ಟರ ರಕ್ಷಕನಾಗಿ ಮನುಕುಲದ ಶ್ರೇಷ್ಠತೆಗಾಗಿ ಪ್ರೀತಿ, ವಾತ್ಸಲ್ಯಗಳ ಧರ್ಮ ಸಂದೇಶವನ್ನು ಸಾರಿದ್ದಾನೆ ಎಂದು ಸುಕ್ಷೇತ್ರ ಹಾರನಹಳ್ಳಿ ಶ್ರಿ.ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಹಾರನಹಳ್ಳಿ ಗ್ರಾಮದ ಶ್ರೀ ಕೋಡಮ್ಮ ದೇವಸ್ಥಾನದ ಹತ್ತಿರದಲ್ಲಿ ನೂತನವಾಗಿ ನಿರ್ಮಿಸಿರುವ ಒಕ್ಕಲಿಗರ ಸಂಘದ ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭದ ಆಶೀರ್ವಚನ ನೀಡಿದ ಶ್ರೀಗಳು, ಮಹಾವಿಷ್ಣುವಿನ ದಶಾವತಾರದಲ್ಲಿ ಶ್ರೀರಾಮ ಚಂದ್ರಪ್ರಭುವಾಗಿ, ಆದರ್ಶ ಪುರುಷೋತ್ತಮನಾಗಿ ಸತ್ಯದ ಪರಿಪಾಲನೆಯನ್ನು ಮಾಡುವ ಮೂಲಕ ಸುಭಿಕ್ಷಾ ರಾಜ್ಯಭಾರದ ಆಡಳಿತವನ್ನು ಹೇಗೆ ಮಾಡಬೇಕು, ಸಮಾಜವನ್ನು ಹೇಗೆ ಪ್ರೀತಿ, ವಾತ್ಸಲ್ಯದ ಮಮಕಾರದಿಂದ ನೋಡಿಕೊಳ್ಳಬೇಕು ಎನ್ನುವ ಧರ್ಮ ಸಂದೇಶವನ್ನು ಸಮಸ್ತ ಮನುಕುಲಕ್ಕೆ ನೀಡಿದ್ದಾನೆ ಎಂದರು.

ಹಾಸನ ಆದಿಚುಂಚನಗಿರಿ ಶಾಖಾಮಠದ ಶ್ರೀಶಂಭುನಾಥ ಸ್ವಾಮೀಜಿ ಮಾತನಾಡಿ, ನಮ್ಮ ಸನಾತನ ಧರ್ಮ, ಸಂಸ್ಕೃತಿಯ ಆಚಾರ, ವಿಚಾರಗಳು ಹಾಗೂ ಸಂಪ್ರದಾಯಗಳು ಅತ್ಯಂತ ಶ್ರೇಷ್ಠವಾಗಿದ್ದು, ಗುರುಹಿರಿಯರಲ್ಲಿ ತ್ರಿಮೂರ್ತಿ ಸ್ವರೂಪವನ್ನು ಕಾಣುವ ನಮ್ಮ ಸಂಸ್ಕೃತಿಯಲ್ಲಿ ಮನೆಯನ್ನೇ ದೇವಾಲಯವನ್ನಾಗಿ ರೂಪಿಸುವ ಶಕ್ತಿಯನ್ನು ಹೊಂದಿದ್ದೇವೆ, ಸಮಾಜದಲ್ಲಿ ರಾಗ, ದ್ವೇಷಗಳು ಮರೆತು, ಎಲ್ಲರೊಡನೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಿ ಬಾಳುವ ಮೂಲಕ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಬೇಕೆಂದು ಹೇಳಿದರು.

ಕರ್ನಾಟಕ ಗೃಹ ಮಂಡಳಿ ಅಧಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಅನಾದಿಕಾಲದಿಂದಲೂ ನಮ್ಮ ಸಂಸ್ಕೃತಿ ಆಚಾರ, ವಿಚಾರಗಳು, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಆದರೆ "ವಿನಾಶ ಕಾಲೇ ವಿಪರೀತ ಬುದ್ಧಿ " ಎಂಬಂತೆ ಇಂದಿನ ವೈಜ್ಞಾನಿಕಯುಗದಲ್ಲಿ ಮನುಷ್ಯ ಮಾನವೀಯ ಮೌಲ್ಯಗಳನ್ನು ಮರೆತು ಹಣ, ಆಸ್ತಿಗಾಗಿ ಕಷ್ಟಪಟ್ಟು ಸಾಕಿಸಲುಹಿದ ತಂದೆತಾಯಿಗಳೇ ಕೊಲ್ಲುವಂತಹ ಹಾಗೂ ವೃದ್ಧಾಶ್ರಮಕ್ಕೆ ಕಳುಹಿಸುವಂತಹ ಮನಸ್ಥಿತಿ ಬೆಳೆಸಿಕೊಳ್ಳುತ್ತಿರುವುದು ಬಗ್ಗೆ ಯುವಜನಾಂಗ ಚಿಂತನೆ ಮಾಡಬೇಕಾಗಿದೆ. ಸಂಸಾರದಲ್ಲಿ ಹಣ, ಐಶ್ವರ್ಯ, ಅಧಿಕಾರ ಯಾರಿಗೂ ಶಾಶ್ವತವಲ್ಲ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಿನಿಂದ ಬಾಳಿದಾಗ ಮಾತ್ರ ಸುಖ, ಶಾಂತಿ, ನೆಮ್ಮದಿ ಜೀವನದ ಮೂಲಕ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ ಎಂದು ತಿಳಿಸಿದರು. ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮಾತನಾಡಿ, ಅನ್ನದಾತನಾದ ಒಕ್ಕಲಿಗ ಸಮಾಜ ಯಾವ ಪ್ರತಿಫಲಾಪೇಕ್ಷೆ ಇಲ್ಲದ ತ್ಯಾಗಜೀವಿ ಸಮಾಜವಾಗಿದ್ದು, ಶ್ರೀರಾಮ ದೇವರ ಆರಾಧಕರಾಗಿದ್ದಾರೆ. ದೇವರನ್ನು ಗುಡಿಗೋಪುರಗಳಲ್ಲಿಟ್ಟು ಪೂಜಿಸಿ ಆರಾಧಿಸುವ ಜತೆಗೆ, ಆಸ್ತಿಗಾಗಿ ತಂದೆ ತಾಯಿ ಸಹೋದರ ನಡುವೆ ಕಿತ್ತಾಡುವ ಬದಲು ಶ್ರೀರಾಮನ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಪರಸ್ಪರ ಮಧುರ ಬಾಂಧವ್ಯಗಳಿಂದ ಬದುಕಿ ಬಾಳಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ತಿಪಟೂರು ಷಡಾಕ್ಷರಿ ಮಠದ ಶ್ರೀ.ಡಾ.ರುದ್ರಮುನಿ ಸ್ವಾಮೀಜಿ, ಶ್ರೀಮಾರುತಿ ಸಚ್ಚಿದಾನಂದ ಆಶ್ರಮದ ಪರಂಪರಾ ಅವಧೂತರಾದ ಶ್ರೀ ಸತೀಶ್ ಶರ್ಮ ಗುರೂಜಿ, ಶ್ರೀ ಕೋಡಿಮಠದ ಉತ್ತರಾಧಿಕಾರಿಗಳಾದ ಚೇತನ್ ಮರಿದೇವರು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್‌.ಅನಂತಕುಮಾರ್‌, ಕಾಂಗ್ರೆಸ್ ಮುಖಂಡರಾದ ಮೆಟ್ರೋಬಾಬು, ಧರ್ಮಶೇಖರ್‌, ನಗರದ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ, ಸಂಘದ ಅಧಕ್ಷ ಕೃಷ್ಣಮೂರ್ತಿ, ಉಪಾಧಕ್ಷ ಎಚ್.ಸಿ.ದೇವರಾಜ್, ಕಾರ್ಯದರ್ಶಿ ಎಚ್.ಎನ್.ಸುರೇಶ್, ಖಜಾಂಚಿ ಎಚ್.ಕೆ. ಮನುಕುಮಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಫೊಟೋ ಶೀರ್ಷಿಕೆ:

ಊSಓ೧೯ಂSಏ-P೦೨: ಅರಸೀಕೆರೆ: ಒಕ್ಕಲಿಗರ ಸಂಘದ ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಹಾಗೂ ಗಣ್ಯರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

Share this article