ಶ್ರೀರಾಮದರ್ಶನ ನಮ್ಮ ಭಾಗ್ಯದ ಫಲ: ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ್

KannadaprabhaNewsNetwork | Updated : Feb 12 2024, 02:53 PM IST

ಸಾರಾಂಶ

ಶ್ರೀರಾಮ ದರ್ಶನ ಪಡೆಯುವುದು ನಮ್ಮ ಭಾಗ್ಯದ ಫಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದರು.

ಕೊಪ್ಪಳ: ಶ್ರೀರಾಮ ದರ್ಶನ ಪಡೆಯುವುದು ನಮ್ಮ ಭಾಗ್ಯದ ಫಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಕೊಪ್ಪಳದಿಂದ ಅಯೋಧ್ಯೆಗೆ ತೆರಳಿದ 315 ಜನರನ್ನು ಅಭಿನಂದಿಸಿ, ಅಯೋಧ್ಯೆಗೆ ತೆರಳುವ ವಿಶೇಷ ರೈಲನ್ನು ಸ್ವಾಗತಿಸಲು ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ 500 ವರ್ಷಗಳ ಭಾರತೀಯರ ಕನಸು ಶ್ರೀರಾಮಮಂದಿರ ನಿರ್ಮಾಣವಾಗುವ ಮೂಲಕ ನನಸಾಗಿದೆ. ಸದ್ಯ ಕೋಟಿ ಕೋಟಿ ಭಾರತೀಯರು ಶ್ರೀರಾಮನ ದರ್ಶನಕ್ಕೆ ಕಾತೊರೆಯುತ್ತಿದ್ದಾರೆ. 

ಸದ್ಯ ಆಸ್ಥಾ ವಿಶೇಷ ರೈಲಿನ ಮೂಲಕ ಜನರು ಶ್ರೀರಾಮನ ದರ್ಶನಕ್ಕೆ ತೆರಳುತ್ತಿರುವುದು ಸಂತೋಷದ ವಿಷಯ. ಶ್ರೀರಾಮಮಂದಿರ ಉದ್ಘಾಟನೆ ಆದ ನಂತರ ಹನುಮನ ಉದಯಿಸಿದ ಕೊಪ್ಪಳ ನಾಡಿನಿಂದ ಜನರು ಶ್ರೀರಾಮನ ದರ್ಶನಕ್ಕೆ ತೆರಳುತ್ತಿರುವುದು ಜಿಲ್ಲೆಯ ಪುಣ್ಯವೇ ಸರಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಮತ್ತೊಂದು ಐತಿಹ್ಯ ನೀಡಿದರು. ಶ್ರೀರಾಮಮಂದಿರ ಕೆಲಸ ಸಾಮಾನ್ಯವಾದದ್ದಲ್ಲ. ಶ್ರೀರಾಮ ಶಕ್ತಿ ಭಾರತದ ನೆಲೆಯಲ್ಲಿದೆ. 

ಇದರಿಂದ ಭಾರತ ಮತ್ತಷ್ಟು ಎತ್ತರಕ್ಕೇರಲಿದೆ ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ರಾಮಮಂದಿರ ನಿರ್ಮಾಣದಲ್ಲಿ ಶ್ರೀರಾಮದೇವರ ಮೂರ್ತಿ ಮಾಡಿದ ಯೋಗೀರಾಜ್ ಕರ್ನಾಟಕದವರು ಎನ್ನುವುದು ಹೆಮ್ಮೆಯ ಸಂಗತಿ. 

ಶ್ರೀರಾಮ ದರ್ಶನ ಮಾಡುತ್ತಿರುವ ಜನರ ದರ್ಶನದಿಂದ ನಮಗೂ ಶ್ರೀರಾಮದ ದರ್ಶನ ಆದಂತಾಗಿದೆ ಎಂದರು.ಬಿಜೆಪಿ ಮುಖಂಡೆ ಮಂಜುಳಾ ಕರಡಿ, ರೈಲ್ವೆ ಅಧಿಕಾರಿಗಳಾದ ಆಸಿಫ್ ಜಿ, ದೇವಾನಿ ಇದ್ದರು.

Share this article