ಉಡುಪಿಯಲ್ಲಿ ಶ್ರೀಶಂಕರ ವಿಜಯೋತ್ಸವ: ಪೂರ್ವಭಾವಿ ಸಭೆ

KannadaprabhaNewsNetwork |  
Published : Sep 30, 2026, 02:45 AM IST
ಉಡುಪಿಯಲ್ಲಿ ನಡೆಯುವ ಶಂಕರವಿಜಯೋತ್ಸವದ ಪೂರ್ವಭಾವಿ ಸಭೆ ಮಂಗಳೂರಿನಲ್ಲಿ ನಡೆಯಿತು | Kannada Prabha

ಸಾರಾಂಶ

ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತವರ ಶಿಷ್ಯ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಮಾರ್ಗದರ್ಶನದೊಂದಿಗೆ ಡಿ. 28, 29 ಮತ್ತು 30ರಂದು ಉಡುಪಿಯಲ್ಲಿ ಶ್ರೀಶಂಕರ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪೂರ್ವಸಿದ್ಧತಾ ಸಭೆ ನಗರದ ರಥಬೀದಿಯ ಬಾಳಂಭಟ್ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತವರ ಶಿಷ್ಯ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಮಾರ್ಗದರ್ಶನದೊಂದಿಗೆ ಡಿ. 28, 29 ಮತ್ತು 30ರಂದು ಉಡುಪಿಯಲ್ಲಿ ಶ್ರೀಶಂಕರ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪೂರ್ವಸಿದ್ಧತಾ ಸಭೆ ನಗರದ ರಥಬೀದಿಯ ಬಾಳಂಭಟ್ ಸಭಾಂಗಣದಲ್ಲಿ ನಡೆಯಿತು.

ಶೃಂಗೇರಿ ಶ್ರೀಮಠದ ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ಎಂಜಿಎಂ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಉಡುಪಿ ಮತ್ತು ಕುಂದಾಪುರಗಳಲ್ಲಿ ಸಭೆ ನಡೆಸಲಾಗಿದ್ದು, ಸಮಸ್ತ ಶಾಂಕರ ತತ್ವಾನುಯಾಯಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.ಡಿ.28ರಂದು ಸಂಜೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಉಡುಪಿಗೆ ಆಗಮಿಸಲಿದ್ದು, ಬನ್ನಂಜೆ ನಾರಾಯಣ ಗುರು ಮಂದಿರದಿಂದ ಎಂಜಿಎಂ ಕಾಲೇಜುವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಶ್ರೀಶಂಕರಾಚಾರ್ಯರ ಜೀವನ ಚರಿತ್ರೆ ಸಾರುವ ಟ್ಯಾಬ್ಲೊಗಳ ಸಹಿತ ವಿವಿಧ ದೇವಳಗಳು ಹಾಗೂ ಧಾರ್ಮಿಕ ಕೇಂದ್ರಗಳ ಟ್ಯಾಬ್ಲೊಗಳು, ಭಜನಾ ತಂಡಗಳು, ವಾದ್ಯ ಮೇಳಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ.

ಡಿ.29ರಂದು ಗಣಹೋಮ, ಶಾಂಕರ ಸ್ತೋತ್ರಗಳು, ಲಲಿತಾ ಸಹಸ್ರನಾಮ, ಸ್ತೋತ್ರ ತ್ರಿವೇಣಿ ಸಮರ್ಪಣೆ ಇತ್ಯಾದಿ ನಡೆಯಲಿದೆ. ಜೊತೆಗೆ ಶ್ರೀಶಂಕರಾಚಾರ್ಯರ ಕುರಿತು ಉಪನ್ಯಾಸಗಳು, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಸಂತ ಸಮಾಗಮ ಇತ್ಯಾದಿ ನಡೆಯಲಿದ್ದು, ಸುಮಾರು 50 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದವರು ವಿವರಿಸಿದರು.

ಶಾಂಕರ ತತ್ವ ಪ್ರಸಾರ ಅಭಿಯಾನದ ಉಡುಪಿ ಜಿಲ್ಲಾ ಸಂಚಾಲಕ ವಿಶ್ವನಾಥ ಶಾನುಭಾಗ್, ಡಾ. ಸತ್ಯಕೃಷ್ಣ ಭಟ್ ಮೊದಲಾದವರಿದ್ದರು. ಶೃಂಗೇರಿ ಮಠದ ಮಂಗಳೂರು ಪ್ರಾಂತೀಯ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಸ್ವಾಗತಿಸಿದರು. ಶಾಂಕರ ತತ್ವಾನುಯಾಯಿ ವಿವಿಧ ಸಮುದಾಯಗಳ ಪ್ರಮುಖರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಎಲ್‌ಇ ಫಿಸಿಯೋಥೆರಪಿ ವಿಭಾಗಕ್ಕೆ ಪ್ರಶಸ್ತಿ ಗೌರವ
ಸರ್ಕಾರ ಮಾಡಲಾಗದ ಸಾಧನೆ ಎಕ್ಸೆಲ್ ವಿದ್ಯಾ ಸಂಸ್ಥೆ ಮಾಡಿವೆ: ಭೋಜೆ ಗೌಡ