ಪೊಲೀಸರ ವಿರೋಧಕ್ಕೂ ಮಣಿಯದೆ ಶ್ರೀರಾಮೋತ್ಸವ

KannadaprabhaNewsNetwork |  
Published : Jan 23, 2024, 01:46 AM IST
ಚಿತ್ರ1.ಯಡ್ರಾಮಿ 1 ಮತ್ತು ಯಡ್ರೈಾಮಿ 2ಯಡ್ರಾಮಿಯ ರಾಮತೀರ್ಥದಲ್ಲಿ ಆಯೋದ್ಯ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಸೋಮವಾರ ಬೆಳಿಗ್ಗೆ ರಾಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಡಕೋಳದ ಮಡಿವಾಳೇಶ್ವರ ಮಹಾಮಠದ ಶ್ರೀ.ಡಾ.ರುದ್ರಮುನಿ ಶಿವಾಚಾರ್ಯರು, ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಲಿಂಗನಗೌಡ ಪೊಲೀಸ್ ಪಾಟೀಲ, ದೇವಿಂದ್ರಪ್ಪಗೌಡ ಸರಕಾರ, ಸಿದ್ರಾಮಪ್ಪಗೌಡ ಇದ್ದರು. | Kannada Prabha

ಸಾರಾಂಶ

ಯಡ್ರಾಮಿ ಸರ್ದಾರ್ ಶರಣಗೌಡ ವೃತ್ತದಿಂದ ಶ್ರೀರಾಮನ ಭಾವಚಿತ್ರ ಮೆರವಣಿಗೆ ಪ್ರಾರಂಭಿಸಲು ಹಿಂದು ಕಾರ್ಯಕರ್ತರು ಮುಂದಾದಾಗ ಪೊಲೀಸರು ತಡೆ ನೀಡಿದರು. ಇಷ್ಟಾದರೂ ಸಹ ಕಾರ್ಯಕ್ರಮ ಆಯೋಜಕರು ಪೊಲೀಸರ ಮಾತಿಗೆ ಕ್ಯಾರೆ ಎನ್ನದೇ ಮೆರವಣಿಗೆ ಪ್ರಾರಂಭಿಸಿದರು. ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಯಿತು. ಅಲ್ಲಿ ಮತ್ತೆ ಪೊಲೀಸರು ಮೆರವಣಿಗೆ ಸ್ಥಗಿತಗೊಳಿಸಿದರು.

ಕನ್ನಡಪ್ರಭ ವಾರ್ತೆ ಯಡ್ರಾಮಿ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಿಮಿತ್ತ ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಿಂದೂಪರ ಕಾರ್ಯಕರ್ತರು ಆಯೋಜನೆ ಮಾಡಿದ್ದರು. ಬೆ.11ಕ್ಕೆ ಯಡ್ರಾಮಿಯ ಐತಿಹಾಸಿಕ ಕೇಂದ್ರ ರಾಮತೀರ್ಥದಲ್ಲಿ ಕಡಕೋಳ ಮಠದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು ಮತ್ತು ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಪೂಜೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ನಂತರ ಸರ್ದಾರ್ ಶರಣಗೌಡ ವೃತ್ತದಿಂದ ಶ್ರೀರಾಮನ ಭಾವಚಿತ್ರ ಮೆರವಣಿಗೆ ಪ್ರಾರಂಭಿಸಲು ಹಿಂದು ಕಾರ್ಯಕರ್ತರು ಮುಂದಾದಾಗ ಪೊಲೀಸರು ತಡೆ ನೀಡಿದರು. ಇಷ್ಟಾದರೂ ಸಹ ಕಾರ್ಯಕ್ರಮ ಆಯೋಜಕರು ಪೊಲೀಸರ ಮಾತಿಗೆ ಕ್ಯಾರೆ ಎನ್ನದೇ ಮೆರವಣಿಗೆ ಪ್ರಾರಂಭಿಸಿದರು. ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಯಿತು. ಅಲ್ಲಿ ಮತ್ತೆ ಪೊಲೀಸರು ಮೆರವಣಿಗೆ ಸ್ಥಗಿತಗೊಳಿಸಿದರು.

ನಂತರ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮುಖಂಡರಾದ ಮಲ್ಲಿನಾಥಗೌಡ ಪಾಟೀಲ ಯಲಗೋಡ, ಶೋಭಾ ಬಾಣಿ, ಲಿಂಗನಗೌಡ ಪೊಲೀಸ್ ಪಾಟೀಲ ಸ್ಥಳಕ್ಕೆ ಆಗಮಿಸಿ ನೆರದಿದ್ದ ಹಿಂದುಪರ ಕಾರ್ಯಕರ್ತರಿಗೆ ಹುರುದುಂಬುವಂತೆ ಮಾಡಿದರು. ಮುಖಂಡರು ಮತ್ತು ಕಾರ್ಯಕರ್ತರಿಗೆ ಪಿಎಸ್ಸೈ ಸುಖಾನಂದ ಸಿಂಘೆ ಎಷ್ಟೇ ಮನವೊಲಿಸಲು ಮುಂದಾದರೂ ಸಹ ಕ್ಯಾರೆ ಎನ್ನದೆ ಜೈ ಶ್ರೀರಾಮ ಘೋಷಣೆ ಕೂಗುತ್ತಾ ಮತ್ತೆ ಮೆರವಣಿಗೆ ಪ್ರಾರಂಭಿಸಿದರು. ಇದರಿಂದಾಗಿ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತುಕೊಳ್ಳುವಂತಾಯಿತು. ನಂತರ ಹನುಮಾನ ದೇವಸ್ಥಾನದವರೆಗೆ ಮೆರವಣಿಗೆ ನಡೆದು ಸಮಾಪ್ತಿಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ