ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ತುಳುನಾಡಿನ ಜೀವನ ಪದ್ಧತಿಯಲ್ಲಿ ಅಳವಡಿಸಿದ ಮೂಲ ನಂಬಿಕೆಗಳನ್ನು ಕಡೆಗಣಿಸಿದ ಪರಿಣಾಮ ಆತ್ಮಹತ್ಯೆ, ವಿಚ್ಚೇದನ , ಕೌಟುಂಬಿಕ ಕಲಹದಂತಹ ಸಾಮಾಜಿಕ ಕ್ಲೇಶಗಳು ವ್ಯಾಪಿಸಿವೆ. ದೈವರಾಧನೆಯಲ್ಲಿನ ನಿಷ್ಠೆ ಮತ್ತು ಭಕ್ತಿ , ಗತಿಸಿದ ಕುಟುಂಬದ ಹಿರಿಯರನ್ನು ಸ್ಮರಿಸುವ ನಡೆಗಳು ಮರೆಯಾದಂತೆ ಯುವಜನಾಂಗಕ್ಕೆ ತಿಳಿಯಪಡಿಸುವ ಕಾರ್ಯ ಸರ್ವತ್ರ ನಡೆದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಬಹುದೆಂದು ಸುಮಂಗಲ ಸಹಕಾರಿ ಸಂಸ್ಥೆ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಹೇಳಿದ್ದಾರೆ.ಉಪ್ಪಿನಂಗಡಿ ಗಾಣಿಗರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಪುತ್ತೂರು ತಾಲೂಕು ಸಫಲಿಗರ ಯಾನೆ ಗಾಣಿಗರ ಸಂಘದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಪ್ರೀತಿಸಿ , ಮುದ್ದಿಸಿ ಆದರೆ ದುರ್ಬಲರನ್ನಾಗಿಸಬೇಡಿ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮಾನಸಿಕ ಹಾಗೂ ದೈಹಿಕವಾಗಿ ಸಾಮರ್ಥ್ಯ ವೃದ್ಧಿಸುವಂತೆ ಬೆಳೆಸಬೇಕೆಂದು ಕರೆ ನೀಡಿದ ಅವರು, ಸಮಾಜದಲ್ಲಿ ಸಂಘಟಿತರಾಗಿ ಬಾಳುವಂತೆ ಕರೆ ನೀಡಿದರು.ಕೀರ್ತೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಮುಂದಾಳು ದಿನೇಶ್ ನಟ್ಟಿಬೈಲ್, ಸಫಲ ಸಹಕಾರಿ ಸಂಘದ ನಿರ್ದೇಶಕ ಭಾಸ್ಕರ ಎಡಪದವು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಸಂಘಟನೆಗಳಿಗೆ ಮಹತ್ವವಿದ್ದು, ಶಕ್ತಿ ಇದ್ದಲ್ಲಿ ಗೌರವ ಲಭಿಸುವುದರಿಂದ ಸಮಾಜದ ಬಂಧುಗಳು ಸಾಂಘಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಘದ ಕಾರ್ಯಚಟುವಟಿಕೆಗೆ ದುಡಿಯುವ ಕೃಷಪ್ಪ ನೆಕ್ಕರೆ , ಹಾಗೂ ಗಾಣಿಗ ಸಮಾಜದ ಕುಲ ಕಸುಬಾದ ಗಾಣದ ಎಣ್ಣೆಯ ಉದ್ಯಮವನ್ನು ಪ್ರಾರಂಭಿಸಿದ ಮಹೇಶ್ ಕುಂಟಿನಿ ಹಾಗೂ ರಾಜೇಶ್ ಕುಂಟಿನಿ ಅವರನ್ನು ಗೌರವಿಸಲಾಯಿತು.ಸಂಘದ ಅಧ್ಯಕ್ಷ ಹರಿರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಕುಂಟಿನಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ರಾಜೇಶ್ ಕುಕ್ಕೆಶ್ರೀ ನಿರೂಪಿಸಿದರು. ನಿತೇಶ್ ಗಾಣಿಗ, ಪ್ರಶಾಂತ್ ನೆಕ್ಕಿಲಾಡಿ, ದೇವರಾಜ್, ಕಿರಣ್ ಹರಿನಗರ, ಅಕ್ಷಯ್ ಕುಮಾರ್ ಹರಿನಗರ, ಮಂಜುನಾಥ್, ರಮೇಶ್ ನಟ್ಟಿಬೈಲ್, ಚೇತನ್, ಸುನಿಲ್ ಸಂಗಮ್, ಶಶಿಕಲಾ ಭಾಸ್ಕರ್, ಶೋಭಾ ದಯಾನಂದ್, ಬಿ ಕೆ ಆನಂದ್, ಮೋಹನ್ ನಗರ, ರಾಮಣ್ಣ ಸಪಲ್ಯ, ಅನೀಶ್ ನೆಕ್ಕಿಲಾಡಿ, ಅನುಪಮ ರವಿಶಂಕರ್, ಶಿವಕುಮಾರ್, ವಿನೋದ್ ಕುಮಾರ್, ಕೃಷ್ಣ ನೆಕ್ಕಿಲಾಡಿ , ಯು. ರಾಧಾ, ನಾರಾಯಣ , ರಂಜಿನಿ ಚಂದ್ರಶೇಖರ್ ಮೊದಲಾದವರು ಭಾಗವಹಿಸಿದ್ದರು.ಸಮಾಜದ ಗಾಯಕಿಯರಾದ ಮೋಹಿತ, ವೈಶಾಲಿ, ನಿಧಿ, ವಿನೋದ್ ಗಾಣಿಗ ಕುದ್ರಡ್ಕ ಮೊದಲಾದವರಿಂದ ಗೀತಾಗಾಯನ ಕಾರ್ಯಕ್ರಮ ನಡೆಯಿತು.