- ರಾಜ್ಯ ವಿವಿಧೆಡೆಗಳ ಭಕ್ತರ ಆಗಮನ । ಉಧೋ ಉಧೋ ಎಂದು ಘೋಷಣೆ - - - ಕನ್ನಡಪ್ರಭ ವಾರ್ತೆ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಿಯ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಿರೆಕೇರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಜಿಲ್ಲೆಯ ಲಕ್ಷಾಂತರ ಭಕ್ತರು ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ವಿಜಯದಶಮಿಯಂದು ಆಗಮಿಸಿ, ಮಲೆನಾಡಿನ ಶಕ್ತಿ ದೇವತೆ ರೇಣುಕಾದೇವಿ ದರ್ಶನ ಪಡೆದರು. ಉಧೋ ಉಧೋ ಎಂದು ಜೈಕಾರ ಹಾಕುತ್ತಾ ಭಕ್ತಿ ಸಮರ್ಪಿಸಿದರು. ವಿಜಯ ದಶಮಿಯ ಬಹುಮುಖ್ಯ ಘಟ್ಟವಾದ ಬನ್ನಿ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಚಂದ್ರಗುತ್ತಿ ಸಮೀಪದ ನ್ಯಾರ್ಶಿ ಗ್ರಾಮದ ಬನ್ನಿಮಂಟಪದಲ್ಲಿ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿಯನ್ನು ಇರಿಸಿ ಬನ್ನಿ ಮುಡಿಯುವ ಆಚರಣೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಮಾರಿಕೊಪ್ಪದ ಭಕ್ತರು ಬನ್ನಿ ಅರ್ಪಿಸಿದರು. ಬನ್ನಿ ಉತ್ಸವಕ್ಕೆ ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಚಾಲನೆ ನೀಡಿದರು. ಬಂದಂಥ ಸಮಸ್ತ ಭಕ್ತರು, ಸ್ಥಳೀಯ ಜನಪ್ರತಿನಿಧಿಗಳು, ಚುನಾಯಿತ ಪ್ರತಿನಿಧಿಗಳು, ಎಲ್ಲ ಇಲಾಖೆ ಅಧಿಕಾರಿಗಳಿಗೆ ಸಂಪ್ರದಾಯದಂತೆ ಬನ್ನಿ ನೀಡಿದರು. ಅನಂತರ ಬನ್ನಿ ಮಂಟಪದಿಂದ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಆಗಮ ಶಾಸ್ತçದ ವಿಧಿ ವಿಧಾನಗಳೊಂದಿಗೆ ಸಮಸ್ತ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿAದ ಜರುಗಿತು. ಸೊರಬ ಸಿ.ಪಿ.ಐ. ರಾಜಶೇಖರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್, ಸದಸ್ಯ ಎಂ.ಪಿ. ರತ್ನಾಕರ, ನ್ಯಾರ್ಶಿ ಗ್ರಾಪಂ ಅಧ್ಯಕ್ಷ ಧನಂಜಯ್ ಡಿ. ನಾಯ್ಕ್, ತಾಪಂ ಮಾಜಿ ಸದಸ್ಯ ಎನ್.ಜಿ. ನಾಗರಾಜ್, ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಸುರೇಂದ್ರಗೌಡ ಸೇರಿದಂತೆ ಚಂದ್ರಗುತ್ತಿ ನ್ಯಾರ್ಶಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. - - - -24ಕೆಪಿಸೊರಬ02: ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ರೇಣುಕಾಂಬ ದೇವಿಯ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ಸಂಪನ್ನಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.