ಶ್ರೀ ಸಿದ್ಧಾರೂಢರ 44ನೇ ವರ್ಷದ ತೆಪ್ಪೋತ್ಸವ

KannadaprabhaNewsNetwork |  
Published : Aug 31, 2026, 03:15 AM IST
30ಸದಬಚಸದಬಚದಚ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಸ್ಥಳೀಯ ಸಿದ್ಧಾರೂಢ ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಜಗದ್ಗುರು ಸಿದ್ಧಾರೂಢರ 97ನೇ ಪುಣ್ಯಾರಾಧನೆಯ ನಿಮಿತ್ಯ 44ನೇ ವರ್ಷದ ಜಲರಥೋತ್ಸವ(ತೆಪ್ಪೋತ್ಸವ)ವು ಶನಿವಾರ ಸಂಜೆ 6 ರಿಂದ 6-30 ಗಂಟೆವರೆಗೆ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸ್ಥಳೀಯ ಸಿದ್ಧಾರೂಢ ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಜಗದ್ಗುರು ಸಿದ್ಧಾರೂಢರ 97ನೇ ಪುಣ್ಯಾರಾಧನೆಯ ನಿಮಿತ್ಯ 44ನೇ ವರ್ಷದ ಜಲರಥೋತ್ಸವ(ತೆಪ್ಪೋತ್ಸವ)ವು ಶನಿವಾರ ಸಂಜೆ 6 ರಿಂದ 6-30 ಗಂಟೆವರೆಗೆ ಸಂಭ್ರಮದಿಂದ ಜರುಗಿತು.

ತೆಪ್ಪೋತ್ಸವದ ನಿಮಿತ್ತ ಬೆಳಗ್ಗೆ 8 ಗಂಟೆಗೆ ಸಿದ್ದಾರೂಢರ ಮೂರ್ತಿಗೆ ಅಭಿಷೇಕ, 10 ಗಂಟೆಗೆ ಪುರಸಭೆ ಮಾಜಿ ಸದಸ್ಯೆ ಸವಿತಾ ಹುರಕಡ್ಲಿ ಅವರಿಂದ ಮುತ್ತೈದೆಯರಿಗೆ ಉಡಿ ತುಂಬುವುದು, ನಂತರ ಹಿಪ್ಪರಗಿ, ಖಾನಟ್ಟಿ, ಬುದ್ನಿಪಿಡಿ, ಸಂಗಾನಟ್ಟಿ ಗ್ರಾಮಗಳ ಭಜನಾಮೇಳದವರಿಂದ ಭಜನಾ ಕಾರ್ಯಕ್ರಮಗಳು ಜರುಗಿದವು.

ತೆಪ್ಪೋತ್ಸವದ ಸಮಾರಂಭದ ಸಾನ್ನಿಧ್ಯವನ್ನು ಸಹಜಾನಂದ ಸ್ವಾಮಿಜಿ, ಅಧ್ಯಕ್ಷತೆಯನ್ನು ಘಟಪ್ರಭಾ ಭೀಮಾನಂದ ಸ್ವಾಮಿಜಿ, ಆಶ್ರಮದ ಉತ್ತರಾಧಿಕಾರಿ ಸೋಮನಾಥ ಸ್ವಾಮಿಜಿ ಸಮ್ಮುಖ ಸ್ಥಾನವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರನ್ನಬೆಳಗಲಿ ಸದಾಶಿವ ಗುರೂಜಿ, ಕಂಕನವಾಡಿ ಮಾರುತಿ ಶರಣರು, ಕೋಲೂರಿನ ಮಲ್ಲಪ್ಪ ಪೂಜಾರಿ ಶರಣರು, ಮಲ್ಲೇಶಪ್ಪ ಕಟಗಿ ಶರಣರು, ಚಿಕ್ಕಪಡಸಲಗಿಯ ಅಕ್ಕಮಹಾದೇವಿ, ಸ್ಥಳೀಯ ವಿದ್ಯಾವತಿತಾಯಿ, ಗದಗದ ಮುಕ್ತಾತಾಯಿ, ರೋಣದ ಶಿವಚೇತನಾತಾಯಿ, ಚಿಕ್ಕಲಗಿಯ ಕಲಾವತಿ ಹಿರೇಮಠ, ಘಟಪ್ರಭಾದ ಕಾತ್ಯಾಯಿನಿತಾಯಿ, ಹೊಸಕೋಟಿಯ ರತ್ನಮ್ಮಾತಾಯಿ, ಹುಣಶ್ಯಾಳದ ಚಂದ್ರಕಲಾತಾಯಿ, ಭಂಟನೂರಿನ ನೇತ್ರಾವತಿ ತಾಯಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಭಾಗವಹಿಸಿದ್ದರು.

ಸಂಜೆ 6-30ಕ್ಕೆ ಅಲಂಕೃತ ರಥದಲ್ಲಿನ ಸಿದ್ಧಾರೂಢರ ಮೂರ್ತಿಗೆ ನಗರ ಭೂಮಾಪನ ಅಧಿಕಾರಿ ಅಶೋಕ ನಾಯಕ ಅವರು ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿಶಾಲವಾದ ಕೆರೆಯಲ್ಲಿ ಜರುಗಿದ ಜಲರಥೋತ್ಸವದಲ್ಲಿ ಅಪಾರ ಭಕ್ತಾಧಿಗಳಿಂದ ಸಿದ್ಧಾರೂಢ ಮಹಾರಾಜಕೀ ಜೈ, ಸಿದ್ದಾರೂಢರ ಜೋಳಗಿ-ಜಗತ್ತಿಗೆಲ್ಲ ಹೋಳಗಿ ಎಂಬ ಜಯಘೋಷಗಳು ಮೊಳಗಿದವು.

ಸಿದ್ದಾರೂಢ ಟ್ರಸ್ಟ ಕಮಿಟಿ ಉಪಾಧ್ಯಕ್ಷ ಡಾ.ಬಿ.ಡಿ.ಸೋರಗಾಂವಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಜಿ ಅಲ್ಲಪ್ಪ ಗುಂಜಿಗಾವಿ, ಧರ್ಮದರ್ಶಿಗಳಾದ ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಚೇತನ ಹಾದಿಮನಿ, ಶ್ರೀಮಠದ ಸದ್ಭಕ್ತರಾದ ಜಿ.ಎಸ್.ಬರಗಿ, ಮನೋಹರ ಶಿರೋಳ, ಬಸವರಾಜ ಢಪಳಾಪೂರ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮಹಾಂತೇಶ ಘಟ್ನಟ್ಟಿ, ಎಸ್.ಕೆ.ಗಿಂಡೆ, ಶಿವಾನಂದ ಪಟ್ಟೇದ, ಚನ್ನಪ್ಪ ಚಂಡೋಲ, ಚನ್ನಪ್ಪ ಗೂಗಾಡ, ಸುಭಾಸ ನಾಯಕ, ಮಹೇಶ ಬಡಿಗೇರ, ಶಿವಲಿಂಗ ತೇಲಿ, ಕಲ್ಮೇಶ ಕುಂಬಾರ, ಹನಮಂತ ಹೂಗಾರ, ಶ್ರೀಕಾಂತ ಪರೀಟ, ಮಲ್ಲಪ್ಪ ಯಾದವಾಡ, ಮಹಾಲಿಂಗ ಕರೆಹೊನ್ನ, ಹಣಮಂತ ಮೀರಾಪಟ್ಟಿ, ಕುಮಾರ ಉಳ್ಳಾಗಡ್ಡಿ, ಸಿದ್ದು ಧಡೂತಿ, ಮಹಾಲಿಂಗ ಉಪ್ಪಾರ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌರಕಾರ್ಮಿಕರಿಗೆ ರಕ್ಷಾ ಬಂಧನ ಕಾರ್ಯಕ್ರಮ
ಸೆ.2ರಿಂದ ಎಐಯುಟಿಯುಸಿ ಅಹೋರಾತ್ರಿ ಧರಣಿ