ಶ್ರೀ ರಾಮನಾಮ ಜಪ ಅಭಿಯಾನ ಮಂಗಲೋತ್ಸವ

KannadaprabhaNewsNetwork |  
Published : Oct 25, 2025, 01:02 AM IST
ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನಶ್ರೀ ರಾಮನಾಮ ಜಪ ಅಭಿಯಾನ ಮಂಗಲೋತ್ಸವ | Kannada Prabha

ಸಾರಾಂಶ

ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವತಿಯಿಂದ ಜರಗಿದ ಶ್ರೀ ರಾಮನಾಮ ಮಂತ್ರ ಜಪ ಅಭಿಯಾನದ ಮಂಗಲೋತ್ಸವವು ಶ್ರೀ ದೇವಳದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ವೈಭವದಿಂದ ಜರಗಿತು.

ಮೂಡುಬಿದಿರೆ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವತಿಯಿಂದ ಜರಗಿದ ಶ್ರೀ ರಾಮನಾಮ ಮಂತ್ರ ಜಪ ಅಭಿಯಾನದ ಮಂಗಲೋತ್ಸವವು ಶ್ರೀ ದೇವಳದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ವೈಭವದಿಂದ ಜರಗಿತು. ಮಠದ 550ನೇ ವರ್ಷದ ಅಂಗವಾಗಿ ರಾಷ್ಟ್ರವ್ಯಾಪಿಯಾಗಿ ಜರಗಿದ 550 ದಿನಗಳ 550 ಕೋಟಿ ಶ್ರೀ ರಾಮನಾಮ ಅಭಿಯಾನದಲ್ಲಿ ಸಹಭಾಗಿಯಾಗಿದ್ದ ದೇವಳದ ವಿದ್ಯಾ ನಿಧಿ ಜಪ ಕೇಂದ್ರದ ವತಿಯಿಂದ ಜರಗಿದ ಈ ಮಂಗಲೋತ್ಸವದಲ್ಲಿ ಹೋಬಳಿಯ ಉಪಕೇಂದ್ರ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಕೆಸರುಗದ್ದೆ ಶ್ರೀ ರಾಮ ಮಂದಿರ, ವೇಣೂರು ಶ್ರೀ ರಾಮ ಮಂದಿರದ ಪ್ರತಿನಿಧಿಗಳು, ಜಪಕರು ಪಾಲ್ಗೊಂಡಿದ್ದರು.ಮಂಗಲೋತ್ಸವದ ಸಂಜೆ 1008 ಸಾಮೂಹಿಕ ಶ್ರೀ ರಾಮ ನಾಮ ಜಪದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. 491 ದಿನಗಳ ಕಾಲ ಮೂಡುಬಿದಿರೆಯಲ್ಲಿ ಜರಗಿದ ಅಭಿಯಾನದಲ್ಲಿ ಪಾಲ್ಗೊಂಡವರು ಸಪರಿವಾರ ಶ್ರೀ ದೇವರಿಗೆ ಪುಷ್ಪಾರ್ಚನೆ ನಡೆಸಿ ಸ್ಮರಣಿಕೆ ಪ್ರಸಾದ , ಶ್ರೀ ಸಂಸ್ಥಾನದ ಮಂತ್ರಾಕ್ಷತೆ ಸ್ವೀಕರಿಸಿದರು.ಬಳಿಕ ಜರಗಿದ ಸರಳ ಸಭಾ ಕಾರ್ಯಕ್ರಮದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಸಂಸ್ಥಾನದ ಸಾರ್ಧ ಪಂಚಶತಮಾನೋತ್ಸವ ಕುರಿತು ವಿವರ ನೀಡಿದರು.ಅಭಿಯಾನದ ನಿರ್ವಹಣೆಯಲ್ಲಿ ಸಹಕರಿಸಿದ ವೈದಿಕರು, ಉಸ್ತುವಾರಿ, ನಿರ್ವಹಣೆ, ಲೆಕ್ಕಾಚಾರ ವಿಭಾಗದಲ್ಲಿ ಸೇವೆ ಸಲ್ಲಿಸಿದವರನ್ನು ದೇವಳದ ವತಿಯಿಂದ ಗೌರವಿಸಲಾಯಿತು. ಆಡಳಿತ ಮಂಡಳಿಯ ಮೊಕ್ತೇಸರರು ಉಪಸ್ಥಿತರಿದ್ದರು.

ವೇ.ಮೂ. ಕೆ. ಪದ್ಮನಾಭ ಭಟ್ ಮಂಗಲೋತ್ಸವದ ವೈದಿಕ ಕಾರ್ಯ ನೆರವೇರಿಸಿ ಮಂಗಳಾರತಿ ಬೆಳಗಿದರು. ಎಂ. ರಮೇಶ ಭಟ್ ಸಹಕರಿಸಿದರು. ವಿದ್ಯಾನಿಧಿ ಕೇಂದ್ರ ಸಂಪರ್ಕ ಪ್ರಮುಖ ಗಣೇಶ್ ಕಾಮತ್ ಮೂಡುಬಿದಿರೆ ಗುರುವರ್ಯರ ರಾಯಸದ ವಿವರಗಳನ್ನು ಸಭೆಯ ಮುಂದೆ ಪ್ರಕಟಿಸಿ, ನಿರೂಪಿಸಿದರು.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ