ಶ್ರೀಸಣ್ಣಕ್ಕಿರಾಯಸ್ವಾಮಿ ಬಸಪ್ಪಗೆ ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆ

KannadaprabhaNewsNetwork |  
Published : Jun 11, 2025, 12:21 PM IST
10ಕೆಎಂಎನ್ ಡಿ12 | Kannada Prabha

ಸಾರಾಂಶ

ದೊಡ್ಡರಸಿನಕೆರೆ ಗ್ರಾಮದ ಶ್ರೀಸಣ್ಣಕ್ಕಿರಾಯಸ್ವಾಮಿ ದೇವರ ಬಸಪ್ಪಗೆ ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆ ಕಾರ್ಯಕ್ರಮ ಜರುಗಿತು. ಮುದ್ರಾಧಾರಣೆ ಹಿನ್ನೆಲೆಯಲ್ಲಿ ಜೂ.7ರಂದು ನದಿ ದಡದಿಂದ ದೊಡ್ಡರಸಿನಕೆರೆ ಶ್ರೀಕಾಲಭೈರವೇಶ್ವರಸ್ವಾಮಿ ಬಸಪ್ಪ, ಶ್ರೀಸಣ್ಣಕ್ಕಿರಾಯಸ್ವಾಮಿ ಬಸವಗೆ ಗೋ ಸಮೇತ, ಹೊಂಬಾಳೆ ಮಾಡಿಕೊಂಡು ಗಂಗೆ ತರಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ದೊಡ್ಡರಸಿನಕೆರೆ ಗ್ರಾಮದ ಶ್ರೀಸಣ್ಣಕ್ಕಿರಾಯಸ್ವಾಮಿ ದೇವರ ಬಸಪ್ಪಗೆ ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆ ಕಾರ್ಯಕ್ರಮ ಜರುಗಿತು.

ಮುದ್ರಾಧಾರಣೆ ಹಿನ್ನೆಲೆಯಲ್ಲಿ ಜೂ.7ರಂದು ನದಿ ದಡದಿಂದ ದೊಡ್ಡರಸಿನಕೆರೆ ಶ್ರೀಕಾಲಭೈರವೇಶ್ವರಸ್ವಾಮಿ ಬಸಪ್ಪ, ಶ್ರೀಸಣ್ಣಕ್ಕಿರಾಯಸ್ವಾಮಿ ಬಸವಗೆ ಗೋ ಸಮೇತ, ಹೊಂಬಾಳೆ ಮಾಡಿಕೊಂಡು ಗಂಗೆ ತರುವುದು. ನಂತರ ಗೋ ಪೂಜೆ, ಗಣಪತಿ ಪೂಜೆ, ಗಣಹೋಮ, ಪಂಚಬ್ರಹ್ಮ ಹೋಮ ಇತ್ಯಾದಿ ಹೋಮಗಳು ಪೂರ್ಣಹುತಿ ನೆರವೇರಿತು.

ಜೂ.8ರಂದು ಕ್ಷೇತ್ರಾಧಿಪತಿ ಶ್ರೀಸಣ್ಣಕ್ಕಿರಾಯಸ್ವಾಮಿ ಬಸಪ್ಪಗೆ ಅಭಿಷೇಕ, ರುದ್ರಹೋಮ, ಶಾಂತಿ ಹೋಮ, ಜಯಾಧಿ ಹೋಮ, ಪ್ರಾಯಶ್ಚಿತ ಹೋಮ. ಬೆಳಗ್ಗೆ (ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆ) ಯನ್ನು ಗುರುವಿನಪುರ ಮಠದ ಜಗದೀಶ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು. ನಂತರ ಪುರ್ಣಾಹುತಿ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಜರುಗಿತು.

ನಂತರ ಶ್ರೀಸಣ್ಣಕ್ಕಿರಾಯಸ್ವಾಮಿ ಬಸಪ್ಪ ದೊಡ್ಡರಸಿನಕೆರೆ ತೇರಿನ ಬೀದಿಯಲ್ಲಿ ಉಪಧಾನ ಮಾಡಿಕೊಂಡು ಬಸಪ್ಪ ಮನೆಗೆ ಪ್ರವೇಶಿಸಿದ ದಿನದಿಂದ 48 ದಿನಗಳ ಕಾಲ ಮಂಡಲ ಪೂಜೆ ನೆರವೇರಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಶ್ರೀಸಣ್ಣಕ್ಕಿರಾಯಸ್ವಾಮಿಗೆ ಅಭಿಷಕ ಮತ್ತು ಹೋಮದ ನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು. ಸಂಜೆ ಗ್ರಾಮದಲ್ಲಿ ಶ್ರೀಸಣ್ಣಕ್ಕಿರಾಯ ಬಸಪ್ಪ, ಶ್ರೀಕಾಲಭೈರವೇಶ್ವರ ಬಸಪ್ಪ ಮತ್ತು ಪೂಜೆಗಳ ಮೆರವಣಿಗೆಗಳು ಜರುಗಿದವು.

ದೊಡ್ಡರಸಿನಕೆರೆ, ಮುಟ್ಟನಹಳ್ಳಿ ದೇವರಹಳ್ಳಿ, ಕುರಿಕೆಂಪನದೊಡ್ಡಿ, ಗೌಡಯ್ಯನದೊಡ್ಡಿ, ಕರಡಕೆರೆ, ಕೆ.ಎಂ.ದೊಡ್ಡಿ. ಚಿಕ್ಕ ಮರಿಗೌಡನಗರ, ಛತ್ರದಹೊಸಹಳ್ಳಿ, ಹುಣ್ಣನದೊಡ್ಡಿ, ಚಿಕ್ಕರಸಿನಕೆರೆ, ಗುರುದೇವರಹಳ್ಳಿ, ಮೆಳ್ಳಹಳ್ಳಿ, ಕಾಡನಪುರದದೊಡ್ಡಿ, ಅಣ್ಣೂರು, ಕಡಿಲುವಾಗಿಲು, ಲಕ್ಕೇಗೌಡನದೊಡ್ಡಿ, ಸಬ್ಬನಹಳ್ಳಿ, ಮಾಲಗಾರನಹಳ್ಳಿ, ಕೊಂಡಾಪುರ, ಕೊಡಂಬಳ್ಳಿ, ಹುಚ್ಚಯ್ಯನದೊಡ್ಡಿ ಅಂಚಿಪುರ, ಮಠದದೊಡ್ಡಿ, ಮಂಚೇಗೌಡನದೊಡ್ಡಿ ಸೋಮಪುರ, ನೀಲಕಂಠನಹಳ್ಳಿ, ಜವನಗನಹಳ್ಳಿ, ಮಳವಳ್ಳಿ, ಮಂಡ್ಯ ಜಿಲ್ಲೆ ಮೈಸೂರು ಜಿಲ್ಲೆ ಚಾಮರಾಜನಗರ ಜಿಲ್ಲೆ ರಾಮನಗರ ಜಿಲ್ಲೆ, ಬೆಂಗಳೂರು ಜಿಲ್ಲೆ ಗಳಿಂದ ಭಕ್ತರು ಆಗಮಿಸಿದ್ದರು.

ಈ ವೇಳೆ ಶ್ರೀಸಣ್ಣಕ್ಕಿರಾಯ ಬಸವ ಸೇವಾ ಸಮಿತಿಯ ಪದಾಧಿಕಾರಿಗಳು, ದೇವಾಲಯದ ಪೂಜಾರಿಗಳು ಮತ್ತು ಯಾಜಮಾನರು ಮತ್ತು ಗ್ರಾಮಸ್ಥರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ