6 ವಿವಿಗಳ ಜತೆ ಶ್ರೀ ಸತ್ಯ ಸಾಯಿ ವಿವಿ ಒಡಂಬಡಿಕೆ

KannadaprabhaNewsNetwork |  
Published : Sep 20, 2025, 01:00 AM IST
  ಸಿಕೆಬಿ-1 ಕರ್ನಾಟಕದ 6 ವಿವಿಗಳೊಂದಿಗೆ ಶ್ರೀ ಸತ್ಯ ಸಾಯಿ ಮಾನವಾಭ್ಯುದಯ ವಿವಿ ಒಡಂಬಡಿಕೆಯಲ್ಲಿ ಭಾಗವಹಿಸಿದ್ದ ಕುಲಪತಿಗಳೊಂದಿಗೆ  ಸದ್ಗುರು ಶ್ರೀ ಮಧುಸೂಧನ ಸಾಯಿ | Kannada Prabha

ಸಾರಾಂಶ

ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸುವ ದೃಷ್ಟಿಯಿಂದ ಬೋಧಕ ಸಿಬ್ಬಂದಿಗೆ ತರಬೇತಿ ನೀಡಲು ಮತ್ತು ಸಂಶೋಧನೆಗಳಿಗೆ ಉತ್ತೇಜಿಸಲು ಈ ಒಡಂಬಡಿಕೆ ಅನುಕೂಲವಾಗಲಿದೆ. ಸಹವರ್ತಿ ವಿವಿಗಳಲ್ಲಿ ಮಾನವ ಅಭ್ಯುದಯ ಚಿನ್ನದ ಪದಕ , ಮಾನವೀಯ ದೃಷ್ಟಿಯ ಮೌಲ್ಯಮಾಪನವನ್ನೂ ಈ ಸಹಯೋಗವು ಆರಂಭಿಸಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕದ 6 ವಿವಿಗಳೊಂದಿಗೆ ಶ್ರೀ ಸತ್ಯ ಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯವು ಒಡಂಬಡಿಕೆ ಮಾಡಿಕೊಂಡಿದೆ. ಈ ವಿವಿಗಳಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಮೌಲ್ಯ ಶಿಕ್ಷಣ ಘಟಕಗಳನ್ನು ಸ್ಥಾಪಿಸಲಿದೆ ಎಂದು ಸದ್ಗುರು ಶ್ರೀ ಮಧುಸೂಧನ ಸಾಯಿ ತಿಳಿಸಿದರು. ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿಗ್ರಾಮದಲ್ಲಿ ನಡೆದ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಒಡಂಬಡಿಕೆ ಪತ್ರಗಳ ವಿನಿಮಯ ನಂತರ ಅವರು ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸುವ ದೃಷ್ಟಿಯಿಂದ ಬೋಧಕ ಸಿಬ್ಬಂದಿಗೆ ತರಬೇತಿ ನೀಡಲು ಮತ್ತು ಸಂಶೋಧನೆಗಳಿಗೆ ಉತ್ತೇಜಿಸಲು ಈ ಒಡಂಬಡಿಕೆ ಅನುಕೂಲವಾಗಲಿದೆ ಎಂದರು.

ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣಸಹವರ್ತಿ ವಿವಿಗಳಲ್ಲಿ ಮಾನವ ಅಭ್ಯುದಯ ಚಿನ್ನದ ಪದಕ , ಮಾನವೀಯ ದೃಷ್ಟಿಯ ಮೌಲ್ಯಮಾಪನವನ್ನೂ ಈ ಸಹಯೋಗವು ಆರಂಭಿಸಲಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಜೊತೆಗೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ನಿರ್ಮಾಣಕ್ಕೂ ಈ ಸಹಯೋಗವು ಒತ್ತು ನೀಡಲಿದೆ ಎಂದು ತಿಳಿಸಿದರು

ಒಡಂಬಡಿಕೆ ಪತ್ರ ವಿನಿಮಯ

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಶ್ರೀಕಂಠ ಮೂರ್ತಿ ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಬಾಗಲಕೋಟೆ ವಿವಿಯ ಕುಲಪತಿ ಪ್ರೊ ಆನಂದ ದೇಶಪಾಂಡೆ, ಬೀದರ್ ವಿವಿಯ ಕುಲಪತಿ ಬಿ.ಎಸ್.ಬಿರಾದಾರ್, ಚಾಮರಾಜನಗರ ವಿವಿಯ ಕುಲಪತಿ ಎಂ.ಆರ್‌.ಗಂಗಾಧರ, ಹಾವೇರಿ ವಿವಿಯ ಕುಲಪತಿ ಪ್ರೊ.ತರಿಕೆರೆ ಸಿ.ತಾರಾನಾಥ್, ಹಾಸನ ವಿವಿಯ ಕುಲಪತಿ ಪ್ರೊ ಸುರೇಶ್ ಜಂಗಮಶೆಟ್ಟಿ ಹಾವೇರಿ ವಿವಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ವೀರಣ್ಣ ಚರಂತಿಮಠ ಅವರು ಒಡಂಬಡಿಕೆ ಪತ್ರಗಳನ್ನು ಪಡೆದುಕೊಂಡರು.

ಈ ವೇಳೆ ಕರ್ನಾಟಕದ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಹಾಸನ ವಿವಿ ಕುಲಪತಿ ಪ್ರೊ ತರಿಕೇರೆ ಸಿ.ತಾರಾನಾಥ್, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿವಿ ಕುಲಪತಿ ಪ್ರೊ ಶ್ರೀಕಂಠ ಮೂರ್ತಿ, ಬೀದರ್ ವಿವಿ ಕುಲಪತಿ ಬಿಎಸ್ ಬಿರಾದರ್, ಬಾಗಲಕೋಟೆ ವಿವಿ ಕುಲಪತಿ ಆನಂದ್ ದೇಶಪಾಂಡೆ, ವಿಶ್ರಾಂತ ಕುಲಪತಿ ಡಾ ಬಿ.ಎನ್.ನರಸಿಂಹಮೂರ್ತಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ವೀರಣ್ಣ ಚರಂತಿಮಠ, ಕೊಡಗು ವಿವಿ ಕುಲಪತಿ ಪ್ರೊ ಅಶೋಕ್ ಆಲೂರು, ಹಾವೇರಿ ವಿವಿ ಕುಲಪತಿ ಪ್ರೊ ಸುರೇಶ್ ಜಂಗಮಶೆಟ್ಟಿ, ಚಾಮರಾಜನಗರ ವಿವಿ ಕುಲಪತಿ ಪ್ರೊ ಎಂ.ಆರ್. ಗಂಗಾಧರ್ ಮತ್ತಿತರರು ಇದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ