ಸಮಾನತೆಯ ಸಿದ್ಧಾಂತ ಮಂಡಿಸಿದ್ದ ಶ್ರೀ ರೇಣುಕರು

KannadaprabhaNewsNetwork |  
Published : Mar 13, 2025, 12:50 AM IST
೧೨ಕೆಎಲ್‌ಆರ್-೮ಕೋಲಾರದ ರಂಗಮಂದಿರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಿದರು. ಶ್ರೀ ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿ, ಎಡಿಸಿ ಮಂಗಳ ಇದ್ದರು. | Kannada Prabha

ಸಾರಾಂಶ

ಸಮಾಜಕ್ಕೆ ಮಾನವ ಧರ್ಮದ ಆದರ್ಶಗಳ ಸೂತ್ರಗಳನ್ನು ಹಾಗೂ ಸಮಾನತೆಯ ಸಿದ್ಧಾಂತ ತಿಳಿಸಿ ಕೊಟ್ಟಂಥ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ತಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ತಾಲೂಕಿನ ಶ್ರೀ ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಸಮಾಜಕ್ಕೆ ಮಾನವ ಧರ್ಮದ ಆದರ್ಶಗಳ ಸೂತ್ರಗಳನ್ನು ಹಾಗೂ ಸಮಾನತೆಯ ಸಿದ್ಧಾಂತ ತಿಳಿಸಿ ಕೊಟ್ಟಂಥ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ತಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ತಾಲೂಕಿನ ಶ್ರೀ ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ನಗರದ ರಂಗಮಂದಿರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ವೀರಶೈವ ಧರ್ಮದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಜಗಜ್ಯೋತಿ ಬಸವೇಶ್ವರರು ಇಬ್ಬರೂ ಮಹಾನ್ ಮಾನವತಾವಾದಿಗಳಾಗಿದ್ದು, ಸಮಸಮಾಜದ ಎರಡು ಕಣ್ಣುಗಳಾಗಿದ್ದಾರೆ. ಇಷ್ಟ ಲಿಂಗವನ್ನು ಭೂಮಿಗೆ ನೀಡಿದಂಥ ಮಹಾ ಪುರುಷರು ಎಂದರು.

ಜಗತ್ತಿನಲ್ಲಿ ನಡೆಯುತ್ತಿದ್ದ ಅನಾಚಾರ ನಿಯಂತ್ರಿಸಲು, ದ್ವಂದ್ವ ನೀತಿಗಳನ್ನು ಹೋಗಲಾಡಿಸಲು ವೀರಶೈವ ಧರ್ಮ ಸ್ಥಾಪಿಸಿದ ಪಂಚ ಪೀಠಗಳಿಂದಾಗಿ ಇಂದು ದೇಶದೆಲ್ಲೆಡೆ ಸುಮಾರು ೧೨ ಸಾವಿರಕ್ಕೂ ಹೆಚ್ಚು ಶಾಖಾ ಮಠಗಳಾಗಿವೆ. ಜಾತ್ಯಾತೀತವಾಗಿ ಶಿಕ್ಷಣ, ವಸತಿ, ಅಕ್ಷರದ ದಾಸೋಹಗಳನ್ನು ನಡೆಸುವ ಮೂಲಕ ಹೆಣ್ಣು- ಗಂಡು, ಜಾತಿ, ಧರ್ಮಗಳ ಭೇದ- ಭಾವವನ್ನು ಹೋಗಲಾಡಿಸಿ ಸಮಸಮಾಜದ ನಿರ್ಮಾಣಕ್ಕೆ ಸಾಕ್ಷೀಕರಿಸುತ್ತಿದೆ ಎಂದು ತಿಳಿಸಿದರು.

ಈ ಭಾಗದಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಎಲ್ಲರಿಗೂ ಸಮರ್ಪಕವಾದ ಮಾಹಿತಿ ಹೋಗಿದ್ದರೆ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಬಹುದಿತ್ತು. ಮುಂಬರಲಿರುವ ಬಸವ ಜಯಂತಿಗೆ ಜಿಲ್ಲೆಯಲ್ಲಿರುವ ವೀರಶೈವ ಸಮುದಾಯದ ಎಲ್ಲಾ ಸಂಘಟನೆಗಳು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತಾಗಬೇಕು, ಸರ್ಕಾರವು ಈ ಮಹಾತ್ಮರ ಜಯಂತಿ ಆಚರಿಸಲು ಕೊಟ್ಟಿರುವ ಅವಕಾಶವನ್ನು ಸದ್ಬಳಿಸಿಕೊಳ್ಳುವಂತಾಗಬೇಕು ಎಂದರು.ಎಡೀಸಿ ಮಂಗಳ ಮಾತನಾಡಿ, ವೀರಶೈವ ಸಮುದಾಯದ ಸಂಖ್ಯೆ ತೀರಾ ವಿರಳವಾಗಿದ್ದು, ಎಲ್ಲರೂ ಒಂದೇ ವೇದಿಕೆಯಡಿ ಸಂಘಟಿತರಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಮಾಲೂರಿನ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಗ, ಶರಣೆಯರ ಬಳಗದ ವಿಮಲ ಬೈಲಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಆರ್. ಜ್ಞಾನಮೂರ್ತಿ, ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಉಪಾಧ್ಯಕ್ಷ ಕೆ.ಬಿ.ಬೈಲಪ್ಪ, ಶ್ರೀ ಶರಣ ಸಾಹಿತ್ಯ ಪರಿಷತ್‌ನ ಬಿ.ಸುರೇಶ್, ಬಂಗಾರಪೇಟೆಯ ಚಂದ್ರಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿದ್ದಲಿಂಗ ಒಡೆಯರ್ ಇದ್ದರು.

ಶರಣೆಯರ ಬಳಗದಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಕೊಂಡರಾಜನಹಳ್ಳಿ ಮಂಜುಳ ನಿರೂಪಿಸಿ, ಸುನೀಲ್‌ರಿಂದ ನಾಡಗೀತೆ ಹಾಡಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಸ್ವಾಗತಿಸಿ, ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ