ರಾಜ್ಯಕ್ಕೆ 4ನೇ ಸ್ಥಾನದಲ್ಲಿ ಶ್ರೀ ಸಿದ್ಧಗಂಗಾ ಪಿಯು ಕಾಲೇಜು

KannadaprabhaNewsNetwork |  
Published : Apr 09, 2025, 12:30 AM IST
ಕ್ಯಾಪ್ಷನ8ಕೆಡಿವಿಜಿ55 ಎನ್.ರವಿಕಿರಣ......ಕ್ಯಾಪ್ಷನ8ಕೆಡಿವಿಜಿ56 ಎಲ್.ಮನೋಜ್.......ಕ್ಯಾಪ್ಷನ8ಕೆಡಿವಿಜಿ57 ಆರ್.ವಿನಯಕುಮಾರ.......ಕ್ಯಾಪ್ಷನ8ಕೆಡಿವಿಜಿ58 ಕೃತಿಕ ಕದಂ.......ಕ್ಯಾಪ್ಷನ8ಕೆಡಿವಿಜಿ59 ಆರ್.ಚೇತನ.......ಕ್ಯಾಪ್ಷನ8ಕೆಡಿವಿಜಿ60 ಆರ್.ಅಜಯಕುಮಾರ | Kannada Prabha

ಸಾರಾಂಶ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆ ನಗರದ ಸಿದ್ಧಗಂಗಾ ಪಿಯು ಕಾಲೇಜು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಮತ್ತೊಮ್ಮೆ ತನ್ನ ಶೈಕ್ಷಣಿಕ ಸಾಧನೆಯ ಇತಿಹಾಸ ರಚಿಸಿದೆ.

- ಎನ್.ರವಿಕಿರಣ ಕಾಲೇಜಿಗೆ ಪ್ರಥಮ, ಜಿಲ್ಲೆಗೆ ದ್ವಿತೀಯ । ಆಡಳಿತ ಮಂಡಳಿ ಅಭಿನಂದನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆ ನಗರದ ಸಿದ್ಧಗಂಗಾ ಪಿಯು ಕಾಲೇಜು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಮತ್ತೊಮ್ಮೆ ತನ್ನ ಶೈಕ್ಷಣಿಕ ಸಾಧನೆಯ ಇತಿಹಾಸ ರಚಿಸಿದೆ.

600ಕ್ಕೆ 595 ಅಂಕ ಗಳಿಸಿದ ಎನ್.ರವಿಕಿರಣ ಕನ್ನಡ 100, ಇಂಗ್ಲಿಷ್‌ 97, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 99, ಜೀವಶಾಸ್ತ್ರ 100, ಗಣಿತ 99 ಅಂಕಗಳನ್ನು ಗಳಿಸಿ, ಕಾಲೇಜಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಎಂ.ಎಸ್.ಎಸ್. ಸ್ಕಾಲರ್‌ಶಿಪ್‌ನಲ್ಲಿ 2 ವರ್ಷ ಉಚಿತ ವಿದ್ಯಾಭ್ಯಾಸ ಪಡೆದಿದ್ದಾರೆ ಎಂಬುದು ಉಲ್ಲೇಖನೀಯ.

ಉಳಿದಂತೆ ಹೆಚ್ಚು ಅಂಕ ಗಳಿಸಿರುವ, ಮನೋಜ್ ಎಲ್., ವಿನಯ್ ಕುಮಾರ್ ಆರ್., ಕೃತಿಕ ಕದಂ, ಚೇತನ ಆರ್., ಜೀವಿತ ಜೆ. ಇಟಗಿ, ಸ್ನೇಹಲ್ ಕೆ. ಕುಡ್ತೇಕರ್, ಸುಹಾಸ್ ಎಚ್., ಅಜಯ್ ಕುಮಾರ್ ಆರ್., ವಿವೇಕ ಅಂಗಡಿ ಎನ್.ಎಂ., ಲಕ್ಷ್ಮೀ ಎಂ., ಸಂಜನಾ ಎಂ.ಎಂ., ಚಂದನಾ ಜಿ.ವಿ., ಕರಿಬಸಮ್ಮ ಪಾನಿಯಪ್ಲ, ಶಿವಯೋಗಿ ಎಚ್.ಆರ್. ಈ ಎಲ್ಲ ವಿದ್ಯಾರ್ಥಿಗಳು ಕೂಡ ಎಂ.ಎಸ್.ಎಸ್. ಸ್ಕಾಲರ್ ಶಿಪ್‌ನಲ್ಲಿ ಓದಿರುತ್ತಾರೆ.

ಮನೋಜ್ ಎಲ್. 593, ವಿನಯ್ ಕುಮಾರ್ ಆರ್. 590, ಕೃತಿಕ ಕದಂ 589, ಚೇತನ ಆರ್. 585, ಜೀವಿತ ಜೆ. ಇಟಗಿ 585, ಸ್ನೇಹಲ್ ಕೆ. ಕುಡ್ತೇಕರ್ 585, ಸುಹಾಸ್ ಎಚ್. 585, ಅಜಯ್ ಕುಮಾರ್ ಆರ್. 582, ವಿವೇಕ ಅಂಗಡಿ ಎನ್.ಎಂ. 582, ಅಭಿನವ್ ಎಂ.ಎಸ್. 580, ಲಕ್ಷ್ಮೀ ಎಂ. 580, ಸುಮಂತ ಪಿ. 579, ರಕ್ಷಿತ ಕೆ. 579, ಸಂಜನಾ ಎಂ.ಎಂ. 579, ಚಂದನಾ ಜಿ.ವಿ. 578, ಕರಿಬಸಮ್ಮ ಪಾನಿಯಪ್ಲ 578, ಶಿವಯೋಗಿ ಎಚ್.ಆರ್. 577, ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಡಿಸ್ಟಿಂಕ್ಷನ್‌ನಲ್ಲಿ 236 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 320, ದ್ವಿತೀಯ ದರ್ಜೆಯಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿಗೆ 95.13% ಫಲಿತಾಂಶ ನೀಡಿದ್ದಾರೆ. ಕನ್ನಡ 13, ಸಂಸ್ಕೃತ 1, ಭೌತಶಾಸ್ತ್ರ 3, ರಸಾಯನ ಶಾಸ್ತ್ರ 2, ಗಣಿತ 8, ಜೀವಶಾಸ್ತ್ರ 18, ಕಂಪ್ಯೂಟರ್ ವಿಜ್ಞಾನ ಒಬ್ಬರು, 100ಕ್ಕೆ 100 ಅಂಕ ಗಳಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದಿಸಿದ್ದಾರೆ.

- - -

-8ಕೆಡಿವಿಜಿ55: ಎನ್.ರವಿಕಿರಣ

-8ಕೆಡಿವಿಜಿ56: ಎಲ್.ಮನೋಜ್

-8ಕೆಡಿವಿಜಿ57: ಆರ್.ವಿನಯಕುಮಾರ

-8ಕೆಡಿವಿಜಿ58: ಕೃತಿಕ ಕದಂ

-8ಕೆಡಿವಿಜಿ59: ಆರ್.ಚೇತನ

-8ಕೆಡಿವಿಜಿ60: ಆರ್.ಅಜಯಕುಮಾರ

- - -

-8ಕೆಡಿವಿಜಿ61: ಎನ್.ಎಂ.ವಿವೇಕ ಅಂಗಡಿ -8ಕೆಡಿವಿಜಿ62: ಎಂ.ಎಸ್.ಅಭಿನವ್

-8ಕೆಡಿವಿಜಿ63: ಎಂ.ಲಕ್ಷ್ಮೀ

-8ಕೆಡಿವಿಜಿ64: ಪಿ.ಸುಮಂತ್

-8ಕೆಡಿವಿಜಿ65: ಕೆ.ರಕ್ಷಿತ

-8ಕೆಡಿವಿಜಿ66: ಎಂ.ಎಂ.ಸಂಜನ

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ