ಅದ್ಧೂರಿಯಾಗಿ ನಡೆದ ಶ್ರೀವರಾಹನಾಥಸ್ವಾಮಿ ಕಲ್ಯಾಣೋತ್ಸವ

KannadaprabhaNewsNetwork |  
Published : Dec 02, 2025, 01:30 AM IST
1ಕೆಎಂಎನ್ ಡಿ35 | Kannada Prabha

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿಯ ಭೂ ವರಾಹನಾಥ ಕ್ಷೇತ್ರದಲ್ಲಿ ರೇವತಿ ನಕ್ಷತದ ವಿಶೇಷ ಪೂಜೆ, ಅಭಿಷೇಕ ಮತ್ತು ಭೂದೇವಿ ಸಮೇತನಾಗಿರುವ ವರಾಹನಾಥ ಸ್ವಾಮಿ ಕಲ್ಯಾಣೋತ್ಸವ ಮತ್ತಿತರ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಕಲ್ಲಹಳ್ಳಿಯ ಭೂ ವರಾಹನಾಥ ಕ್ಷೇತ್ರದಲ್ಲಿ ರೇವತಿ ನಕ್ಷತದ ವಿಶೇಷ ಪೂಜೆ, ಅಭಿಷೇಕ ಮತ್ತು ಭೂದೇವಿ ಸಮೇತನಾಗಿರುವ ವರಾಹನಾಥ ಸ್ವಾಮಿ ಕಲ್ಯಾಣೋತ್ಸವ ಮತ್ತಿತರ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು.

ಮೈಸೂರಿನ ಪರಕಾಲ ಮಠದ ಸುಪರ್ಧಿಗೆ ಸೇರಿದ ಭೂ ವರಾಹನಾಥ ಕ್ಷೇತ್ರಾಭಿವೃದ್ಧಿ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್ ನೇತೃತ್ವದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಬೆಳಗ್ಗೆ 9 ಗಂಟೆಗೆ ರೇವತಿ ನಕ್ಷತ್ರ ಪೂಜೆ ಆರಂಭವಾಯಿತು. ಭೂವರಾಹನಾಥನಿಗೆ ಹಾಲು, ಮೊಸರು, ಜೇನು, ಎಳನೀರು, ಅರಿಶಿಣ, ಕುಂಕುಮ, ಗಂಧ ಸೇರಿದಂತೆ ಹಲವು ವಿಧಿ ವಿಧಾನಗಳ ಮೂಲಕ ವಿಶೇಷ ಅಭಿಷೇಕ ನಡೆಸಲಾಯಿತು. ನಂತರ ಬಗೆಬಗೆಯ ಪುಷ್ಪಗಳಿಂದ ಪುಷ್ಪಾಭಿಷೇಕ ನಡೆಸಲಾಯಿತು.

ಅಭಿಷೇಕ ಪೂಜಾ ಕಾರ್ಯಗಳ ಆರಂಭಕ್ಕೂ ಮುನ್ನ ಸ್ವಾಮಿಯ ಉತ್ವವ ಮೂರ್ತಿ ಮೆರವಣಿಗೆ ನಡೆಯಿತು. ಈ ವೇಳೆ ರಾರು ಭಕ್ತರು ಗೋವಿಂದ ಗೋವಿಂದ ಎನ್ನುತ್ತಾ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದರು.

ಹನುಮ ಜಯಂತಿಗೆ ಸಿದ್ಧತೆ, ದೀಪಾಲಂಕಾರ

ಮೇಲುಕೋಟೆ:

ಹೋಬಳಿ ವಿವಿಧ ಗ್ರಾಮಗಳ ಹನುಮ ದೇಗುಲಗಳಲ್ಲಿ ಹನುಮ ಜಯಂತಿ ಆಚರಣೆಗೆ ಸಿದ್ಧತೆ ನಡೆದಿದೆ.

ಪಾಂಡವಪುರ ತಾಲೂಕು ಬನಘಟ್ಟ, ಬೆಳ್ಳಾಳೆ ಹೊಸೂರು ಗೇಟ್ ಆಂಜನೇಯನ ದೇಗುಲಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ. ದೇವಾಲಯ ಇರುವ ಹೆದ್ದಾರಿಯ ರಸ್ತೆ ಇಕ್ಕೆಲಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಿ ಭಕ್ತರ ಕಣ್ಮನ ಸೆಳೆಯುತ್ತಿವೆ. ಶ್ರೀರಾಮ ಆಂಜನೇಯ, ವೆಂಕಟೇಶ್ವರನ ಬೃಹತ್ ವಿದ್ಯುತ್‌ ದೀಪಗಳ ಕಟೌಟ್‌ಗಳು ಕಂಗೊಳಿಸುತ್ತಿವೆ.

ಯುವಕರು ಗ್ರಾಮಸ್ಥರೇ ಸೇರಿ ಮಾಡುತ್ತಿರುವ ಹನುಮನ ಹಬ್ಬದಲ್ಲಿ ಆಂಜನೇಯನಿಗೆ ಅಭಿಷೇಕ ರಾಮತಾರಕ ಹೋಮ ಮತ್ತು ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಐತಿಹಾಸಿಕ ಪೇಟೆ ಆಂಜನೇಯ ಪಾರ್ವಟೆ ಮಂಟಪದ ಬಳಿಯ ಕಾರ್ಯಸಿದ್ಧಿ ಹನುಮನ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಮೇಲುಕೋಟೆ ಸುತ್ತಮುತ್ತಲ ವಿವಿಧ ಹನುಮನ ದೇಗುಲದಲ್ಲಿ ಜಯಂತಿಯನ್ನು ಅದ್ಧೂರಿಯಾಗಿ ನಡೆಸಲು ಇಡೀಗ್ರಾಮಗಳೇ ಸಜ್ಜುಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ